ಮಂಜು ಮದ ಇಳಿಸಿದ ರಜತ್; ಶೋಭಾ ಸೈಲೆಂಟ್-ರಜತ್ ವೈಲೆಂಟ್

ಮಂಜು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇಡೀ ಮನೆಯಲ್ಲಿ ಆಟದಲ್ಲಿ ಕುತಂತ್ರ ರೂಪಿಸೋದರಲ್ಲಿ ಅವರೇ ಮುಂದು. ಈ ಬಾರಿ ಈ ಅವಕಾಶ ರಜತ್​ಗೆ ಸಿಕ್ಕಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿತ್ತು. ಆಗ ರಜತ್ ಅವರು ಮೊದಲು ಎಲಿಮಿನೇಟ್ ಮಾಡಿದ್ದೇ ಗೌತಮಿ ಅವರನ್ನು. ನಂತರ ಮಂಜುನ ಎಲಿಮಿನೇಟ್ ಮಾಡಿದ್ದರು.

ಮಂಜು ಮದ ಇಳಿಸಿದ ರಜತ್; ಶೋಭಾ ಸೈಲೆಂಟ್-ರಜತ್ ವೈಲೆಂಟ್
ಮಂಜು
Follow us
ರಾಜೇಶ್ ದುಗ್ಗುಮನೆ
|

Updated on: Nov 30, 2024 | 8:40 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ‘ಉಗ್ರಂ’ ಮಂಜು ಮೆರೆಯುತ್ತಿದ್ದರು. ನನಗೆ ನಾನೇ ಸಾಟಿ ಎಂದು ಬೀಗುತ್ತಿದ್ದರು. ಅವರಿಗೆ ಸೆಡ್ಡು ಹೊಡೆಯೋಕೆ ಒಬ್ಬರ ಅವಶ್ಯಕತೆ ಇತ್ತು. ಇದಕ್ಕೆ ಸರಿಯಾಗಿ ರಜತ್ ಹಾಗೂ ಶೋಭಾ ಅವರನ್ನು ಕರೆತರಲಾಯಿತು. ಶೋಭಾ ಸೈಲೆಂಟ್ ಆದರೆ ರಜತ್ ಮಾತ್ರ ವೈಲೆಂಟ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಅವರು ಮಂಜುನ ಮದ ಇಳಿಸುವ ಪ್ರಯತ್ನದಲ್ಲಿ ಇದ್ದಾರೆ. ಅವರ ಆಟಕ್ಕೆ ಅನೇಕರಿಂದ ಮೆಚ್ಚುಗೆ ಸಿಕ್ಕಿದೆ.

ಮಂಜು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇಡೀ ಮನೆಯಲ್ಲಿ ಆಟದಲ್ಲಿ ಕುತಂತ್ರ ರೂಪಿಸೋದರಲ್ಲಿ ಅವರೇ ಮುಂದು. ಈ ಬಾರಿ ಈ ಅವಕಾಶ ರಜತ್​ಗೆ ಸಿಕ್ಕಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿತ್ತು. ಆಗ ರಜತ್ ಅವರು ಮೊದಲು ಎಲಿಮಿನೇಟ್ ಮಾಡಿದ್ದೇ ಗೌತಮಿ ಅವರನ್ನು. ಮಂಜು ಅವರ ಆಪ್ತ ಎನ್ನುವ ಕಾರಣಕ್ಕೆ ಗೌತಮಿಯನ್ನು ಹೊರಕ್ಕೆ ಇಡಲಾಯಿತು. ಆ ಬಳಿಕ ಮಂಜುನ ಆಟದಿಂದ ಎಲಿಮಿನೇಟ್ ಮಾಡಿದರು.

ಮಂಜುಗೆ ತಾವು ಆಟದಿಂದ ಹೊರಹೋಗೋದು ಪಕ್ಕಾ ಆಗುತ್ತಿದ್ದಂತೆ ವರಸೆ ಬದಲಿಸಿದರು. ‘ಧನರಾಜ್ ಹಾಗೂ ಸುರೇಶ್ ನೀವು ಇನ್ನೂ ಕ್ಯಾಪ್ಟನ್ ಆಗಿಲ್ಲ ಅಲ್ಲವಾ? ನೀವೇ ಈ ವಾರದ ಕ್ಯಾಪ್ಟನ್ ಆಗಿ’ ಎಂದು ಹೇಳುವ ಮೂಲಕ’ ವರಸೆ ಬದಲಿಸಿದರು. ಇದು ರಜತ್ ಗಮನಕ್ಕೆ ಬಂದಿದೆ. ಅವರು ಇದಕ್ಕೆ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ.

‘ಐದು ಜನ ಸೇರಿ ನಿಮ್ಮನ್ನು ಸೋಲಿಸಿದೆವು. ನಮಗೆ ನೀವು ಕ್ಯಾಪ್ಟನ್ ಆಗೋದು ಇಷ್ಟ ಇರಲಿಲ್ಲ. ನಿಮ್ಮ ಕ್ಯಾಪ್ಟನ್ಸಿ ನೋಡುವ ಅವಕಾಶ ನಮಗೆ ಬೇಡ. 60 ದಿನಗಳಿಂದ ಕಿಸಿದಿದ್ದು ನೋಡಿದ್ದೇನೆ. ನೀವು ಸೋತಿದ್ದಕ್ಕೆ ಸಖತ್ ಉರಿಯುತ್ತಿದೆ. ತುಪ್ಪ ಹಾಕಿ ಮತ್ತಷ್ಟು ಉರಿಸುತ್ತೇನೆ’ ಎಂದಿದ್ದಾರೆ ರಜತ್.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಈ ವಾರ ಯಾರು ವೀಕ್ ಸ್ಪರ್ಧಿ? ಯಾರು ಎಲಿಮಿನೇಟ್?

ರಜತ್ ಒಂದೊಂದು ಮಾತಿಗೂ ಮಂಜು ಸೈಲೆಂಟ್ ಆಗುತ್ತಾ ಬಂದರು. ‘ಮಂಜು ಅವರ ಮದ ಇಳಿಸಲು ಒಬ್ಬರು ಬಂದರು’ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.