ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ

Bigg Boss Kannada: ಬಿಗ್ ಬಾಸ್ ಕನ್ನಡ 10 ಮನೆಯಲ್ಲಿ ಜಾನ್ವಿ ಗೌಡ ಅಶ್ವಿನಿ ಗೌಡರ ನೆರಳಿನಲ್ಲಿ ಆಡುತ್ತಿದ್ದಾರೆಂಬ ಮಾತು ಕೇಳಿಬಂದಿದೆ. ಇದು ನಮ್ರತಾ ಗೌಡ ವಿನಯ್ ಗೌಡರ ವಿಷಯವನ್ನೇ ನೆನಪಿಸುತ್ತದೆ. ವೈಯಕ್ತಿಕ ಆಟದ ಕೊರತೆಯಿಂದ ಜಾನ್ವಿ ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆಯಿದೆ.

ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ಅಶ್ವಿನಿ-ಜಾನ್ವಿ

Updated on: Oct 17, 2025 | 10:35 AM

ಅದು ‘ಬಿಗ್ ಬಾಸ್ ಕನ್ನಡ ಸೀಸನ್ 10’. ವಿನಯ್ ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ನಮ್ರತಾ ಗೌಡ ಅವರು ವಿನಯ್ ಚಮಚ ರೀತಿ ವರ್ತಿಸುತ್ತಿದ್ದರು. ಅವರ ಆಣತಿಯಂತೆ ಎಲ್ಲವೂ ನಡೆಯುತ್ತಿತ್ತು. ಆ ಬಳಿಕ ವಿನಯ್ ನೆರಳಿನಿಂದ ಹೊರ ಬರಲು ಅವರು ಸಾಕಷ್ಟು ಪ್ರಯತ್ನ ಮಾಡಬೇಕಾಯಿತು. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಜಾನ್ವಿ ಅವರು ಅಶ್ವಿನಿ ಗೌಡ (Ashwini Gowda) ಅವರ ಚಮಚದ ರೀತಿ ಕಾಣಿಸುತ್ತಿದ್ದಾರೆ.

ಅಶ್ವಿನಿ ಗೌಡ ಅವರು ನಟಿ ಆಗಿದ್ದರು. ಆ ಬಳಿಕ ಕನ್ನಡ ಪರ ಹೋರಾಟಗಳ ಮೂಲಕ ಗುರುತಿಸಿಕೊಂಡರು. ಅವರ ಹಿಂದೆ ಜಾನ್ವಿ ನಿಂತಿದ್ದಾರೆ. ಜಾನ್ವಿ ಹಾಗೂ ಅಶ್ವಿನಿ ಒಂಟಿಗಳೇ ಆದರೂ, ಪ್ರೇಕ್ಷಕರಿಗೆ ಅವರು ಜಂಟಿ ರೀತಿ ಕಾಣಿಸುತ್ತಿದ್ದಾರೆ. ಇದು ಜಾನ್ವಿ ಆಟದ ಮೇಲೆ ಬಹುವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಜಾನ್ವಿ ಅವರು ಹಲವು ವಿಚಾರಗಳನ್ನು ಅಶ್ವಿನಿ ಬಳಿ ಕೇಳಿಯೇ ನಿರ್ಧರಿಸುತ್ತಾರೆ. ಬಿಗ್ ಬಾಸ್​ನಲ್ಲಿ ವೈಯಕ್ತಿಕ ಆಟ ಆಡಿದರೆ ಮಾತ್ರ ಗೆಲುವು ಸಾಧ್ಯ. ಹೀಗಿರುವಾಗ ಈ ರೀತಿ ಆಡಿದರೆ ಬಿಗ್ ಬಾಸ್​ನಿಂದ ಅರ್ಧಕ್ಕೆ ಹೊರ ಹೋಗುವ ಪರಿಸ್ಥಿತಿ ಬಂದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ
ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ
ಬಕ್ರಾ ಮಾಡಲು ಬಂದ ಜಾನ್ವಿ-ಅಶ್ವಿನಿಗೆ ಮಣ್ಣು ಮುಕ್ಕಿಸಿದ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?

ಈ ಮೊದಲು ಅಶ್ವಿನಿ ಹಾಗೂ ಜಾನ್ವಿ ಅವರು ಒಟ್ಟಾಗಿ ಗಿಲ್ಲಿ ನಟನ ಮೇಲೆ ಎರಗಿ ಬೀಳಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಗಿಲ್ಲಿ ನಟ ಸರಿಯಾಗಿ ತಿರುಗೇಟು ಕೊಡಲು ಆರಂಭಿಸಿದರು. ಈ ಕಾರಣದಿಂದ ಈಗ ಇವರಿಬ್ಬರೂ ರಕ್ಷಿತಾ ಶೆಟ್ಟಿನ ಟಾರ್ಗೆಟ್ ಮಾಡಿದ್ದಾರೆ. ಅವರ ಮೇಲೆ ಎಗರಾಡುತ್ತಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ, ಬಗ್ಗಲೂ ಇಲ್ಲ

ನಮ್ರತಾ ಗೌಡ ತಪ್ಪು ಮಾಡಿದಾಗ ಸುದೀಪ್ ಅವರು ಕಿವಿಮಾತು ಹೇಳಿ ತಿದ್ದುವ ಪ್ರಯತ್ನ ಮಾಡಿದ್ದರು. ಈಗಲೂ ಸುದೀಪ್ ಅವರು ಜಾನ್ವಿಯನ್ನು ತಿದ್ದುವ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:34 am, Fri, 17 October 25