ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ

ಮಾಳು ನಿಪನಾಳ ಅವರು ಬಿಗ್ ಬಾಸ್ ಕನ್ನಡ 12ರಿಂದ ಹೊರಬಂದ ನಂತರ ನೀಡಿದ ವಿವಾದಾತ್ಮಕ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ. ‘ಕಪ್ ಗೆಲ್ಲಲು ಯಾರೂ ಅರ್ಹರಲ್ಲ’ ಎಂಬ ಮಾತುಗಳ ಹಿನ್ನೆಲೆಯಲ್ಲಿ, ಕಾರ್ಯಕ್ರಮವೊಂದರಲ್ಲಿ ಗಿಲ್ಲಿ ಅಭಿಮಾನಿಗಳು 'ಗಿಲ್ಲಿ ಗಿಲ್ಲಿ' ಎಂದು ಕೂಗಿ ಟ್ರೋಲ್ ಮಾಡಿದ್ದಾರೆ. ತಮ್ಮ ಎಲಿಮಿನೇಷನ್‌ನಿಂದ ಉತ್ತರ ಕರ್ನಾಟಕ ಅಳುತ್ತಿದೆ ಎಂಬ ಮಾಳು ಹೇಳಿಕೆ ಕೂಡ ವೈರಲ್ ಆಗಿದ್ದು, ಈ ಘಟನೆ ಈಗ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ
ಮಾಳು-ಗಿಲ್ಲಿ

Updated on: Dec 31, 2025 | 9:57 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರು ತಿಂಗಳು ಇದ್ದು ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸಾಕಷ್ಟು ಸೈಲೆಂಟ್ ಆಗಿದ್ದರು. ಬಿಗ್ ಬಾಸ್​ನಿಂದ ಹೊರ ಬರುತ್ತಿದ್ದಂತೆ ಅವರು ಮಾತು ಆರಂಭಿಸಿದ್ದಾರೆ. ಈ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣ ಆಗಿವೆ. ಈಗ ಮಾಳು ವಿರುದ್ಧ ಗಿಲ್ಲಿ (Gilli) ಫ್ಯಾನ್ಸ್ ಸೇಡು ತೀರಿಸಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಗಿಲ್ಲಿಗೆ ಇರೋ ಫ್ಯಾನ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರನ್ನು ದೊಡ್ಡ ವರ್ಗ ಆರಾಧಿಸುತ್ತದೆ. ಹೊರಗೆ ಬಂದ ಮಾಳುಗೆ ಈ ಕ್ರೇಜ್ ಬಗ್ಗೆ ತಿಳಿದಂತೆ ಇದೆ. ಅವರು ಸಂದರ್ಶನಗಳಲ್ಲಿ ‘ಯಾರೇ ಗೆದ್ದರೂ ಅದನ್ನು ಒಪ್ಪಿಕೊಳ್ಳಲ್ಲ’ ಎಂದಿದ್ದರು. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಇರುವ ಯಾರೊಬ್ಬರೂ ಈ ಬಾರಿ ಕಪ್​​ಗೆ ಅರ್ಹರಲ್ಲ ಎಂದಿದ್ದರು.

ಇಷ್ಟಕ್ಕೆ ನಿಂತಿಲ್ಲ, ‘ತಾವೇ ಈ ಬಾರಿ ಕಪ್ ಗೆಲ್ಲಬೇಕಿತ್ತು’ ಎಂಬರ್ಥದಲ್ಲೂ ಮಾಳು ಅವರು ಮಾತನಾಡಿದ್ದರು. ಈ ಎಲ್ಲಾ ವಿಡಿಯೋಗಳು ವೈರಲ್ ಆಗಿವೆ. ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಹೀಗಿರುವಾಗಲೇ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಅಲ್ಲಿ ಅವರು ಭಾರೀ ಮುಜುಗರ ಅನುಭವಿಸಿದ್ದಾರೆ.


ಮಾಳು ವೇದಿಕೆ ಏರುತ್ತಿದ್ದಂತೆ ಎಲ್ಲರೂ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದಾರೆ. ಈ ಮೂಲಕ ಮಾಳು ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ, ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ವೇದಿಕೆ ಏರಿದರೆ ಅವರದ್ದೇ ಹೆಸರನ್ನು ಕೂಗಲಾಗುತ್ತದೆ. ಆದರೆ, ಈ ವಿಷಯದಲ್ಲಿ ಮಾತ್ರ ಬೇರೆಯೇ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್

‘ನನ್ನ ಎಲಿಮಿನೇಷನ್​​ನಿಂದ ಉತ್ತರ ಕರ್ನಾಟಕ ಅಳುತ್ತಿದೆ’ ಎಂದು ಮಾಳು ಹೇಳಿದ್ದರು. ಈ ವಿಷಯ ಸಾಕಷ್ಟು ಟ್ರೋಲ್ ಆಗಿತ್ತು. ಮಾಳು ಆ ರೀತಿ ಮಾತನಾಡಿದ್ದು ತಪ್ಪು ಎಂದು ಅನೇಕರು ಹೇಳಿದ್ದರು. ಈಗ ಅವರು ಹೋದಲ್ಲಿ ಬಂದಲ್ಲಿ ಗಿಲ್ಲಿ ಹೆಸರನ್ನು ಕೇಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.