AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು

Bigg Boss Kannada season 11: ಕಳೆದ ವಾರ ಮನೆ ಸದಸ್ಯರು ಅಷ್ಟೆಲ್ಲ ಜಗಳ, ಗಲಾಟೆ ಮಾಡಿದ್ದರೂ ಸಹ ಕಿಚ್ಚ ಸುದೀಪ್ ಸ್ಪರ್ಧಿಗಳಿಗಾಗಿ ಕೇಕ್ ಕಳಿಸಿಕೊಟ್ಟಿದ್ದರು. ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು, ಆದರೆ ಬಳಿಕ ವಿಷಯ ತಿಳಿದು ಎಲ್ಲರೂ ಪೆಚ್ಚಾದರು.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು
ಮಂಜುನಾಥ ಸಿ.
|

Updated on: Oct 19, 2024 | 11:27 PM

Share

ಈ ವಾರದ ಬಿಗ್​ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್​ ಬಹಳ ಗರಂ ಆಗಿತ್ತು. ಮನೆಯಲ್ಲಿ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳು ಚರ್ಚಿಸಲು ಇದ್ದವು. ಸುದೀಪ್ ಎಂದಿನಂತೆ ಸ್ಟೈಲ್ ಆಗಿ ಎಂಟ್ರಿ ನೀಡಿದರು. ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್​ಬಾಸ್ ಮನೆಯೊಳಗೆ ಒಂದು ಕೇಕ್ ಅನ್ನು ಕಳಿಸಿದರು.

ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ಕೇಕ್ ಮೇಲೆ ‘ಅಭಿನಂದನೆಗಳು’ ಎಂದು ಬರೆದಿತ್ತು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು ಪರಸ್ಪರರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಕೇಕ್ ತಿಂದಿದ್ದು ಮುಗಿದ ಬಳಿಕ ವಿಷಯ ಹೇಳಿದರು ಸುದೀಪ್.

ಪ್ರತಿ ಬಾರಿ ಮಾಧ್ಯಮದವರು, ನಿಮ್ಮ ಪಾಲಿಗೆ ಕೆಟ್ಟ ಸೀಸನ್ ಯಾವುದಾಗಿತ್ತು? ಎಂದು ಕೇಳಿದಾಗಲೆಲ್ಲ ನಾನು ಸೀಸನ್ 6 ಅಥವಾ ಬ್ಯಾಚ್ ನಂಬರ್ 6 ಎಂದು ಹೇಳುತ್ತಿದ್ದೆ. ಆದರೆ ನೀವು ಅದನ್ನು ರೀಪ್ಲೇಸ್ ಮಾಡಿದ್ದೀರಿ. ಕೆಟ್ಟ ಬ್ಯಾಚ್ ಯಾವುದಾಗಿತ್ತು ಎಂದು ಕೇಳಿದಾಗ ಸೀಸನ್ 6 ಎನ್ನುವ ಬದಲಿಗೆ ಇನ್ನು ಮುಂದೆ ಸೀಸನ್ 11 ಎನ್ನಬಹುದು. ನನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿದ್ದಕ್ಕೆ ನಿಮಗೆ ಅಭಿನಂದನೆ ಎಂದು ನಾನೇ ಕೇಕ್ ಕಳಿಸಿದ್ದೆ’ ಎಂದರು. ಸುದೀಪ್​ರ ಮಾತು ಕೇಳಿ ಖುಷಿಯಾಗಿ ಕೇಕ್ ತಿಂದಿದ್ದ ಸ್ಪರ್ಧಿಗಳೆಲ್ಲರೂ ಪೆಚ್ಚಾದರು.

ಇದನ್ನೂ ಓದಿ:ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?

ಅಸಲಿಗೆ ಈವರೆಗಿನ ಸೀಸನ್​ಗಳಲ್ಲಿ ಅತ್ಯಂತ ಕೆಟ್ಟ ಸೀಸನ್ ಇದು ಎಂಬ ಅಭಿಪ್ರಾಯ ಕೇವಲ ಮೂರೇ ವಾರಕ್ಕೆ ಮೂಡಿಬಿಟ್ಟಿದೆ. ಮನೆಯಲ್ಲಿ ಬರೀ ಗಲಾಟೆಗಳೇ ನಡೆಯುತ್ತಿವೆ. ಫನ್ ಎನ್ನುವುದೇ ಇಲ್ಲದಂತಾಗಿದೆ. ಆಟ ಆಡಿ ಗೆಲ್ಲೋಣ ಎನ್ನುವುದಕ್ಕಿಂತಲೂ ಜಗಳ ಆಡಿಯೇ ಬಿಗ್​ಬಾಸ್ ಗೆಲ್ಲಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದವರಂತೆ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಅತ್ಯಂತ ಕೆಟ್ಟ ಪದಗಳನ್ನು ಬಳಸುವುದು, ಸುಮ್ಮ-ಸುಮ್ಮನೆ ಕಿತ್ತಾಡುವುದು ಬಿಗ್​ಬಾಸ್ ಮನೆಯಲ್ಲಿ ಇದೇ ನಡೆಯುತ್ತಿದೆ. ಹಾಗಾಗಿಯೇ ಸುದೀಪ್ ಇದನ್ನು ಅತ್ಯಂತ ಕೆಟ್ಟ ಬ್ಯಾಚ್​ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ