ಬಿಗ್ಬಾಸ್ (Bigg Boss) ಮನೆಯಲ್ಲಿ ಶುಕ್ರವಾರದ ಎಪಿಸೋಡ್ ಆ ವಾರದ ಕಳಪೆ ಹಾಗೂ ಉತ್ತಮ ಯಾರೆಂಬುದನ್ನು ಗುರುತಿಸುವ ಹಾಗೂ ಮನೆಯ ಮುಂದಿನ ವಾರದ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಎಪಿಸೋಡ್ ಆಗಿರುತ್ತದೆ. ಬಿಗ್ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಆಗಿರುವ ಡ್ರೋನ್ ಪ್ರತಾಪ್ಗೆ ಈ ವಾರದ ಕಳಪೆಯನ್ನು ಬಹುತೇಕ ಬಿಗ್ಬಾಸ್ ಮನೆ ಸದಸ್ಯರು ನೀಡಿದರು. ಮೊದಲಲ್ಲೇ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರದಬ್ಬಿಸಿಕೊಂಡ ನಮ್ರತಾ ಮನೆಯವರಿಂದ ಉತ್ತಮ ಪಡೆದುಕೊಂಡರು.
ಡ್ರೋನ್ ಪ್ರತಾಪ್ ಈ ವಾರ ತಂಡದ ಲೀಡರ್ ಆಗಿ ತೆಗೆದುಕೊಂಡ ನಿರ್ಧಾರಗಳು ಹಲವರಿಗೆ ಇಷ್ಟವಾಗಲಿಲ್ಲ. ಆರಂಭದಲ್ಲಿಯೇ ತಂಡದ ಪ್ರಬಲ ಆಟಗಾರ ಕಾರ್ತಿಕ್ ಅನ್ನು ಕ್ಷುಲ್ಲಕ ಕಾರಣಕ್ಕೆ ತಂಡದಿಂದ ಹೊರಗಿಟ್ಟು ತಮ್ಮ ತಂಡವನ್ನು ತಾವೇ ವೀಕ್ ಮಾಡಿಕೊಂಡರು. ಬಳಿಕ ನಮ್ರತಾರಿಗೆ ಮಾತುಕೊಟ್ಟು ತಮ್ಮ ತಂಡಕ್ಕೆ ಕರೆದುಕೊಂಡು ಬಂದಿದ್ದ ಪ್ರತಾಪ್ ಮೊದಲಲ್ಲೇ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟರು. ಅಲ್ಲದೆ ಇನ್ನೂ ಕೆಲವು ಹಂತಗಳಲ್ಲಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾದರು. ಹಾಗಾಗಿ ಅವರ ತಂಡ ಪ್ರಬಲ ಹೋರಾಟವೇ ಇಲ್ಲದೆ ಎದುರಾಳಿ ತಂಡದ ವಿರುದ್ಧ ಸೋತಿತು.
ಇದನ್ನೋ ಓದಿ:ಕಿವಿ ಹಿಡಿದು ಮಂಡಿ ಬಗ್ಗಿಸಿ ಬಿಗ್ಬಾಸ್ಗೆ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್: ಮಾಡಿದ ತಪ್ಪೇನು?
ಇದೇ ಕಾರಣಕ್ಕೆ, ಕಾರ್ತಿಕ್, ನಮ್ರತಾ, ವಿನಯ್, ಮೈಖಲ್, ಪವಿ, ಡ್ರೋನ್ರ ಸ್ನೇಹಿತರೇ ಆಗಿರುವ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಸಹ ಪ್ರತಾಪ್ಗೆ ಕಳಪೆ ಪಟ್ಟ ನೀಡಿದರು. ಸಂಗೀತಾ, ತುಕಾಲಿ ಅವರಿಗೆ ಕಳಪೆ ಕೊಟ್ಟರೆ, ಸಿರಿ ಅವರು ಸ್ನೇಹಿತ್ಗೆ ಕಳಪೆ ನೀಡಿದರು. ಡ್ರೋನ್ ಪ್ರತಾಪ್, ವಿನಯ್ಗೆ ಕಳಪೆ ಪಟ್ಟ ನೀಡಿದರು. ಉತ್ತಮವನ್ನು ಅವರು ನಮ್ರತಾ ಅವರಿಗೇ ಕೊಟ್ಟರು. ಇನ್ನು ಮನೆಯ ಹಲವು ಸದಸ್ಯರು ಈ ವಾರ ಚೆನ್ನಾಗಿ ಆಡಿದ ನಮ್ರತಾಗೆ ಉತ್ತಮ ನೀಡಿದರು. ಸಿರಿ ಅವರಿಗೂ ಒಂದು ಉತ್ತಮ ಬಂದರೆ, ಪವಿ ಅವರಿಗೆ ಸಂಗೀತಾ ಉತ್ತಮ ನೀಡಿದರು. ಸ್ನೇಹಿತ್ಗೆ ಮೈಖಲ್ ಉತ್ತಮ ನೀಡಿದರು.
ಇನ್ನು ಕ್ಯಾಪ್ಟೆನ್ಸಿ ಟಾಸ್ಕ್ನ ಕೊನೆಯ ಟಾಸ್ಕ್ನಲ್ಲಿ ತನಿಷಾ ಪರವಾಗಿ ನಮ್ರತಾ ಆಡಿದರು. ಎದುರಾಳಿಯಾಗಿ ಇದ್ದಿದ್ದು ಸ್ನೇಹಿತ್. ತುಸು ಸರಳವಾಗಿಯೇ ಇದ್ದ ಆ ಟಾಸ್ಕ್ನಲ್ಲಿ ಆರಂಭದಲ್ಲಿ ನಮ್ರತಾ ಮುಂದಿದ್ದರು, ಆದರೆ ಮೈಖಲ್ರ ಸಲಹೆಯಂತೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಸ್ನೇಹಿತ್ ಸುಲಭಕ್ಕೆ ಗೆದ್ದು ಮನೆಯ ಕ್ಯಾಪ್ಟನ್ ಆದರು. ಗೆಲುವನ್ನು ವಿನಯ್ಗೆ ಅರ್ಪಿಸಿದರು. ವಿನಯ್ ಅನ್ನು ತನ್ನ ಅಣ್ಣ ಎಂದು ಕರೆಯುತ್ತಾ ಭಾವುಕರಾಗಿ ಕಣ್ಣೀರು ಸಹ ಹಾಕಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ