ಗಿಲ್ಲಿ ತಿಳಿದೂ ಮಾಡಿದ ತಪ್ಪಿಗೆ ಸಿಟ್ಟಿನಿಂದ ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ ಸುದೀಪ್

ಯಾರೇ ಕ್ಯಾಪ್ಟನ್ ಆದರೂ ಗಿಲ್ಲಿ ನಟ ಅವರು ಕ್ಯಾಪ್ಟನ್ ರೂಂ ಬಳಸುವುದನ್ನು ನೀವು ಕಂಡಿರಬಹುದು. ಈ ವಾರವೂ ಹಾಗೆಯೇ ಆಗಿದೆ. ಗಿಲ್ಲಿ ಅವರು ಬಿಗ್ ಬಾಸ್ ಹಾಸಿಗೆ ಮೇಲೆ ಮಲಗಿದರು. ಅಲ್ಲಿದ್ದ ಅಭಿಷೇಕ್, ಧನುಷ್ ಅವರು ಹೊರಗೆ ಹೋಗುವಂತೆ ಹೇಳಿದರೂ ಕೇಳಲಿಲ್ಲ. ಇದಕ್ಕೆ ಈಗ ಶಿಕ್ಷೆ ಸಿಕ್ಕಂತೆ ಆಗಿದೆ.

ಗಿಲ್ಲಿ ತಿಳಿದೂ ಮಾಡಿದ ತಪ್ಪಿಗೆ ಸಿಟ್ಟಿನಿಂದ ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ ಸುದೀಪ್
ಬಿಗ್ ಬಾಸ್
Edited By:

Updated on: Dec 06, 2025 | 5:53 PM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕ್ಯಾಪ್ಟನ್ ರೂಂ ವಿಶೇಷ ಮೌಲ್ಯವನ್ನು ಹೊಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕ್ಯಾಪ್ಟನ್ ಆದವರು ಮಾತ್ರ ಈ ರೂಂ ಪ್ರವೇಶ ಮಾಡಬೇಕು. ಅದಕ್ಕೆ ಅಷ್ಟು ವಿಶೇಷವಾದ ಸ್ಥಾನ-ಮಾನ ಇದೆ. ಆದರೆ, ಈ ಬಾರಿಯ ಸ್ಪರ್ಧಿಗಳಿಗೆ ಅದರಲ್ಲೂ ಗಿಲ್ಲಿ ನಟನಿಗೆ ಇದರ ಮೌಲ್ಯ ತಿಳಿದಂತೆ ಕಾಣಿಸುತ್ತಿಲ್ಲ. ಅವರು ಕ್ಯಾಪ್ಟನ್ ಆಗದೆ ಇದ್ದರೂ ಆ ರೂಂ ಬಳಸಿದ್ದರು. ಇದರಿಂದ ಕ್ಯಾಪ್ಟನ್ ರೂಂಗೆ ಬೀಗ ಬಿದ್ದಿದೆ.

ಯಾರೇ ಕ್ಯಾಪ್ಟನ್ ಆದರೂ ಗಿಲ್ಲಿ ನಟ ಅವರು ಕ್ಯಾಪ್ಟನ್ ರೂಂ ಬಳಸುವುದನ್ನು ನೀವು ಕಂಡಿರಬಹುದು. ಈ ವಾರವೂ ಹಾಗೆಯೇ ಆಗಿದೆ. ಸ್ಪಂದನಾ ಮತ್ತು ಅಭಿಷೇಕ್ ಅವರು ಕ್ಯಾಪ್ಟನ್ ಆದಾಗ ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಂ ಪ್ರವೇಶ ಮಾಡಿದರು. ಕಾವ್ಯಾ ಕೂಡ ಇದ್ದರು. ಆ ನಂತರ ಗಿಲ್ಲಿ ಅವರು ಬೆಡ್ ಪಕ್ಕದ ಚೇರ್ ಮೇಲೆ ಕುಳಿತರು. ನಂತರ ಒಂದು ಹಂತಕ್ಕೆ ಮುಂದೆ ಹೋದ ಗಿಲ್ಲಿ ಅವರು ಹಾಸಿಗೆ ಮೇಲೆ ಮಲಗಿದರು. ಅಲ್ಲಿದ್ದ ಅಭಿಷೇಕ್, ಧನುಷ್ ಅವರು ಹೊರಗೆ ಹೋಗುವಂತೆ ಹೇಳಿದರೂ ಕೇಳಲಿಲ್ಲ.

‘ಹಾಗೆ ಕುಳಿತುಕೊಳ್ಳಬಾರದು’ ಎಂದು ಅಭಿಷೇಕ್ ಹೇಳಿದರು. ಆದರೆ, ಇದನ್ನು ಗಿಲ್ಲಿ ಕೇಳಲೇ ಇಲ್ಲ.ಅವರು ಮಲಗೇ ಇದ್ದರು. ಇಷ್ಟು ದಿನ ಸುದೀಪ್ ಅವರು ಈ ವಿಷಯದಲ್ಲಿ ಸೈಲೆಂಟ್ ಆಗಿದ್ದರು. ಈಗ 70 ದಿನಗಳ ಬಳಿಕ ಕ್ಯಾಪ್ಟನ್ ರೂಂಗೆ ಬೀಗ ಬಿದ್ದಿದೆ.

ಹೊಸ ಪ್ರೋಮೋ ರಿಲೀಸ್ ಆಗಿದೆ. ‘ಕ್ಯಾಪ್ಟನ್​ಗೆ ಮರ್ಯಾದೆ ಇಲ್ಲ, ಕ್ಯಾಪ್ಟನ್ ರೂಂಗೂ ಮರ್ಯಾದೆ ಇಲ್ಲ ಅಲ್ಲವೇ ಗಿಲ್ಲಿ. ಕ್ಯಾಪ್ಟನ್ ರೂಂಗೆ ಬೆಲೆ ಇದೆ. ಇಷ್ಟು ಸೀಸನ್​ಗಳಲ್ಲಿ ಒಮ್ಮೆ ಇದೇ ರೀತಿ ಬೀಗ ಬಿದ್ದಿತ್ತು, ಈಗ ಮತ್ತೆ ಅದೇ ನಡೆಯುತ್ತಿದೆ’ ಎಂದು ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ್ದಾರೆ ಸುದೀಪ್. ಈ ಮೊದಲು ರೂಪೇಶ್ ಶೆಟ್ಟಿ ಸೀಸನ್ ಅಲ್ಲಿ (ಸೀಸನ್ 9) ಕ್ಯಾಪ್ಟನ್ ರೂಂಗೆ ಬೀಗ ಹಾಕಲಾಗಿತ್ತು. ಈಗ ಮತ್ತದು ರಿಪೀಟ್ ಆಗಿದೆ.

ಇದನ್ನೂ ಓದಿ: ಅರ್ಹತೆ ಪಡೆಯದಿದ್ದರೂ ಅನುಭವಿಸೋ ಹಂಬಲ; ಗಿಲ್ಲಿ ನಟ ತಿದ್ದಿಕೊಳ್ಳೋದು ಯಾವಾಗ?

ಈ ಬಾರಿಯ ಬಿಗ್ ಬಾಸ್ ಅಲ್ಲಿ ಸಾಕಷ್ಟು ಜನರು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಬಿಗ್ ಬಾಸ್​ಗೆ ಇದೆಲ್ಲವನ್ನೂ ಹೇಳಿ ಸಾಕಾಗಿದೆ. ಆದರೂ ತಪ್ಪು ಮತ್ತೆ ರಿಪೀಟ್ ಆಗುತ್ತಿದೆ. ಈಗ ಈ ವಿಷಯದಲ್ಲಿ ಕಠಿಣ ನಿಯಮವನ್ನೇ ತೆಗೆದುಕೊಂಡು ಬರಲಾಗಿದೆ. ಕ್ಯಾಪ್ಟನ್ಸಿ ರೂಂಗೆ ಬೀಗ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:51 pm, Sat, 6 December 25