ಮೂರನೇ ವಾರಕ್ಕೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಸ್ಪರ್ಧಿಗೆ ವಿಶೇಷ ಅಧಿಕಾರ
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ದಿನ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಭಾರಿ ಜಗಳಗಳು ನಡೆದು ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ಹೊಸ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ. ಅವರಿಗೆ ವಿಶೇಷ ಅಧಿಕಾರ ಸಹ ದೊರೆತಿದೆ.
‘ಬಿಗ್ ಬಾಸ್ ಕನ್ನಡ’ದ 11ನೇ ಸೀಸನ್ ಈಗಾಗಲೇ ಶುರವಾಗಿದೆ. ಮೂರು ವಾರಗಳನ್ನು ಈ ಶೋ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಗೊಂದು ವೈಲ್ಡ್ ಕಾರ್ಡ್ನ ಆಗಮನ ಆಗಿದೆ. ಹೌದು, ದೊಡ್ಮನೆಯಲ್ಲಿ ಮಧ್ಯದಲ್ಲಿಯೇ ಇಬ್ಬರು ಎಲಿಮಿನೇಟ್ ಆದ ಕಾರಣದಿಂದಲೋ ಏನೋ ಹೊಸಬರನ್ನು ಒಳಗೆ ಕರೆ ತರಲಾಗಿದೆ. ದೊಡ್ಮನೆ ಒಳಗೆ ಕಾಲಿಟ್ಟ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ನೀಡುತ್ತೇವೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಇಬ್ಬರು ದೊಡ್ಮನೆಯಿಂದ ಎಲಿಮಿನೇಟ್ ಕೂಡ ಆದರು. ಇದಕ್ಕೆ ಕಾರಣ ಆಗಿದ್ದು ದೊಡ್ಮನೆಯ ಜಗಳ. ಹೌದು, ದೊಡ್ಮನೆಯಲ್ಲಿ ದೀರ್ಘ ಕಾಲ ಜಗಳ ನಡೆಯಿತು. ಇದರಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಔಟ್ ಆದರು. ಈಗ ದೊಡ್ಮನೆ ಒಳಗೆ ಹನುಮಂತ ಅವರ ಆಗಮನ ಆಗಿದೆ.
View this post on Instagram
ಕಲರ್ಸ್ ಕನ್ನಡವು ಈಗ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಗಾಯಕ ಹನುಮಂತ ಅವರ ಆಗಮನ ಆಗಿದೆ. ಹನುಮಂತ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ‘ಸರೆಗಮಪ..’ರಿಯಾಲಿಟಿ ಶೋಗೆ ಬಂದಿದ್ದ ಅವರು ನಂತರ ಸಾಕಷ್ಟು ಜನಪ್ರಿಯತೆ ಪಡೆದರು. ‘ಕಾಮಿಡಿ ಕಿಲಾಡಿಗಳು’ ರೀತಿಯ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಅವರು ಕುರಿ ಕಾಯುತ್ತಾ ಇದ್ದವರು. ಅವರಿಗೆ ಈಗ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
‘ಬಿಗ್ ಬಾಸ್’ಗೆ ಬಂದ ಕೂಡಲೇ ಅವರಿಗೆ ವಿಶೇಷ ಅಧಿಕಾರವೂ ಸಿಕ್ಕಿದೆ. ಅವರು ಕ್ಯಾಪ್ಟನ್ ಆಗಿದ್ದಾರೆ. ದೊಡ್ಮನೆಯಲ್ಲಿ ಕ್ಯಾಪ್ಟನ್ ಆದ ಅವರಿಗೆ ಅಭಿನಂದನೆ ತಿಳಿಸಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕೇವಲ ಫೈಟ್ಗಳು ಜಾಸ್ತಿ ಇದ್ದವು. ಇದು ಮಿತಿಮೀರಿದ್ದರಿಂದ ಯಾವುದೇ ಕಾಮಿಡಿ ಘಟನೆಗಳು ನಡೆಯುತ್ತಲೇ ಇರಲಿಲ್ಲ. ಈಗ ಹಾಸ್ಯ ಮಾಡುವ ಉದ್ದೇಶದಿಂದಲೇ ಅವರನ್ನು ಕರೆತರಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾಗಿ ತಿಂಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿಯನ್ನು ಕೊಡಿಸಲಾಗುತ್ತದೆ. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ವಾರದ ಮಧ್ಯದಲ್ಲೇ ಇಬ್ಬರು ಹೋಗಿದ್ದರಿಂದ ಮೂರೇ ವಾರಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯ ಆಗಮನ ಆಗಿದೆ ಅನ್ನೋದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sun, 20 October 24