
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ (Gilli Nata) ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಎಲ್ಲರಿಗೂ ಠಕ್ಕರ್ ಕೊಡುತ್ತಾ ಇದ್ದಾರೆ. ಅವರು ಇತ್ತೀಚೆಗೆ ಓವರ್ ಕಾನ್ಫಿಡೆನ್ಸ್ನಿಂದ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.
ಗಿಲ್ಲಿ ನಟ ಅವರು ಸಾಕಷ್ಟು ಹಾಸ್ಯ ಶೋಗಳನ್ನು ಮಾಡಿ ಬಂದವರು. ಬಿಗ್ ಬಾಸ್ನಲ್ಲಿ ಏ1 ಮನರಂಜನೆ ನೀಡುತ್ತಿದ್ದಾರೆ. ಅವರ ಆಟ ಯಾವಾಗಲೂ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರ ಆತ್ಮಸ್ಥೈರ್ ಮತ್ತಷ್ಟು ಹೆಚ್ಚಿದೆ. ಅವರು ಮತ್ತಷ್ಟು ಕಾನ್ಫಿಡೆನ್ಸ್ನಿಂದ ಆಟ ಆಡುತ್ತಿದ್ದಾರೆ. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿದೆ.
ಗಿಲ್ಲಿ ನಟ ಅವರು ಕೆಲವು ಗಂಭೀರ ಸಮಯದಲ್ಲೂ ಕೀಟಲೆ ಮಾಡಲು ಹೋಗುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಪದೇ ಪದೇ ಅವರ ಮೇಲೆ ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಗುತ್ತಿದೆ. ನವೆಂಬರ್ 7ರ ಎಪಿಸೋಡ್ನಲ್ಲಿ ಗಿಲ್ಲಿ ನಟ ಮಾಡಿದ ಒಂದು ಕಿತಾಪತಿಯಿಂದ ಅವರ ಇಡೀ ತಂಡ ಸೋಲುವಂತೆ ಆಯಿತು. ಇದರಿಂದ ಅವರು ಕಳಪೆ ಕೂಡ ಪಡೆದರು. ಇನ್ನು ಕಾವ್ಯಾ ಜೊತೆಗಿನ ಗೆಳೆತನ ಅವರ ಆಟಕ್ಕೆ ನಿಧಾನಕ್ಕೆ ಪೆಟ್ಟು ಕೊಡುತ್ತಿದೆ. ಮುಂದೊಂದು ದಿನ ಅದು ಅವರ ದೌರ್ಬಲ್ಯವಾಗಿ ಬದಲಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ಗಿಲ್ಲಿ ನಟ ಅವರು ಕೆಲವು ಸೂಕ್ಷ್ಮ ವಿಚಾರಗಳನ್ನು ಅರಿತುಕೊಳ್ಳದೇ ನೋವು ಮಾಡುತ್ತಾರೆ ಎಂಬ ಮಾತಿದೆ. ಇದು ಕೆಲವರಿಗೆ ನಿಜ ಎನಿಸಿದೆ. ಸುದೀಪ್ ಅವರು ಈ ವಿಚಾರವನ್ನು ಗಿಲ್ಲಿಗೆ ತಿಳಿಸಿ ಹೇಳಬೇಕು ಎಂಬ ಬೇಡಿಕೆಯನ್ನು ಕೆಲವರು ಇಟ್ಟಿದ್ದಾರೆ. ದೊಡ್ಮನೆಯಲ್ಲಿ ತಾವು ಆಡುತ್ತಿರುವುದು ಯಾವ ರೀತಿ ಕಾಣಿಸುತ್ತದೆ ಎಂಬ ಪರಿಜ್ಞಾನ ಯಾರಿಗೂ ಇರೋದಿಲ್ಲ. ಹೊರಗಿನವರು ಬಂದು ಆ ಬಗ್ಗೆ ಹೇಳಿದರೆ ಮಾತ್ರ ಅದರ ಬಗ್ಗೆ ತಿಳಿಯುತ್ತದೆ.
ಇದನ್ನೂ ಓದಿ: ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ಈ ಬಾರಿ ರೇಸ್ನಲ್ಲಿ ಮುಂದೆ ಇರೋದು ಗಿಲ್ಲಿ ನಟ. ಅವರೇ ಗೆಲ್ಲೋದು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಅವರು ಆಟ ಹಾಳು ಮಾಡಿಕೊಂಡರೆ ಆ ಗೆಲುವು ಮತ್ತೊಬ್ಬರ ಪಾಲಾಗಲಿದೆ ಎಂಬುದು ಅಭಿಮಾನಿಗಳ ಆತಂಕ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Sat, 8 November 25