AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸಿಯಾ, ಸೋನಿಕಾ, ತಾಂಡವ್​​ಗೆ ಉಡುಗೊರೆಗಳ ತಂದ ಮಂಜ

ತನ್ನ ಕೆಟ್ಟ ವರ್ತನೆ, ವ್ಯಕ್ತಿತ್ವದಿಂದಾಗಿ ಬಿಗ್​​ಬಾಸ್​​ ಇಂದ ಹೊರಗೆ ಹಾಕಿಸಿಕೊಂಡಿದ್ದ ಮಂಜ, ಈಗ ಮತ್ತೆ ಬಿಗ್​​ಬಾಸ್ ಮನಗೆ ಬಂದಿದ್ದಾನೆ. ಮನೆಯ ಸದಸ್ಯರ ಬಗ್ಗೆ ಅವರ ಕುಟುಂಬದವರ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದ ಕಾರಣದಿಂದಾಗಿ ಮಂಜನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಹೊರಹಾಕಲ್ಪಟ್ಟ ಕೆಲ ವಾರಗಳ ಬಳಿಕ ಇದೀಗ ಬಿಗ್​​ಬಾಸ್ ಮನೆಗೆ ವಾಪಸ್ ಕರೆತರಲಾಗಿದ್ದು, ದೀಪಾವಳಿಯ ಸವಿ ಸಮಯದಲ್ಲಿ ಮಂಜನನ್ನು ಮನೆಗೆ ಕರೆಸಲಾಗಿದೆ.

ಆಸಿಯಾ, ಸೋನಿಕಾ, ತಾಂಡವ್​​ಗೆ ಉಡುಗೊರೆಗಳ ತಂದ ಮಂಜ
Modern Manja
ಮಂಜುನಾಥ ಸಿ.
|

Updated on: Nov 09, 2026 | 11:17 PM

Share

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡ ಸೀಸನ್ 13
  • ಬಿಗ್​ಬಾಸ್ ಕನ್ನಡಕ್ಕೆ ಮಂಜನ ಎಂಟ್ರಿ
  • ಆಸಿಯಾ, ಸೋನಿಕಾ, ತಾಂಡವ್​​ಗೆ ಉಡುಗೊರೆ

ತನ್ನ ಕೆಟ್ಟ ವರ್ತನೆ, ವ್ಯಕ್ತಿತ್ವದಿಂದಾಗಿ ಬಿಗ್​​ಬಾಸ್​​ ಇಂದ ಹೊರಗೆ ಹಾಕಿಸಿಕೊಂಡಿದ್ದ ಮಂಜ, ಈಗ ಮತ್ತೆ ಬಿಗ್​​ಬಾಸ್ ಮನಗೆ ಬಂದಿದ್ದಾನೆ. ಮನೆಯ ಸದಸ್ಯರ ಬಗ್ಗೆ ಅವರ ಕುಟುಂಬದವರ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದ ಕಾರಣದಿಂದಾಗಿ ಮಂಜನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಹೊರಹಾಕಲ್ಪಟ್ಟ ಕೆಲ ವಾರಗಳ ಬಳಿಕ ಇದೀಗ ಬಿಗ್​​ಬಾಸ್ ಮನೆಗೆ ವಾಪಸ್ ಕರೆತರಲಾಗಿದ್ದು, ದೀಪಾವಳಿಯ ಸವಿ ಸಮಯದಲ್ಲಿ ಮಂಜನನ್ನು ಮನೆಗೆ ಕರೆಸಲಾಗಿದೆ.

ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮಂಜನ, ರೀ ಎಂಟ್ರಿಯನ್ನು ಕನ್​​ಫರ್ಮ್ ಮಾಡಿದ್ದರು. ಆಗ ಮಂಜ, ತಾನು ಬದಲಾಗಿರುವುದಾಗಿ, ಈ ಬಾರಿ ಸಿಗುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವುದಾಗಿ ಹೇಳಿದ್ದ. ಸೋಮವಾರದಂದು ಮಂಜನನ್ನು ಮನೆಯ ಒಳಗೆ ಕಳಿಸಲಾಯ್ತು. ಮನೆಗೆ ಹೋದ ಕೂಡಲೇ ಮಂಜ ಮೊದಲು ಇಡೀ ಮನೆಯನ್ನು ಕಸದಿಂದ ತುಂಬಿಸಿದ. ಇಡೀ ಮನೆಯನ್ನು ಕೊಳಕು ಮಾಡಿದ. ಆ ಮನೆಯನ್ನು ಎಲ್ಲ ಸ್ಪರ್ಧಿಗಳು ಸೇರಿಕೊಂಡು ಕ್ಲೀನ್ ಮಾಡಿದರು.

ಬಳಿಕ ಬಿಗ್​​ಬಾಸ್​​ ಆದೇಶದಂತೆ ಮನೆಯ ಎಲ್ಲ ಸದಸ್ಯರ ಜೊತೆಗೆ ಒಬ್ಬೊರನ್ನಾಗಿ ಕರೆದು ಅವರೊಟ್ಟಿಗೆ ಮಾತನಾಡಿದ, ಹೊರಗೆ ಅವರ ಬಗ್ಗೆ ಇರುವ ಅಭಿಪ್ರಾಯಗಳನ್ನು ಹೇಳಬೇಕಿತ್ತು, ಆದರೆ ಮಂಜ ಸ್ಪರ್ಧಿಗಳ ಜೊತೆ ಮಾತನಾಡಿ, ಮನೆಯ ಒಳಗೆ ನಡೆಯುತ್ತಿರುವ ವಿಷಯಗಳನ್ನು ಹೇಳಿದ. ಕೆಲವರ ಗೆಳೆತನಕ್ಕೆ ಬೆಂಕಿ ಇಡುವ ಪ್ರಯತ್ನವನ್ನೂ ಸಹ ಮಂಜ ಮಾಡಿದ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ತಾಂಡವ್-ಪ್ರಶಾಂತ್ ಸಖತ್ ಕಾಮಿಡಿ: ವಿಡಿಯೋ

ಆ ಬಳಿಕ ಮನೆಯ ಎಲ್ಲ ಸದಸ್ಯರು ಖುಷಿಯಿಂದ ದೀಪಾವಳಿ ಆಚರಣೆ ಮಾಡಿದರು. ಮನೆಯಲ್ಲಿ ದೀಪಗಳನ್ನು ಹಚ್ಚಿ, ಪಟಾಕಿಗಳನ್ನು ಸಹ ಹಚ್ಚಿದರು. ಅದಾದ ಬಳಿಕ ಮಂಜನ್ನು ಮನೆಯ ಒಳಕ್ಕೆ ಕಳಿಸಲಾಯ್ತು. ಮಂಜ ಚಿಪ್ಸು ಇತರೆ ಖಾರದ ತಿನಿಸುಗಳನ್ನು ಜೊತೆಗೆ ಒಂದು ಸೂಟ್​​ಕೇಸ್ ಹಿಡಿದು ಮನೆಗೆ ಎಂಟ್ರಿ ಕೊಟ್ಟ. ಎಲ್ಲರಿಗೂ ಖಾರ ತಿನ್ನಿಸಿದ ಮಂಜ, ಬಳಿಕ ಸೂಟ್​​ಕೇಸ್ ತೆರೆದು, ಕಳೆದ ವಾರ ಕುಟುಂಬದ ಪತ್ರದಿಂದ ವಂಚಿತರಾಗಿದ್ದ ತಾಂಡವ್, ಆಸಿಯಾ ಮತ್ತು ಸೋನಿಕಾಗೆ ಅವರ ಪತ್ರಗಳನ್ನು ತಂದಿರುವುದಾಗಿ ಹೇಳಿದರು.

ಆದರೆ ಪತ್ರಗಳನ್ನು ಪಡೆಯಲು, ಆ ಮೂವರು ಒಟ್ಟಿಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಅದರಂತೆ ಆಸಿಯಾ ಮತ್ತು ತಾಂಡವ್ ಒಟ್ಟಿಗೆ ಗಾನವಿ ಹೆಸರು ತೆಗೆದುಕೊಂಡರು. ಸೋನಿಕಾ ಜಗ್ಗನ ಹೆಸರು ತೆಗೆದುಕೊಂಡರು. ಆದರೆ ಬಹುಮತ ಇದ್ದಿದ್ದರಿಂದ ಅಂತಿಮವಾಗಿ ಗಾನವಿ ಅವರನ್ನೇ ನೇರವಾಗಿ ನಾಮಿನೇಟ್ ಮಾಡಲಾಯ್ತು. ಬಳಿಕ ಮಂಜ, ತಾಂಡವ್, ಆಸಿಯಾ ಮತ್ತು ಸೋನಿಕಾಗೆ ಅವರ ಪತ್ರಗಳನ್ನು ನೀಡಿದ. ಮಂಜ ಎಂಟ್ರಿ ಇಂದ ಮನೆಯ ಈಕ್ವೇಷನ್ ಬದಲಾವಣೆ ಆಗಲಿದ್ದು, ಆಟದಲ್ಲಿ ಏನು ಬದಲಾವಣೆ ಆಗಲಿದೆ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್