ಬಿಗ್ಬಾಸ್ ಮನೆಯಲ್ಲಿ ಯಾರ ವ್ಯಕ್ತಿತ್ವ ಎಂಥಹದು? ಸ್ಪರ್ಧಿಗಳು ಹೇಳಿದ್ದೇನು?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ವ್ಯಕ್ತಿತ್ವ ಎಂಥಹದ್ದು ಎಂಬುದನ್ನು ಇತರೆ ಸ್ಪರ್ಧಿಗಳು ಹೇಳಿದ್ದಾರೆ. ಅಂದಹಾಗೆ ಬಿಗ್ಬಾಸ್ ಮನೆಯಲ್ಲಿ ಖಾಲಿ ತಲೆ ಯಾರದ್ದು, ಬೆನ್ನಿಗೆ ಚೂರಿ ಹಾಕುವವರು ಯಾರು? ಹೊಟ್ಟೆ ಉರಿ ಯಾರಿಗೆ ಹೆಚ್ಚು? ಇಲ್ಲಿದೆ ನೋಡಿ ವಿವರ.
ಬಿಗ್ಬಾಸ್ ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವ. ಮನೆಯಲ್ಲಿ ಮೇಲ್ನೋಟಕ್ಕೆ ಪ್ರತಿಯೊಬ್ಬರು ಗೆಳೆಯರಂತೆ ಕಾಣುತ್ತಾರಾದರೂ ಸಹ ಸ್ಪರ್ಧಿಗಳ ಬಗ್ಗೆ ನಿಜವಾಗಿಯೂ ಇರುವ ಅಭಿಪ್ರಾಯ ಬೇರೆಯದ್ದೇ ಇರುತ್ತದೆ. ಶನಿವಾರದ ಎಪಿಸೋಡ್ ನಡೆಸಿಕೊಡಲು ಬಂದಿದ್ದ ಸುದೀಪ್, ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಹೊರತೆಗೆಯುವ ಪ್ರಯತ್ನ ಮಾಡಿದರು.
ಎಲ್ಲರಿಗೂ ಕೆಲವು ಎಕ್ಸ್ರೇ ಪ್ರಿಂಟ್ಗಳನ್ನು ನೀಡಿದ್ದ ಸುದೀಪ್, ಪ್ರಿಂಟ್ ಮೇಲಿರುವ ಚಿತ್ರ ಯಾರಿಗೆ ಸರಿ ಹೊಂದುತ್ತದೆ ಅನಿಸುತ್ತದೆಯೋ ಅವರಿಗೆ ನೀಡುವಂತೆ ಹೇಳಿದರು. ಅದರಂತೆ ಬೆನ್ನು ಹುರಿ ಇಲ್ಲದ ಚಿತ್ರವನ್ನು ಗೌತಮಿ ಅವರು ಶಿಶಿರ್ಗೆ ನೀಡಿದರು. ಯಾವುದೇ ವಿಷಯದ ಬಗ್ಗೆ ಅವರಿಗೆ ಸ್ಪಷ್ಟವಾದ ನಿಲುವು ಇಲ್ಲ ಎಂದರು.
ಹೊಟ್ಟೆ ಉರಿ ಎಂಬ ಚಿತ್ರವನ್ನು ಐಶ್ವರ್ಯಾ ಅವರಿಗೆ ಉಗ್ರಂ ಮಂಜು ನೀಡಿದರು. ದೊಡ್ಡ ಬಾಯಿ ಚಿತ್ರವನ್ನು ರಜತ್ ಅವರಿಗೆ ಚೈತ್ರಾ ಕುಂದಾಪುರ ನೀಡಿದರು. ತಲೆಯಲ್ಲಿ ಮೆದುಳೇ ಇಲ್ಲ ಎಂಬ ಚಿತ್ರವನ್ನು ಮೋಕ್ಷಿತಾ ಅವರು ಗೌತಮಿ ಅವರಿಗೆ ನೀಡಿದರು. ಕಲ್ಲು ಹೃದಯ ಚಿತ್ರವನ್ನು ಭವ್ಯಾ, ತ್ರಿವಿಕ್ರಮ್ಗೆ ನೀಡಿದರು. ಕಲ್ಲು ಹೃದಯದವನಾಗಿ ಆಟ ಆಡುತ್ತಾರೆ ಎಂದು ಕಾರಣ ನೀಡಿದರು.
ಇದನ್ನೂ ಓದಿ:
ಕಾಲು ಕೆರೆದುಕೊಂಡು ಜಗಳ ಮಾಡುವವರು ಯಾರು ಎಂಬುದನ್ನು ಹನುಮಂತ, ಚೈತ್ರಾ ಹೆಸರೇಳಿ ಚಿತ್ರ ನೀಡಿದರು. ಬೆನ್ನಿಗೆ ಚೂರಿ ಹಾಕುವ ಚಿತ್ರವನ್ನು ರಜತ್, ಧನರಾಜ್ಗೆ ನೀಡಿದರು. ಧನರಾಜ್ ಮೋಸ ಮಾಡಿದ್ದಾನೆ ಎಂದರು. ಭ್ರಮೆಯಲ್ಲಿ ಬದುಕುತ್ತಿರುವವರು ಚಿತ್ರವನ್ನು ರಜತ್ಗೆ ಧನರಾಜ್ ನೀಡಿದರು. ಹುಲಿ ಎಂದುಕೊಂಡಿದ್ದಾರೆ ಆದರೆ ಆತ ಇಲಿಯಷ್ಟೆ ಎಂದರು ಧನರಾಜ್.
ತಲೆಯಲ್ಲಿ ಕಸ ತುಂಬಿಕೊಂಡಿರುವವರು ಚಿತ್ರವನ್ನು ತ್ರಿವಿಕ್ರಮ್, ಉಗ್ರಂ ಮಂಜುಗೆ ನೀಡಿದರು. ಅನವಶ್ಯಕ ವಿಚಾರದಲ್ಲಿ ಮೂಗು ತೂರಿಸುವವರು ಚಿತ್ರವನ್ನು ಸುರೇಶ್ ಅವರು ಚೈತ್ರಾ ಕುಂದಾಪುರಗೆ ನೀಡಿದರು. ಎರಡು ನಾಲಗೆ ಇರುವ ವ್ಯಕ್ತಿಯ ಚಿತ್ರವನ್ನು ಉಗ್ರಂ ಮಂಜು ಅವರಿಗೆ ಐಶ್ವರ್ಯಾ ಅವರು ನೀಡಿದರು. ಹನುಮಂತು, ಸುರೇಶ್, ಭವ್ಯಾ ಅವರಿಗೆ ಯಾವುದೇ ಚಿತ್ರಗಳು ಬರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ