
ಬಿಗ್ ಬಾಸ್ (Bigg Boss) ಮನೆಯಲ್ಲಿ ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಯಾವಾಗಲೂ ಗಂಭೀರವಾಗಿಯೇ ಕಿರಿಕ್ಗಳು ಆಗುತ್ತಾ ಇರುತ್ತವೆ. ಕಾವ್ಯಾ ಆಗಾಗ ಗಿಲ್ಲಿ ಮೇಲೆ ರೇಗಾಡುತ್ತಾರೆ. ಆದರೆ, ಗಿಲ್ಲಿ ಮಾತ್ರ ಯಾವಾಗಲೂ ಕಾವ್ಯಾ ಮೇಲೆ ಕೋಪ ತೋರಿಸಿಲ್ಲ. ಈಗ ಡಿಸೆಂಬರ್ 19ರ ಎಪಿಸೋಡ್ನಲ್ಲಿ ಗಿಲ್ಲಿಗೆ ಕಾವ್ಯಾ ಅವರು ಗಂಭೀರವಾಗಿಯೇ ವಾರ್ನ್ ಮಾಡಿದ್ದಾರೆ. ಆದರೆ, ಗಿಲ್ಲಿ ಇದನ್ನು ಹಗುರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ಗೆ ಬಂದಾಗ ಕಾವ್ಯಾ ಜೊತೆ ಜಂಟಿ ಆದರು. ಕೆಲ ವಾರ ಇಬ್ಬರೂ ಒಟ್ಟಿಗೆ ಇರಬೇಕಾಯಿತು. ಬಿಗ್ ಬಾಸ್ ಹೊರಗೂ ಇವರ ಪರಿಚಯ ಇದ್ದಿದ್ದರಿಂದ ಕೆಮಿಸ್ಟ್ರಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿತು. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಚಿತ್ರಣ ಬದಲಾಗಿದೆ.
ಕಾವ್ಯಾ ಅವರು ಅನೇಕ ಬಾರಿ ಗಿಲ್ಲಿ ಮೇಲೆ ರೇಗಾಡಿದ್ದಾರೆ. ಗಿಲ್ಲಿ ಅವರು ನಡೆದುಕೊಳ್ಳುವ ರೀತಿ ಕಾವ್ಯಾಗೆ ಇಷ್ಟ ಆಗೋದಿಲ್ಲ. ಇದನ್ನು ನೇರವಾಗಿ ಹೇಳಿದಾಗ ಅವರು ತಿದ್ದಿಕೊಳ್ಳೋದಿಲ್ಲ. ಡಿಸೆಂಬರ್ 19ರ ಎಪಿಸೋಡ್ನಲ್ಲಿ ಏರು ಧ್ವನಿಯಲ್ಲಿ ಮಾತನಾಡಿದ್ದು ಸರಿ ಅಲ್ಲ ಎಂಬುದನ್ನು ಚಾಕೋಲೇಟ್ ನೀಡಿ ಇತರ ಸ್ಪರ್ಧಿಗಳಿಗೆ ಹೇಳಬೇಕಿತ್ತು. ಗಿಲ್ಲಿ ಅವರು ಕಾವ್ಯಾಗೆ ಈ ಮಾತನ್ನು ಹೇಳಿದರು. ಹೋಗುವಾಗ ಗಿಲ್ಲಿ ಅವರು ಕಾವ್ಯಾಗೆ ಕೈ ಕೊಡೋ ಪ್ರಯತ್ನ ಮಾಡಿದರು. ಆದರೆ, ಅವರು ಕೇರೇ ಮಾಡದೇ ಹೋದರು. ಇದು ಕೂಡ ಚರ್ಚೆಗೆ ಕಾರಣ ಆಗಿದೆ.
ಇದನ್ನೂ ಓದಿ: ಒಂದಲ್ಲಾ ಒಂದು ದಿನ ನಾನು ದೊಡ್ಡ ಸೆಲೆಬ್ರಿಟಿ ಆಗ್ತೀನಿ ಎಂದಿದ್ದ ಗಿಲ್ಲಿ ನಟ
ನಂತರ ಕಾವ್ಯಾ ಮೊಟ್ಟೆಯನ್ನು ತೆಗೆದುಕೊಳ್ಳಲು ಗಿಲ್ಲಿ ಹೋದರು. ಇದು ಕಾವ್ಯಾಗೆ ಕೋಪ ತರಿಸಿದೆ. ‘ನಿನಗೆ ಮಾನ, ಮರ್ಯಾದೆ, ಸ್ವಾಭಿಮಾನ ಏನು ಇಲ್ಲ’ ಎಂದು ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ವಿರೋಧ ಹೊರಹಾಕಿಲ್ಲ. ‘ನಾನು ಇದಕ್ಕೆ ವಿರೋಧ ಹೊರಹಾಕಲ್ಲ. ನನಗೆ ಮಾನ-ಮರ್ಯಾದೆ ಇದೆ ಎಂದು ಒಪ್ಪಿಕೊಂಡಿದ್ದೀನಿ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Sat, 20 December 25