ಜಗದೀಶ್ ಮಾಡಿದ್ದು ತಪ್ಪು ಅನ್ನೋದಾದ್ರೆ ಮನೆಯಲ್ಲಿರುವ ಆ ಸ್ಪರ್ಧಿಗಳು ಮಾಡಿದ್ದು ಸರಿಯಾ?

|

Updated on: Oct 19, 2024 | 4:51 PM

ಬಿಗ್​ಬಾಸ್ ಕನ್ನಡ ಸೀಸನ್ 11 ರಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಅನ್ನು ಹೊರಗೆ ಹಾಕಲಾಗಿದೆ. ಇಬ್ಬರೂ ತಪ್ಪು ಮಾಡಿದ್ದಾರೆಂಬ ಕಾರಣಕ್ಕೆ ಹೊರಗೆ ಹಾಕಲಾಗಿದೆ. ಆದರೆ ತಪ್ಪು ಮಾಡಿದ್ದು ಅವರಿಬ್ಬರೇನಾ? ಮಾನಸ, ಚೈತ್ರಾ, ಉಗ್ರಂ ಮಂಜು, ಹಂಸಾ ಅವರುಗಳು ಮಾಡಿದ್ದೇನು?

ಜಗದೀಶ್ ಮಾಡಿದ್ದು ತಪ್ಪು ಅನ್ನೋದಾದ್ರೆ ಮನೆಯಲ್ಲಿರುವ ಆ ಸ್ಪರ್ಧಿಗಳು ಮಾಡಿದ್ದು ಸರಿಯಾ?
Follow us on

ಬಿಗ್​ಬಾಸ್ ಕನ್ನಡ ಸೀಸನ್ 11 ಕೇವಲ ಮೂರೇ ವಾರದಲ್ಲಿ ರಣ ರೋಚಕ ರಣಾಂಗಣವಾಗಿದೆ. ಮನೆಯಲ್ಲಿ ಜಗಳ, ಮುನಿಸು, ರಾಜಕೀಯ, ಹೊಡೆದಾಟ ಎಲ್ಲವೂ ಆಗಿ ಹೋಗಿವೆ. ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಲಾಯರ್ ಜಗದೀಶ್ ಅವರನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಜಗದೀಶ್​ ಮೇಲೆ ಕೈ ಮಾಡಿದರು ಎಂಬ ಕಾರಣಕ್ಕೆ ರಂಜಿತ್ ಅನ್ನು ಹೊರಗೆ ಕಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಹಜವಾಗಿಯೇ ಚರ್ಚೆ ನಡೆಯುತ್ತಿದ್ದು, ಜಗದೀಶ್-ರಂಜಿತ್​ದು ತಪ್ಪು ಎನ್ನುವುದಾದರೆ ಮನೆಯಲ್ಲಿರುವ ಕೆಲವು ಸ್ಪರ್ಧಿಗಳು ಮಾಡಿರುವುದು, ಮಾಡುತ್ತಿರುವುದು ಸರಿಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ಲಾಯರ್ ಜಗದೀಶ್​ ಮಹಿಳೆಯರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಸರಿ, ಆದರೆ ಅವರು ಸಿಟ್ಟಿಗೇಳಲು ಕಾರಣವಾಗಿದ್ದು ಯಾರು ಮತ್ತು ಏಕೆ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮಾನಸ ತಮ್ಮ ಮೊನಚಾದ ಮಾತುಗಳಿಂದ ಜಗದೀಶ್ ಅನ್ನು ರೊಚ್ಚಿಗೇಳಿಸಿದರು. ಚಪ್ಪಲಿಗೆ ಜಗದೀಶ್ ಅನ್ನು ಹೋಲಿಸಿದರು, ಗಂಡಸ್ತನಕ್ಕೆ ಸವಾಲು ಎಂಬರ್ಥದಲ್ಲಿ ಮಾತನಾಡಿದರು. ಏಕವಚನ ಬಳಸಿದರು. ಕುಟುಂಬದ ಬಗ್ಗೆಯೂ ಮಾತುಗಳು ಬಂದವು ಎಂಬುದನ್ನು ಕೆಲ ನೆಟ್ಟಿಗರು ಎತ್ತಿ ತೋರಿಸಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಸಹ ಜಗದೀಶ್​ ಜೊತೆ ಸಾಕಷ್ಟು ಹೊತ್ತು ಜಗಳ ಮಾಡಿದರು. ಅಸಲಿಗೆ ಜಗದೀಶ್ ಹಾಗೂ ಚೈತ್ರಾ ನಡುವೆ ಕೆಲ ದಿನದ ಹಿಂದೆಯೂ ಜಗಳವಾಗಿತ್ತು. ಚೈತ್ರಾ ಮೇಲೆ ಸಾಕಷ್ಟು ಕೇಸಿದೆ ಎಂದು ಜಗದೀಶ್ ಹೇಳಿದಾಗ, ರೋಲ್​ ಕಾಲ್ ಮಾಡುವ ಲಾಯರ್ ಎಂದು ಚೈತ್ರಾ ಹೇಳಿದ್ದರು. ಜಗಳವಾಗಿ ಕೈ-ಕೈ ಮಿಲಾಯಿಸಿದ ದಿನವೂ ಸಹ ಚೈತ್ರಾ ಕುಂದಾಪುರ ‘ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದೇ ಆದಲ್ಲಿ?’ ಎನ್ನುತ್ತಾ ಜಗದೀಶ್​ ವಿರುದ್ಧ ಕೀಳು ಮಾತುಗಳನ್ನು ಬಳಸಿದ್ದರು. ಇದೇ ವಿಷಯ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದು, ಹೆಣ್ಣು ಕೀಳಾಗಿ ಮಾತನಾಡಿದರೆ ತಪ್ಪಿಲ್ಲ, ಗಂಡು ಮಾತನಾಡಿದರೆ ತಪ್ಪಾ? ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೆ, ಉಗ್ರಂ ಮಂಜು, ಚಪ್ಪಲಿ ಎಸೆದು ಸ್ಪರ್ಧಿಯ ಮೇಲೆ ಎಸೆಯಲು ಮುಂದಾಗಿದ್ದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:ಬಿಗ್​ಬಾಸ್ ನಿಲ್ಲಿಸಿ, ಕೋರ್ಟ್ ಮೆಟ್ಟಿಲೇರಿದ ವೀಕ್ಷಕ, ನೊಟೀಸ್ ನೀಡಿದ ನ್ಯಾಯಾಲಯ

ತಪ್ಪು ಮಾಡಿದವರನ್ನು ಹೊರಗೆ ಹಾಕುವುದು ನಿಯಮವಾದರೆ, ಮಾನಸ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹಂಸಾ ಅವರನ್ನೂ ಸಹ ಮನೆಯಿಂದ ಹೊರಗೆ ಹಾಕಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇಂದು ವೀಕೆಂಡ್ ಪಮಚಾಯಿತಿ ನಡೆಯಲಿದೆ. ಜಗದೀಶ್, ರಂಜಿತ್ ಹೊರ ಹಾಕಲ್ಪಟ್ಟ ಬಳಿಕ ನಡೆಯುತ್ತಿರುವ ಮೊದಲ ಪಂಚಾಯಿತಿ ಇದಾಗಿದ್ದು ಕಿಚ್ಚ ಸುದೀಪ್, ಈ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳುತ್ತಾರೆಯೇ? ಅಥವಾ ಜಗದೀಶ್-ರಂಜಿತ್ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಿದೆ ಎಂದು ಸುಮ್ಮನಾಗುತ್ತಾರೆಯೇ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ