‘ಈ ಸೀಸನ್ನಲ್ಲೇ ಅತ್ಯುತ್ತಮ ಆಟ’; ವಾರದ ಟಾಸ್ಕ್ ಆಡಿದ ರೀತಿಗೆ ಮೆಚ್ಚುಗೆಯ ಮಹಾಪೂರ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಸ್ಪರ್ಧಿಗಳು ಒಗ್ಗಟ್ಟಿನಿಂದ ಆಡಿ ಎಲ್ಲರನ್ನೂ ರಂಜಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ದರೋಡೆಕೋರರು ಹಾಗೂ ರಕ್ಷಕರ ನಡುವೆ ನಡೆದ ಈ ರೋಚಕ ಟಾಸ್ಕ್ ಆಟವು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ. ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಟವನ್ನು ಮೆಚ್ಚಿ ವಿಶೇಷ ಪ್ರಶಂಸೆ ವ್ಯಕ್ತಪಡಿಸುವ ಸಂಪೂರ್ಣ ನಿರೀಕ್ಷೆಯಿದೆ.

ಮುಖ್ಯಾಂಶಗಳು
- ದರೋಡೆಕೋರರು VS ರಕ್ಷಕರು
- ರೋಚಕ ಟಾಸ್ಕ್ನಲ್ಲಿ ಗೆದ್ದವರು ಯಾರು?
- ಕಿತ್ತಾಟವಿಲ್ಲದೆ ಒಗ್ಗಟ್ಟಿನ ಆಟ
ಈ ಬಾರಿಯ ಬಿಗ್ ಬಾಸ್ನಲ್ಲಿ ಟಾಸ್ಕ್ ಯಶಸ್ವಿಯಾಗಿ ನಡೆದಿದ್ದಕ್ಕಿಂತ ಅರ್ಧದಲ್ಲಿ ಮೊಟಕುಗೊಂಡಿದ್ದೇ ಹೆಚ್ಚು. ಸ್ಪರ್ಧಿಗಳು ಕಿತ್ತಾಡಿಕೊಂಡು, ಇಲ್ಲವೇ ರೂಲ್ಸ್ ಬದಲಿಸಿಕೊಂಡು ಟಾಸ್ಕ್ನ ಹಾಳು ಮಾಡಿದ ಉದಾಹರಣೆ ಇದೆ. ಇದರಿಂದ ಸಿಟ್ಟಾಗುವ ಬಿಗ್ ಬಾಸ್ ಆಟವನ್ನೇ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದು ಹಲವು ಬಾರಿ ನಡೆದಿದೆ. ಆದರೆ, ಈ ವಾರದ ಟಾಸ್ಕ್ ಅನ್ನು ಸ್ಪರ್ಧಿಗಳು ಯಶಸ್ವಿಯಾಗಿ ನಡೆಸಿದ್ದಾರೆ. ಇದಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಈ ಬಾರಿ ಬಿಗ್ ಬಾಸ್ ಅಲ್ಲಿ ದರೋಡೆಕೋರರು ಹಾಗೂ ರಕ್ಷಕರ ನಡುವೆ ಜಟಾಪಟಿ ನಡೆದಿದೆ. ನಾಮಿನೇಟ್ ಆದವರು ದರೋಡೆಕೋರರಾದರೆ, ನಾಮಿನೇಟ್ ಆಗದೇ ಇದ್ದವರು ರಕ್ಷಕರು. ಡೈಮಂಡ್, ಪದಕ ಹಾಗೂ ಕಿರೀಟವನ್ನು ಬಿಗ್ ಬಾಸ್ ಮನೆಯ ವಿವಿಧ ಕಡೆಗಳಲ್ಲಿ ಇಡಲಾಗಿತ್ತು. ಇದನ್ನು ರಕ್ಷಕರಿಗೆ ಗೊತ್ತಾಗದಂತೆ ಕದಿಯಬೇಕು. ಕದಿಯುವಾಗ ಸಿಕ್ಕಿಬಿದ್ದರೆ ಅರ್ಧ ಗಂಟೆ ಬಂಧನಕ್ಕೆ ಒಳಗಾಗಬೇಕು.
View this post on Instagram
ಈ ಟಾಸ್ಕ್ ಅಲ್ಲಿ ದರೋಡೆಕೋರರ ತಂಡ ಯಶಸ್ಸು ಗಳಿಸಿದೆ. ಅದ್ಭುತವಾಗಿ ಆಟ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದೆ. ಮೊದಲು ಡೈಮಂಡ್ ಕದಿಯಲಾಗಿದೆ. ಆ ಬಳಿಕ ಪದಕ ಕದಿಯುವ ಸಮಯದಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಇನ್ನು ಕಿರೀಟವನ್ನು ಯಶಸ್ವಿಯಾಗಿ ಬದಲಾವಣೆ ಮಾಡಲಾಗಿದೆ. ಈ ಮೂಲಕ ದರೋಡೆಕೋರರ ತಂಡ ಯಶಸ್ಸು ಕಂಡು, ಈ ವಾರದ ಟಾಸ್ಕ್ ಗೆದ್ದಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ನಿಯಮ ಬದಲಿಸಿದ ಗಗನ್ ಚಿನ್ನಪ್ಪ; ಸ್ಪರ್ಧಿಗಳ ಅಸಮಾಧಾನ
ಈ ವಾರದ ಟಾಸ್ಕ್ನಲ್ಲಿ ದರೋಡೆಕೋರರ ತಂಡ ಸಖತ್ ಮಜಾ ನೀಡಿದೆ. ಆಟದ ರೀತಿ, ಎಲ್ಲಿಯೂ ಕಿತ್ತಾಡಿಕೊಳ್ಳದೆ ಒಗ್ಗಟ್ಟಿನಿಂದ ಪರಿಸ್ಥಿತಿ ನಿಭಾಯಿಸಿದ ರೀತಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ವಾರ ಸೌಂದರ್ಯಾ ಶೆಟ್ಟಿ ಹಾಗೂ ತಾಂಡವ್ ರಾಮ್ ಅವರ ಪೈಕಿ ಒಬ್ಬರಿಗೆ ಚಪ್ಪಾಳೆ ಸಿಗುವ ಸಾಧ್ಯತೆ ಇದೆ. ಈ ವಾರ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರಶಂಸಿಸಲು ಈ ವಾರವನ್ನು ಮುಡಿಪಿಡುವ ಸಾಧ್ಯತೆ ಇದೆ. ವೀಕೆಂಡ್ ಎಪಿಸೋಡ್ಗಾಗಿ ವೀಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:33 am, Fri, 23 October 26




