AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ; ಡೈರೆಕ್ಟ್ ಆಗಿ ಸಿಕ್ಕಿ ಬಿದ್ದ ಗಗನ್

ಬಿಗ್ ಬಾಸ್ ಮನೆಯಲ್ಲಿ ವಿಐಪಿ ಪಟ್ಟದಲ್ಲಿರುವ ಗಗನ್ ಚಿನ್ನಪ್ಪ ತಾಂಡವ್ ರಾಮ್ ತಂಡಕ್ಕೆ ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಟಾಸ್ಕ್ ವೇಳೆ ಫೌಲ್ ನಿರ್ಧಾರದಲ್ಲಿ ತಾರತಮ್ಯ ಎಸಗಿದ ಗಗನ್ ನಡೆಗೆ ವೀಕ್ಷಕರಿಂದ ಆಕ್ರೋಶ ವ್ಯಕ್ತವಾಗಿದ್ದು, ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ; ಡೈರೆಕ್ಟ್ ಆಗಿ ಸಿಕ್ಕಿ ಬಿದ್ದ ಗಗನ್
ಗಗನ್
ರಾಜೇಶ್ ದುಗ್ಗುಮನೆ
|

Updated on: Sep 11, 2026 | 7:04 AM

Share

ಮುಖ್ಯಾಂಶಗಳು

  • ಒಬ್ಬರಿಗೆ ಬೆಣ್ಣೆ, ಇನ್ನೊಬ್ಬರಿಗೆ ಸುಣ್ಣ
  • ಗಗನ್ ಪಕ್ಷಪಾತದ ಆಟ
  • ಟಾಸ್ಕ್‌ನಲ್ಲಿ ಫೌಲ್ ಡ್ರಾಮಾ

ಗಗನ್ ಚಿನ್ನಪ್ಪ ನಡೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಅವರು ಅಗ್ರೆಸ್ಸಿವ್ ಆಗಿ ಆಡುವ ಪ್ರಯತ್ನದಲ್ಲಿದ್ದಾರೆ ಎಂಬುದು ನಿಜ. ಇದನ್ನು ಅವರು ಒತ್ತಾಯಪೂರ್ವಕವಾಗಿ ಮಾಡುತ್ತಿರುವ ರೀತಿಯೂ ಕಾಣುತ್ತಿದೆ. ಹೀಗಿರುವಾಗಲೇ ಅವರು ಸಾಕಷ್ಟು ತಪ್ಪುಗಳನ್ನು ಕೂಡ ಮಾಡುತ್ತಿದ್ದಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಎಲ್ಲರೂ ಊಹಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಿಐಪಿ ಪಟ್ಟದಲ್ಲಿ ಗಗನ್ ಇದ್ದಾರೆ. ವಿಐಪಿ ಎಂದರೆ ಅವರು ಇಡೀ ಮನೆಯನ್ನು ಮುನ್ನಡೆಸಿಕೊಂಡು ಹೋಗಬೇಕು. ಅವರು ಒಂದು ರೀತಿಯಲ್ಲಿ ಕ್ಯಾಪ್ಟನ್ ಇದ್ದಂತೆಯೆ. ಕ್ಯಾಪ್ಟನ್ ಎಂದಮೇಲೆ ಇಡೀ ಮನೆಗೆ ಅವರು ಒಂದೇ ರೀತಿಯ ನ್ಯಾಯ ನೀಡಬೇಕು. ಆದರೆ, ಗಗನ್ ಅವರನ್ನು ಅದನ್ನು ಮಾಡುತ್ತಿಲ್ಲ. ಇದು ಚರ್ಚೆಯ ವಿಷಯವಾಗಿದೆ.

ಗಗನ್ ಅವರು ದೊಡ್ಮನೆಯಲ್ಲಿ ತಾಂಡವ್ ರಾಮ್ ಜೊತೆ ಕ್ಲೋಸ್ ಆಗಿದ್ದಾರೆ. ಈ ಕಾರಣಕ್ಕೆ ತಾಂಡವ್ ಅವರ ತಂಡಕ್ಕೆ ಬೆನಿಫಿಟ್ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಸ್ವಮಿಂಗ್​ಪೂಲ್​​ನಲ್ಲಿ ನಿಂತಿದ್ದವರ ಮೇಲೆ ಟೈಯರ್ ಟ್ಯೂಬ್ ಎಸೆಯುವ ಟಾಸ್ಕ್ ಇತ್ತು. ಈ ಟಾಸ್ಕ್​ನಲ್ಲಿ ಮೇಲಿನಿಂದ ಟ್ಯೂಬ್ ಹಾಕಿದ್ದು ನೇರವಾಗಿ ಸ್ವಮಿಂಗ್​ಪೂಲ್​ನಲ್ಲಿ ನಿಂತಿದ್ದವರ ಒಳಗೆ ಹೋಗಬೇಕು. ನೀರಿನಲ್ಲಿ ಇದ್ದವರು ಕೊಂಚವೂ ಸರಿಯಬಾರದು, ಕುತ್ತಿಗೆ ಅಲ್ಲಾಡಿಸಬಾರದು.

ತಾಂಡವ್ ತಂಡದವರು ಇಲ್ಲಿ ಫೌಲ್ ಮಾಡಿದ್ದರು. ಇದನ್ನು ಗಗನ್ ಗಮನಿಸಿಯೇ ಇಲ್ಲ. ಆದರೆ, ಸೌಂದರ್ಯಾ ಶೆಟ್ಟಿ ಕೊಂಚ ಅಲ್ಲಾಡಿದ್ದಕ್ಕೆ ಫೌಲ್ ಕೊಟ್ಟಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ. ಅನೇಕರು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಆಡೋದು ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ವೀಕೆಂಡ್​​ನಲ್ಲಿ ಈ ವಿಷಯವಾಗಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್: ಉಳಿದವರಿಗೆ ಏಕವಚನ ಕೊಟ್ಟು ಗೌರವ ನಿರೀಕ್ಷೆ ಮಾಡಿದ ಗಗನ್ ಚಿನ್ನಪ್ಪ

ಇನ್ನು ನಾಮಿನೇಷನ್ ವಿಷಯವನ್ನು ನೇರವಾಗಿ ಮಾತನಾಡಿದ್ದರು ಗಗನ್. ಮಂಜು ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅಧಿಕಾರ ಸಿಕ್ಕಾಗ ಮಂಜು ಅವರನ್ನು ನಾಮಿನೇಟ್ ಮಾಡಿದರು. ಇದು ಕೂಡ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ