‘ಬಿಗ್ ಬಾಸ್ ಗೆಲ್ಲೋದು ಗಿಲ್ಲಿ’; ಕಾನ್ಫಿಡೆನ್ಸ್ನಲ್ಲಿ ಭವಿಷ್ಯ ನುಡಿದ ಮಲ್ಲಮ್ಮ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಅವರ ಪ್ರದರ್ಶನ ಗಮನ ಸೆಳೆದಿದೆ. ಅವರ ಹಾಸ್ಯಭರಿತ ಮಾತು ಮತ್ತು ಮನರಂಜನೆಯಿಂದ ಮಲ್ಲಮ್ಮ ಸಹ ಗಿಲ್ಲಿ ವಿನ್ನರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. 40 ದಿನಗಳು ಪೂರ್ಣಗೊಂಡರೂ ಗಿಲ್ಲಿ ಅವರ ಆಟ ಎಲ್ಲರಿಗಿಂತ ಉತ್ತಮವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗಾಗಲೇ 40 ದಿನಗಳು ಪೂರ್ಣಗೊಂಡಿವೆ. ಈ ಸೀಸನ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಗಿಲ್ಲಿ ಅವರ ಆಟ ನೋಡಿದರೆ ಅವರೇ ಗೆಲ್ಲೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ, ಇನ್ನೂ ಕೆಲವರಿಗೆ ಕಠಿಣ ಸ್ಪರ್ಧೆ ನೀಡುವ ಪ್ರಯತ್ನ ಮಾಡುತ್ತಿದ್ದಾರಾದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಳೆದ ವಾರ ಬಿಗ್ ಬಾಸ್ನಿಂದ ಹೊರ ಬಂದ ಮಲ್ಲಮ್ಮ ಅವರು ಗಿಲ್ಲಿ (Gilli Nata) ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಹಾಸ್ಯ ಮಾಡುತ್ತಾರೆ. ಮಾತನಾಡಬೇಕು ಎನ್ನುವ ಪರಿಸ್ಥಿತಿ ಬಂದಾಗ ಅವರು ಮಾತನಾಡುತ್ತಾರೆ. ಗಿಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಆಡುತ್ತಿದ್ದಾರೆ. ಭರಪೂರ ಮನರಂಜನೆ ನೀಡುತ್ತಿದ್ದಾರೆ. ಮಲ್ಲಮ್ಮ ಅವರಿಗೂ ಗಿಲ್ಲಿ ಆಟದ ಮೇಲೆ ನಂಬಿಕೆ ಮೂಡಿದೆ. ಹೀಗಾಗಿ, ಗಿಲ್ಲಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಗ್ ಬಾಸ್ ಪೂರ್ಣಗೊಂಡು ಹೊರ ಬಂದ ಬಳಿಕ ಮಲ್ಲಮ್ಮ ಅವರು ಸಾಕಷ್ಟು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಶನದ ವೇಳೆ ಅವರು ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರಿಗೆ ಬಿಗ್ ಬಾಸ್ ಗೆಲ್ಲೋದು ಯಾರು ಎಂಬ ಪ್ರಶ್ನೆಯೂ ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಗಿಲ್ಲಿ ಹೆಸರು ತೆಗೆದುಕೊಂಡರು.
‘ಗಿಲ್ಲಿ ಬಿಗ್ ಬಾಸ್ ಗೆಲ್ಲುತ್ತಾನೆ ಅನಿಸುತ್ತಿದೆ. ಚೆನ್ನಾಗಿ ಕಾಮಿಡಿ ಮಾಡ್ತಾನೆ. ಎಲ್ಲರಿಗೂ ಉತ್ತರ ಕೊಡ್ತಾನೆ’ ಎಂದು ಮಲ್ಲಮ್ಮ ಹೇಳಿದರು. ಮಲ್ಲಮ್ಮ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ. ಯಾರನ್ನಾದರೂ ಒಬ್ಬರನ್ನು ಕರೆತರಬೇಕು ಎಂದರೆ ಯಾರನ್ನು ಕರೆದು ತರುತ್ತೀರಿ ಎಂದು ಕೇಳಿದಾಗ ಮಲ್ಲಮ್ಮ ಅವರು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡಿದ್ದರು.
ಇದನ್ನೂ ಓದಿ: ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ
ಮಲ್ಲಮ್ಮ ಅವರು ದೊಡ್ಮನೆಯಲ್ಲಿ ಐದು ವಾರಗಳ ಕಾಲ ಇದ್ದರು. ಆಟವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ಸ್ವಲ್ಪ ಎಡವಿದರು. ಹೀಗಾಗಿ, ಐದನೇ ವಾರಕ್ಕೆ ಅವರು ದೊಡ್ಮನೆಯಿಂದ ಹೊರಕ್ಕೆ ಬರಬೇಕಾದ ಪರಿಸ್ಥಿತಿ ಬಂತು. ಅವರು ಗಿಲ್ಲಿ ಪರವಾಗಿ ಮಾತನಾಡಿದ್ದು ಅನೇಕರಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




