AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಈ ವಾರ ಇರಲ್ಲ ಎಲಿಮಿನೇಷನ್? ಕಾರಣ ಇಲ್ಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದಲ್ಲೇ ಎಲಿಮಿನೇಷನ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ದೊಡ್ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ತಡವಾಗಿರುವುದು ಮತ್ತು ವೋಟಿಂಗ್ ಲೈನ್ಸ್ ಇನ್ನೂ ಓಪನ್ ಆಗದಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಮೊದಲ ವಾರ ಯಾವುದೇ ಸ್ಪರ್ಧಿ ಕೂಡ ಮನೆಯಿಂದ ಹೊರಬೀಳುವ ಸಾಧ್ಯತೆಗಳು ತೀರಾ ಕಮ್ಮಿಯಿವೆ.

ಬಿಗ್ ಬಾಸ್​ನಲ್ಲಿ ಈ ವಾರ ಇರಲ್ಲ ಎಲಿಮಿನೇಷನ್? ಕಾರಣ ಇಲ್ಲಿದೆ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Sep 11, 2026 | 7:43 AM

Share

ಮುಖ್ಯಾಂಶಗಳು

  • ಮೊದಲ ವಾರ ಎಲಿಮಿನೇಷನ್ ಶಾಕ್ ಇಲ್ಲ
  • ದೊಡ್ಮನೆಯಿಂದ ಯಾರೂ ಔಟ್ ಇಲ್ವಾ?
  • ಬಾಕಿ ಉಳಿದ ನಾಮಿನೇಷನ್ ಪ್ರಕ್ರಿಯೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಒಟ್ಟು 16 ಸ್ಪರ್ಧಿಗಳು ಇದ್ದು ಎಲ್ಲರ ನಡುವೆ ಭರ್ಜರಿ ಫೈಟ್ ನಡೆಯುತ್ತಿದೆ. ಹೀಗಿರುವಾಗಲೇ ಮೊದಲ ವಾರ ಯಾರು ಹೋಗುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ, ಮೊದಲ ವಾರ ಎಲಿಮಿನೇಷನ್ ನಡೆಯೋದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಕೂಡ ಸ್ಪಷ್ಟವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ವಿಮಾನದ ಥೀಮ್ ತರಲಾಗಿದೆ. ಗಾರ್ಡನ್ ಏರಿಯಾದಲ್ಲಿ ಒಂದು ಡಮ್ಮಿ ವಿಮಾನವನ್ನು ನಿಲ್ಲಿಸಲಾಗಿದೆ. ಅದರಲ್ಲಿ ಅರ್ಧದಷ್ಟು ಸ್ಪರ್ಧಿಗಳು ಇದ್ದರೆ, ದೊಡ್ಮನೆ ಒಳಗೆ ಒಂದಷ್ಟು ಸ್ಪರ್ಧಿಗಳಿದ್ದಾರೆ. ವಿಮಾನದಲ್ಲಿ ಇರುವವರ ಪೈಕಿ ಒಂದಷ್ಟು ಮಂದಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗುತ್ತಾರೆ. ಸದ್ಯ ದೊಡ್ಮನೆಯಲ್ಲಿ ವಿವಿಧ ಟಾಸ್ಕ್ ನಡೆಯುತ್ತಿದ್ದು, ಈವರೆಗೆ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಸಾಮಾನ್ಯವಾಗಿ ಎಲಿಮಿನೇಷನ್ ಮಾಡುವಾಗ ಗುರುವಾರದ ವೇಳೆಗೆ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆ ಬಳಿಕ ಶುಕ್ರವಾರ ಹಾಗೂ ಶನಿವಾರ ಒಂದಷ್ಟು ಸಮಯ ವೋಟ್ ಹಾಕಲು ಅವಕಾಶ ಇರುತ್ತದೆ. ಆದರೆ, ನಾಮಿನೇಷನ್ ಪ್ರಕ್ರಿಯೆ ಶುಕ್ರವಾರವೂ ಆರಂಭ ಆಗಿಲ್ಲ. ಒಂದೊಮ್ಮೆ ಇಂದಿನ ಎಪಿಸೋಡ್​​ನಲ್ಲಿ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡರೆ ವೋಟ್ ಮಾಡಲು ಹೆಚ್ಚಿನ ಸಮಯ ಇರೋದಿಲ್ಲ. ಈ ವಾರ ಎಲಿಮಿನೇಷನ್ ನಡೆಯೋದಿಲ್ಲ ಎಂಬುದಕ್ಕೆ ಇದು ಪ್ರಮುಖ ಕಾರಣ.

ಇದನ್ನೂ ಓದಿ: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ; ಡೈರೆಕ್ಟ್ ಆಗಿ ಸಿಕ್ಕಿ ಬಿದ್ದ ಗಗನ್ ಇನ್ನು, ಬಂದಿರುವ 16 ಸ್ಪರ್ಧಿಗಳ ಪೈಕಿ ಬಹುತೇಕರು ಸಮನಾಗಿ ಕಾಣಿಸುತ್ತಿದ್ದಾರೆ. ಈ ವಾರವೇ ಒಬ್ಬರು ಔಟ್ ಆದರೆ ಅದು ನಷ್ಟ. ಮತ್ತಷ್ಟು ಸಮಯ ಸಿಕ್ಕಿದ್ದರೆ ಅವರು ಇನ್ನಷ್ಟು ಉತ್ತಮವಾಗಿ ಆಟ ಆಡಬಹುದಿತ್ತು ಎಂದು ಅನಿಸಬಾರದು ಎಂದು ಆ ಸ್ಪರ್ಧಿಗೆ ಅನಿಸಬಹುದು. ಈ ಕಾರಣಕ್ಕೆ ಎಲಿಮಿನೇಷನ್ ನಡೆಯೋದು ಅನುಮಾನ ಎಂಬುದು ಸದ್ಯದ ಊಹೆ. ಸದ್ಯ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಈ ವಾರ ಓಪನ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ