ಟಾರ್ಗೆಟ್ ಮಾಡಿ, ಹೊರಗೆ ಹಾಕಿ ಎಂದ ಐಶ್ವರ್ಯಾಗೆ ಕಿಚ್ಚನ ಕ್ಲಾಸ್
Bigg Boss Kannada: ಬಿಗ್ಬಾಸ್ ಕನ್ನಡ ಶನಿವಾರದ ಎಪಿಸೋಡ್ ಆರಂಭವಾಗುತ್ತಿದ್ದಂತೆ ನೇರವಾಗಿ ಐಶ್ವರ್ಯಾ ವಿಷಯ ಎತ್ತಿದ ಸುದೀಪ್, ವಿಡಿಯೋ ಒಂದನ್ನು ಪ್ಲೇ ಮಾಡುತ್ತೀನಿ ಎಂದು ಹೇಳಿ, ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಮಾತನಾಡುತ್ತಿರುವ ವಿಡಿಯೋ ಹಾಕಿದರು. ವಿಡಿಯೋನಲ್ಲಿ ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಅನ್ನು ಉದ್ದೇಶಿಸಿ ‘ಟಾರ್ಗೆಟ್ ಮಾಡಿ, ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಿ, ಜನಕ್ಕೂ ಅರ್ಥ ವಾಗುತ್ತಿದೆ. ಬಾಗಿಲಿನ ವರೆಗೆ ಕರೆದುಕೊಂಡು ಹೋಗುವ ಕೆಲಸ ನಾವು ಮಾಡೋಣ, ಆಚೆ ಕಳಿಸೋದನ್ನು ಜನ ಮಾಡುತ್ತಾರೆ’ ಎಂದಿದ್ದರು.
ಬಿಗ್ಬಾಸ್ ಮನೆಯಲ್ಲಿ ಗುಂಪುಗಳು, ಗೆಳೆತನಗಳು ಸಾಮಾನ್ಯ. ನಾಮಿನೇಟ್ ಮಾಡುವಾಗ, ಕಳಪೆ ಕೊಡುವಾಗ ಮಾತನಾಡಿಕೊಂಡಿದ್ದು, ಸಂಜ್ಞೆ ಮಾಡಿಕೊಂಡು ಟಾರ್ಗೆಟ್ ಮಾಡಿಕೊಂಡು ಕಳಪೆ, ನಾಮಿನೇಷನ್ ಕೊಟ್ಟಿರುವ ಹಲವು ಉದಾಹರಣೆ ಇದೆ. ಆದರೆ ಹೀಗೆ ಪೂರ್ವ ನಿರ್ಧಾರ ಮಾಡಿ, ಗುಂಪು ಮಾಡಿಕೊಂಡು ಯಾರೋ ಒಬ್ಬರನ್ನು ಟಾರ್ಗೆಟ್ ಮಾಡುವುದು ಬೇಡ ಎಂದು ಸುದೀಪ್ ಹಲವು ಬಾರಿ ಹೇಳಿದ್ದಾರೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಇದೀಗ ಇದೇ ಕಾರಣಕ್ಕೆ ಐಶ್ವರ್ಯಾ, ಸುದೀಪ್ ಕೈಯಲ್ಲಿ ಬೈಸಿಕೊಂಡರು.
ಶನಿವಾರದ ಎಪಿಸೋಡ್ ಆರಂಭವಾಗುತ್ತಿದ್ದಂತೆ ನೇರವಾಗಿ ಐಶ್ವರ್ಯಾ ವಿಷಯ ಎತ್ತಿದ ಸುದೀಪ್, ವಿಡಿಯೋ ಒಂದನ್ನು ಪ್ಲೇ ಮಾಡುತ್ತೀನಿ ಎಂದು ಹೇಳಿ, ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಮಾತನಾಡುತ್ತಿರುವ ವಿಡಿಯೋ ಹಾಕಿದರು. ವಿಡಿಯೋನಲ್ಲಿ ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಅನ್ನು ಉದ್ದೇಶಿಸಿ ‘ಟಾರ್ಗೆಟ್ ಮಾಡಿ, ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಿ, ಜನಕ್ಕೂ ಅರ್ಥ ವಾಗುತ್ತಿದೆ. ಬಾಗಿಲಿನ ವರೆಗೆ ಕರೆದುಕೊಂಡು ಹೋಗುವ ಕೆಲಸ ನಾವು ಮಾಡೋಣ, ಆಚೆ ಕಳಿಸೋದನ್ನು ಜನ ಮಾಡುತ್ತಾರೆ’ ಎಂದಿದ್ದರು.
ಈ ವಿಷಯವನ್ನೇ ಇಟ್ಟುಕೊಂಡು ಐಶ್ವರ್ಯಾ ಅವರನ್ನು ಪ್ರಶ್ನೆ ಮಾಡಿದ ಸುದೀಪ್, ಇದು ಆಟ ಆಡುವ ರೀತಿ ಅಲ್ಲ. ನೀವು ಹೀಗೆ ರಾಜಕೀಯ ಮಾಡಿಯೇ ಗೆಲ್ಲಬೇಕು ಎಂದರೆ ನನಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲೂ ಪರಿಚಯ ಇದೆ. ಸದಸ್ಯತ್ವ ಕೊಡಿಸುತ್ತೇನೆ ಎಂದರು. ಮುಂದುವರೆದು, ಮೋಕ್ಷಿಯಾ ಬಗ್ಗೆಯೂ ಮಾತನಾಡಿ, ‘ಹಿಂದೆ ನೀವೇ ಗುಂಪಾಗಿ ಆಡಿದವರ ಮೇಲೆ ಕೂಗಾಡಿದ್ದಿರಿ, ಕಿರುಚಾಡಿದ್ದಿರಿ, ಆದರೆ ಈಗ ನೀವೇ ಹೀಗೆ ಮಾಡುತ್ತಿದ್ದೀರ’ ಎಂದರು.
ಇದನ್ನೂ ಓದಿ:ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅರೆಸ್ಟ್: ಯಾವ ಪ್ರಕರಣ?
ಐಶ್ವರ್ಯಾ, ತಮ್ಮ ಮಾತುಗಳ ಬಗ್ಗೆ ಸ್ಪಷ್ಟನೆ ನೀಡುವ ಯತ್ನ ಮಾಡಿದರು. ಆದರೆ ಅದನ್ನು ಸುದೀಪ್ ಒಪ್ಪಲಿಲ್ಲ. ಅಲ್ಲದೆ, ಐಶ್ವರ್ಯಾ ಅವರ ಮಾತಿನ ಬಗ್ಗೆ ರಜತ್, ತ್ರಿವಿಕ್ರಮ್, ಭವ್ಯಾ ಇನ್ನಿತರರು ಅಸಮಾಧಾನ ವ್ಯಕ್ತಪಡಿಸಿದರು. ವಿಡಿಯೋನಲ್ಲಿ ಐಶ್ವರ್ಯಾ ಜೊತೆಗೆ ಇದ್ದ ಮೋಕ್ಷಿತಾ ಸಹ ಐಶ್ವರ್ಯಾ ಆಡಿದ ಮಾತಿನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 pm, Sat, 14 December 24