AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓವರ್​ ಕಾನ್ಫಿಡೆನ್ಸ್​ನಲ್ಲಿ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಗಿಲ್ಲಿ? ವೀಕ್ಷಕರಿಗೆ ಮೂಡಿದೆ ಅನುಮಾನ

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ಉತ್ತಮವಾಗಿ ಆಡುತ್ತಿದ್ದು, ಗೆಲುವಿನ ಪ್ರಬಲ ಸ್ಪರ್ಧಿ. ಆದರೆ, ಇತ್ತೀಚೆಗೆ ಅವರ ಅತಿ ವಿಶ್ವಾಸ ಆಟವನ್ನು ಹಾಳುಮಾಡುತ್ತಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಮನೆಯವರಿಗೆ ಇಷ್ಟವಾಗದ ಕೀಟಲೆ, ತಂಡದ ಸೋಲಿಗೆ ಕಾರಣವಾದ ಘಟನೆಗಳು ಇದಕ್ಕೆ ಪುಷ್ಠಿ ನೀಡಿದೆ. ಸುದೀಪ್ ಈ ಬಗ್ಗೆ ಸಲಹೆ ನೀಡುವಂತೆ ವೀಕ್ಷಕರು ಬಯಸಿದ್ದಾರೆ.

ಓವರ್​ ಕಾನ್ಫಿಡೆನ್ಸ್​ನಲ್ಲಿ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಗಿಲ್ಲಿ? ವೀಕ್ಷಕರಿಗೆ ಮೂಡಿದೆ ಅನುಮಾನ
ಗಿಲ್ಲಿ ನಟ
ರಾಜೇಶ್ ದುಗ್ಗುಮನೆ
|

Updated on:Nov 08, 2025 | 7:43 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ (Gilli Nata) ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಎಲ್ಲರಿಗೂ ಠಕ್ಕರ್ ಕೊಡುತ್ತಾ ಇದ್ದಾರೆ. ಅವರು ಇತ್ತೀಚೆಗೆ ಓವರ್ ಕಾನ್ಫಿಡೆನ್ಸ್​ನಿಂದ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.

ಗಿಲ್ಲಿ ನಟ ಅವರು ಸಾಕಷ್ಟು ಹಾಸ್ಯ ಶೋಗಳನ್ನು ಮಾಡಿ ಬಂದವರು. ಬಿಗ್ ಬಾಸ್​ನಲ್ಲಿ ಏ1 ಮನರಂಜನೆ ನೀಡುತ್ತಿದ್ದಾರೆ. ಅವರ ಆಟ ಯಾವಾಗಲೂ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರ ಆತ್ಮಸ್ಥೈರ್ ಮತ್ತಷ್ಟು ಹೆಚ್ಚಿದೆ. ಅವರು ಮತ್ತಷ್ಟು ಕಾನ್ಫಿಡೆನ್ಸ್​ನಿಂದ ಆಟ ಆಡುತ್ತಿದ್ದಾರೆ. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿದೆ.

ಗಿಲ್ಲಿ ನಟ ಅವರು ಕೆಲವು ಗಂಭೀರ ಸಮಯದಲ್ಲೂ ಕೀಟಲೆ ಮಾಡಲು ಹೋಗುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಪದೇ ಪದೇ ಅವರ ಮೇಲೆ ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಗುತ್ತಿದೆ. ನವೆಂಬರ್ 7ರ ಎಪಿಸೋಡ್​ನಲ್ಲಿ ಗಿಲ್ಲಿ ನಟ ಮಾಡಿದ ಒಂದು ಕಿತಾಪತಿಯಿಂದ ಅವರ ಇಡೀ ತಂಡ ಸೋಲುವಂತೆ ಆಯಿತು. ಇದರಿಂದ ಅವರು ಕಳಪೆ ಕೂಡ ಪಡೆದರು. ಇನ್ನು ಕಾವ್ಯಾ ಜೊತೆಗಿನ ಗೆಳೆತನ ಅವರ ಆಟಕ್ಕೆ ನಿಧಾನಕ್ಕೆ ಪೆಟ್ಟು ಕೊಡುತ್ತಿದೆ. ಮುಂದೊಂದು ದಿನ ಅದು ಅವರ ದೌರ್ಬಲ್ಯವಾಗಿ ಬದಲಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.

ಗಿಲ್ಲಿ ನಟ ಅವರು ಕೆಲವು ಸೂಕ್ಷ್ಮ ವಿಚಾರಗಳನ್ನು ಅರಿತುಕೊಳ್ಳದೇ ನೋವು ಮಾಡುತ್ತಾರೆ ಎಂಬ ಮಾತಿದೆ. ಇದು ಕೆಲವರಿಗೆ ನಿಜ ಎನಿಸಿದೆ. ಸುದೀಪ್ ಅವರು ಈ ವಿಚಾರವನ್ನು ಗಿಲ್ಲಿಗೆ ತಿಳಿಸಿ ಹೇಳಬೇಕು ಎಂಬ ಬೇಡಿಕೆಯನ್ನು ಕೆಲವರು ಇಟ್ಟಿದ್ದಾರೆ. ದೊಡ್ಮನೆಯಲ್ಲಿ ತಾವು ಆಡುತ್ತಿರುವುದು ಯಾವ ರೀತಿ ಕಾಣಿಸುತ್ತದೆ ಎಂಬ ಪರಿಜ್ಞಾನ ಯಾರಿಗೂ ಇರೋದಿಲ್ಲ. ಹೊರಗಿನವರು ಬಂದು ಆ ಬಗ್ಗೆ ಹೇಳಿದರೆ ಮಾತ್ರ ಅದರ ಬಗ್ಗೆ ತಿಳಿಯುತ್ತದೆ.

ಇದನ್ನೂ ಓದಿ: ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್

ಈ ಬಾರಿ ರೇಸ್​ನಲ್ಲಿ ಮುಂದೆ ಇರೋದು ಗಿಲ್ಲಿ ನಟ. ಅವರೇ ಗೆಲ್ಲೋದು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಅವರು ಆಟ ಹಾಳು ಮಾಡಿಕೊಂಡರೆ ಆ ಗೆಲುವು ಮತ್ತೊಬ್ಬರ ಪಾಲಾಗಲಿದೆ ಎಂಬುದು ಅಭಿಮಾನಿಗಳ ಆತಂಕ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Sat, 8 November 25

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ