ಬಿಗ್ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರತಿ ಶನಿವಾರದಂತೆ ಸುದೀಪ್, ಇಡೀ ವಾರದ ವಿಶ್ಲೇಷಣೆ ಮಾಡಿದರು. ಈ ವಾರ ಅವರಿಗೆ ಮಾತನಾಡಲು ಸಾಕಷ್ಟು ಸರಕನ್ನು ಮನೆಯ ಸ್ಪರ್ಧಿಗಳು ಮೊದಲೇ ನೀಡಿದ್ದರು. ಮಹರಾಜ-ಮಹಾರಾಣಿ ಟಾಸ್ಕ್ ಅನ್ನು ಬಿಗ್ಬಾಸ್ ಈ ಬಾರಿ ನೀಡಿದ್ದರು. ಮಹಾರಾಜ ಆಗಿದ್ದ ಉಗ್ರಂ ಮಂಜು ಮೊದಲಿಗೆ ಚೆನ್ನಾಗಿ ನಿಭಾಯಿಸಿದ್ದರು. ಆದರೆ ಯಾವಾಗ ಮೋಕ್ಷಿತಾ ಮಹಾರಾಣಿ ಆಗಿ ಬಂದರೋ ಇಡೀ ಮನೆಯ ವಾತಾವಾರಣವೇ ಬದಲಾಯ್ತು. ಇಬ್ಬರೂ ವೈಯಕ್ತಿಕ ಆಟ ಆಡಲು ಆರಂಭಿಸಿ ಇಡೀ ಟಾಸ್ಕ್ನ ದಿಕ್ಕನ್ನು ತಪ್ಪಿಸಿದರು. ಇದನ್ನೇ ಸುದೀಪ್ ಕಟುವಾಗಿ ಟೀಕೆ ಮಾಡಿದರು.
ಇಷ್ಟು ವಾರಗಳಲ್ಲಿ ಬಿಗ್ಬಾಸ್ ಕೊಟ್ಟಿದ್ದ ಟಾಸ್ಕ್ಗಳಲ್ಲೇ ಈ ವಾರ ಕೊಟ್ಟ ಟಾಸ್ಕ್ ಬಹಳ ಕ್ರಿಯೇಟಿವ್ ಆಗಿತ್ತು, ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿತ್ತು, ಎಲ್ಲರಿಗೂ ಅವರವರ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿತ್ತು. ಟಾಸ್ಕ್ ಬಹಳ ಚೆನ್ನಾಗಿ ಪ್ರಾರಂಭ ಆಗಿತ್ತು. ಆದರೆ ಅದನ್ನು ಕೆಲವರು ಅದನ್ನು ಹಾಳು ಮಾಡಿಕೊಂಡರು’ ಎಂದ ಸುದೀಪ್, ವಿಶೇಷವಾಗಿ ಉಗ್ರಂ ಮಂಜು, ಮೋಕ್ಷಿತಾ ಅವರನ್ನು ಟೀಕೆ ಮಾಡಿದರು.
ಇಬ್ಬರೂ ಸಹ ಟಾಸ್ಕ್ ಅನ್ನು ಟಾಸ್ಕ್ ರೀತಿ ಆಡಲಿಲ್ಲ. ಇಬ್ಬರೂ ಸಹ ಯಾವುದೇ ಹಂತದಲ್ಲೂ ಟಾಸ್ಕ್ ಗೆ ಜೀವ ತುಂಬುವ ಅವಕಾಶ, ಅಧಿಕಾರ ಹೊಂದ್ದಿರಿ ಆದರೆ ಇಬ್ಬರೂ ಸಹ ಆ ಕಾರ್ಯ ಮಾಡಲಿಲ್ಲ. ಉಗ್ರಂ ಮಂಜು ಅವರು ಟಾಸ್ಕ್ ಅನ್ನು ಅದ್ಭುತವಾಗಿ ಆಡಿದರು. ಅವರಂತೆ ಇನ್ಯಾರೂ ಸಹ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಇಲ್ಲ ಎಂಬ ರೀತಿ ಪಾತ್ರವನ್ನು ನಿಭಾಯಿಸಿದಿರಿ ಆದರೆ ಒಂದು ಬಾರಿ ಎಡವಿ ಬಿದ್ದರೆ ಮುಗಿಯಿತು. ಮಾಡಿದ ಎಲ್ಲವೂ ನೀರಲ್ಲಿ ಹೋಮ’ ಎಂದರು ಸುದೀಪ್.
ಇದನ್ನೂ ಓದಿ:‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು
ಗೌತಮಿ ಸಹ, ಟಾಸ್ಕ್ ಆಡಲಿಲ್ಲ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಅದನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬರ್ಥದ ಮಾತುಗಳನ್ನಾಡಿದ ಸುದೀಪ್. ಮನೆಯ ಎಲ್ಲ ಸದಸ್ಯರಿಗೆ ಒಟ್ಟಿಗೆ ಸೇರಿ, ‘ಇಲ್ಲಿ ನೀವು ಸಂಬಂಧ ಬೆಳೆಸಲು ಬಂದಿಲ್ಲ. ಟಾಸ್ಕ್ ಇಲ್ಲದಾಗ ಕೂತು ಒಂದೆರಡು ಮಾತು ಮಾತನಾಡಲು ಸಂಬಂಧ ಸರಿ ಅದಕ್ಕೆ ಮೀರಿದ್ದು ಇಲ್ಲಿ ಯಾವುದೂ ಸಹ ಸಹ ಇಲ್ಲ. ಜನ ನಿಮ್ಮ ಸಂಬಂಧಗಳನ್ನು ನೋಡಲು ಬಿಗ್ಬಾಸ್ ನೋಡುವುದಿಲ್ಲ. ಅದಕ್ಕೆ ಧಾರಾವಾಹಿಗಳಿವೆ, ಆದರೆ ಜನ ಬಿಗ್ಬಾಸ್ ನೋಡುವುದು ಬಿಗ್ಬಾಸ್ ಕಾರಣಕ್ಕೆ, ಅದನ್ನು ಸರಿಯಾಗಿ ನಿಭಾಯಿಸಿ. ನೀವು ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಬೇಕಾದರೆ ಸಂಬಂಧಗಳನ್ನು ಬೆಳೆಸಿಕೊಳ್ಳಿ’ ಎಂದು ಖಾರವಾಗಿ ಹೇಳಿದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ