
ಬಿಗ್ಬಾಸ್ ಮನೆಯಲ್ಲಿ ಯಾವುದೂ ನಿರೀಕ್ಷಗೆ ತಕ್ಕಂತೆ ನಡೆಯುವುದಿಲ್ಲ. ಅದರಲ್ಲೂ ಆಟಗಾರರ ನಿರೀಕ್ಷೆಯಂತೆ ಅಂತೂ ನಡೆಯುವುದೇ ಇಲ್ಲ. ಈಗಲೂ ಹಾಗೆಯೇ ಆಗಿದೆ. ಕಳೆದ ವಾರ ಎಲಿಮಿನೇಷನ್ ಹೆಸರಲ್ಲಿ ಮನೆಯವರನ್ನು ಫೂಲ್ ಮಾಡಿದ್ದ ಬಿಗ್ಬಾಸ್ ಈ ವಾರ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಮನೆಯ ಸದಸ್ಯರಿಗೆ ಇದು ಭಾರಿ ದೊಡ್ಡ ಶಾಕ್ ಆಗಿ ಪರಿಣಮಿಸಿದೆ.
ವಾರದ ಮಧ್ಯ ಭಾಗದಲ್ಲಿ ನಡೆದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಬಿಗ್ಬಾಸ್ ಬಹಳ ಭಿನ್ನವಾದ ಎಲಿಮಿನೇಷನ್ ಮಾಡಿಸಿದರು. ಮನೆಯಲ್ಲಿ ಹಲವರ ಅಚ್ಚು ಮೆಚ್ಚಿನ ಸ್ಪರ್ಧಿ ಆಗಿದ್ದ ತಾಂಡವ್ ರಾಮ್ ಅವರನ್ನು ಮನೆಯಿಂದ ಹೊರಗೆ ಕಳಿಲಾಗಿದೆ. ವಿಶೇಷವೆಂದರೆ ತಾಂಡವ್ ಅವರು ಕಡಿಮೆ ಮತ ಪಡೆದು ಹೊರಗೆ ಹೋಗಿದ್ದಲ್ಲ, ಬದಲಿಗೆ ಅದೃಷ್ಟ ಕೈಕೊಟ್ಟ ಕಾರಣ ಹೊರಗೆ ಹೋಗಿದ್ದು. ಅಲ್ಲಿಗೆ ಈ ವಾರ ಜನ ಬಯಸಿದವರು ಹೊರಗೆ ಹೋಗಿಲ್ಲ ಬದಲಿಗೆ ಅದೃಷ್ಟ ಯಾರಿಗೆ ಇರಲಿಲ್ಲವೋ ಅವರು ಹೊರಗೆ ಹೋಗಿದ್ದಾರೆ.
ಸಂಗೀತಾ ಬಿಟ್ಟು ಮನೆ ಮಂದಿಯೆಲ್ಲ ನಾಮಿನೇಟ್ ಆಗಿದ್ದರು. ಟಾಸ್ಕ್ ಗಳಲ್ಲಿ ಗೆದ್ದ ಆಸಿಯಾ, ಕಿರಣ್, ಧನುಶ್ ಮತ್ತು ಕಾವ್ಯಾ ಅಡ್ವಾಂಟೇಜ್ ಪಡೆದಿದ್ದರು. ಅವರಿಗೆ ವಿಶೇಷ ಅವಕಾಶ ಕೊಟ್ಟ ಬಿಗ್ಬಾಸ್, ಬೇರೆಯವರ 50% ಮತ ಪಡೆದುಕೊಂಡು ನೀವು ಸೇಫ್ ಆಗಬಹುದು ಎಂದರು. ಆದರೆ ಯಾರ ಮತ ಪಡೆಯುತ್ತೀರೋ ಅವರಲ್ಲಿ ಕಡಿಮೆ ಮತ ಉಳಿಸಿಕೊಂಡವರು ಮನೆಗೆ ಹೋಗುತ್ತಾರೆ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಅಣ್ಣಾವ್ರ ಡೈಲಾಗ್: ವಿಡಿಯೋ ನೋಡಿ
ಕಿರಣ್ ಶಾಸ್ತ್ರಿ, ಸೌಂಧರ್ಯ ಹೆಸರು ತೆಗೆದುಕೊಂಡ, ಕಾವ್ಯಾ ಅವರು ಜಗ್ಗಿ ಹೆಸರು ತೆಗೆದುಕೊಂಡರು. ಆಸಿಯಾ, ಲಿಖಿತ್ ಮನೆಯಿಂದ ಹೊರಗೆ ಹೋಗಬೇಕೆಂದು ಅವರ ಹೆಸರು ತೆಗೆದುಕೊಂಡರು. ಅಂತಿಮವಾದಿ ಧನುಶ್, ತಾಂಡವ್ ಹೆಸರು ತೆಗೆದುಕೊಂಡ. ಆಸಿಯಾ ಬಿಟ್ಟು ಇನ್ನೆಲ್ಲರೂ, ಹೆಚ್ಚು ಮತ ಬಂದಿರಬಹುದು ಎಂಬ ಕಾರಣಕ್ಕಾಗಿಯೇ ಹೆಸರುಗಳನ್ನು ತೆಗೆದುಕೊಂಡರು.
ಧನುಶ್ ಅಂತೂ, ತಾಂಡವ್ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಮತ ಸಿಕ್ಕಿರುತ್ತದೆ. ಅವರು ಹೀರೋ ರೀತಿ ಇದ್ದಾರೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಅವರ ಆಯ್ಕೆ, ಲೆಕ್ಕಾಚಾರ ಉಲ್ಟಾ ಹೊಡೆಯಿತು. ತಾಂಡವ್ ಅವರು ಮನೆಯಿಂದ ಎವಿಕ್ಟ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ