ತಾಯಿ ನಿಧನ ಬಳಿಕ ಮೊದಲ ಬಾರಿಗೆ ಕಿಚ್ಚ ಸುದೀಪ್ ಬಿಗ್ಬಾಸ್ ವೇದಿಕೆಗೆ ಬಂದಿದ್ದರು. ಸುದೀಪ್ ಅಕ್ಟೋಬರ್ 20 ರಂದು ಸುದೀಪ್ರ ತಾಯಿ ಸರೋಜಮ್ಮ ನಿಧನರಾದ ಬಳಿಕ ಅವರು ಬಿಗ್ಬಾಸ್ ವೇದಿಕೆಗೆ ಬಂದಿರಲಿಲ್ಲ.ಆದರೆ ಒಂದೇ ವಾರಕ್ಕೆ ದುಃಖವನ್ನೆಲ್ಲ ಬದಿಗೊತ್ತಿ ಬಿಗ್ಬಾಸ್ ವೇದಿಕೆಗೆ ಮರಳಿದ್ದಾರೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಸುದೀಪ್ ಇಲ್ಲದ ಸಮಯದಲ್ಲಿ ಬಿಗ್ಬಾಸ್ ಮನೆಗೆ ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಹನುಮಂತುವನ್ನು ಸ್ವಾಗತಿಸಿದ ಸುದೀಪ್, ಹನುಮಂತು ಆಡುತ್ತಿರುವ ರೀತಿಗೆ ಮಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಎಪಿಸೋಡ್ನಲ್ಲಿ ಮೊದಲಿಗೆ ಹನುಮಂತನಿಗೆ ಸ್ವಾಗತ ಕೋರಿದ ಕಿಚ್ಚ ಸುದೀಪ್, ಆ ನಂತರ ಅವರು ಎರಡು ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹನುಮಂತು ಬಿಗ್ಬಾಸ್ ಮನೆಗೆ ಬಂದಾಗಲೇ ಕ್ಯಾಪ್ಟನ್ ಅಧಿಕಾರ ಅವರಿಗೆ ಕೊಡಲಾಗಿತ್ತು, ಅದಾದ ಬಳಿಕ ಟಾಸ್ಕ್ನಲ್ಲಿ ಗೆದ್ದು ಹನುಮಂತು ಕ್ಯಾಪ್ಟನ್ ಆದರು. ಇದಕ್ಕಾಗಿ ಸುದೀಪ್ ಹನುಮಂತುಗೆ ಭೇಷ್ ಎಂದರು.
ಆದರೆ ಅದಾದ ಬಳಿಕ ‘ಹನುಮಂತು ಸ್ವಯಂ ಪ್ರಯತ್ನದಿಂದ ಗೆದ್ದರೇ?’ ಅಥವಾ ಬೇರೆಯವರ ತಂತ್ರದಿಂದ ಗೆದ್ದರೆ?’ ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದರು. ಇದು ಎಲ್ಲರಿಗೂ ಕುತೂಹಲ ಮೂಡಿಸಿತು, ಹನುಮಂತು ನಿಯತ್ತಿನಿಂದ ಆಡಿ ಗೆಲ್ಲಲಿಲ್ಲವೇ ಎಂಬ ಅನುಮಾನವನ್ನೂ ಸಹ ಮೂಡಿಸಿತು. ಆದರೆ ಆ ಬಳಿಕ ಸ್ವತಃ ಸುದೀಪ್ ಅವರೇ ಹೇಳಿದಂತೆ ಕೆಲವರು ಬಾಕ್ಸ್, ಪಿಲ್ಲರ್ ಟಾಸ್ಕ್ ಗೆಲ್ಲಲು ಸಾಕಷ್ಟು ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದರು ಆದರೆ ಅವರ ಕುತಂತ್ರಗಳೆಲ್ಲ ವಿಫಲವಾಗಿ ಕೊನೆಗೆ ಹನುಮಂತು ಗೆದ್ದರು.
ಇದನ್ನೂ ಓದಿ:ನನ್ನ ಬದಲು ಬಿಗ್ಬಾಸ್ ನಿರೂಪಣೆಗೆ 2-3 ಹೆಸರು ಕೇಳಿಬರುತ್ತಿದೆ: ಸುದೀಪ್
ಮಂಜು, ಗೌಥಮಿ, ಚೈತ್ರಾ, ಸುರೇಶ್ ಇನ್ನೂ ಕೆಲವರು ಈ ಕುತಂತ್ರದಲ್ಲಿ ಭಾಗಿ ಆಗಿದ್ದರು. ಅವರಿಗೆಲ್ಲ ಮಾತಿನ ಮೂಲಕ ಚಾಟಿ ಬೀಸಿದ ಸುದೀಪ್ ಸ್ವಂತ ಬದಲ ಮೇಲೆ ಆಡಿ ಗೆದ್ದು ಕ್ಯಾಪ್ಟನ್ ಆದ ಹನುಮಂತುಗೆ ಕಿಚ್ಚನ ಚಪ್ಪಾಳೆ ನೀಡಿದರು. ಹನುಮಂತು ಬಂದ ಮೇಲೆ ಮನೆಯ ವಾತಾವರಣ ನಿಜಕ್ಕೂ ಬದಲಾಗಿದೆ. ಈ ಮೊದಲು ಬರೀ ಜಗಳದಲ್ಲೇ ನಿರತವಾಗಿದ್ದ ಮನೆಯಲ್ಲಿ ಈಗ ತಮಾಷೆ ಆಟ, ಹಾಡುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ