‘ಕಳಪೆ ಬೋರ್ಡ್​ ನಾನೇ ಹಾಕಿಕೊಳ್ತೇನೆ’: ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ

ಶೋಭಾ ಶೆಟ್ಟಿ ಅವರು ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವಾರ ತಮ್ಮ ಆಟದ ಬಗ್ಗೆ ಅವರಿಗೆ ಅಸಮಾಧಾನ ಇದೆ. ಹಾಗಾಗಿ ಸ್ವತಃ ಕಳಪೆ ಬೋರ್ಡ್​ ಹಾಕಿಕೊಳ್ಳಲು ಅವರು ತೀರ್ಮಾನಿಸಿದ್ದಾರೆ. ಈ ವಿಚಾರವನ್ನು ಅವರು ಹನುಮಂತ ಮತ್ತು ಧನರಾಜ್ ಜೊತೆ ಹೇಳಿಕೊಂಡಿದ್ದಾರೆ. ಶೋಭಾ ಈ ರೀತಿ ಮಾತನಾಡಲು ಕಾರಣ ಕೂಡ ಇದೆ.

‘ಕಳಪೆ ಬೋರ್ಡ್​ ನಾನೇ ಹಾಕಿಕೊಳ್ತೇನೆ’: ಮೊದಲೇ ಸೋಲು ಒಪ್ಪಿಕೊಂಡ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ
Follow us
ಮದನ್​ ಕುಮಾರ್​
|

Updated on: Nov 29, 2024 | 10:49 PM

ಶೋಭಾ ಶೆಟ್ಟಿ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲೇ ಅವರು ‘ಬಿಗ್ ಬಾಸ್​ ತೆಲುಗು’ ಶೋನಲ್ಲಿ ಸ್ಪರ್ಧಿಸಿ ಬಂದಿದ್ದಾರೆ. ಈಗ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ವೈಲ್ಡ್ ಕಾರ್ಡ್​ ಮೂಲಕ ದೊಡ್ಮನೆಗೆ ಬಂದಿರುವ ಶೋಭಾ ಶೆಟ್ಟಿ ಅವರು ಆರಂಭದಲ್ಲಿ ಸಿಕ್ಕಾಪಟ್ಟೆ ಆರ್ಭಟ ಮಾಡಿದ್ದರು. ಆದರೆ ಮೊದಲು ಇದ್ದ ಜೋಶ್ ಈಗ ಇಲ್ಲ. ಅಷ್ಟೇ ಅಲ್ಲದೇ ಅವರು ತಮಗೆ ತಾವೇ ಕಳಪೆ ಪಟ್ಟ ಕೊಟ್ಟುಕೊಳ್ಳಲು ತೀರ್ಮಾನಿಸಿದ್ದಾರೆ. ಯಾಕೆಂದರೆ, ಈ ವಾರ ಅವರು ಸರಿಯಾಗಿ ಆಟವಾಡಲು ಸಾಧ್ಯವಾಗಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಕಳಪೆ ಯಾರು ಹಾಗೂ ಉತ್ತಮ ಯಾರು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಎಲ್ಲ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡುವ ಮೂಲಕ ಒಬ್ಬರನ್ನು ಕಳಪೆ ಮತ್ತು ಒಬ್ಬರನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕಳಪೆ ಪಟ್ಟ ಪಡೆದವರು 24 ಗಂಟೆಗಳ ಕಾಲ ಜೈಲಿನಲ್ಲಿ ಇರಬೇಕು. ಈ ವಾರ ಶೋಭಾ ಶೆಟ್ಟಿ ಅವರು ತಾವೇ ಕಳಪೆ ಎಂದು ಒಪ್ಪಿಕೊಂಡಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಜಾಡಳಿತದ ಟಾಸ್ಕ್​ ನೀಡಲಾಗಿತ್ತು. ಹಾಗಾಗಿ ಮನೆಯ ಸಂಪೂರ್ಣ ಆಟ ಬದಲಾಯಿತು. ಉಗ್ರಂ ಮಂಜು ಅವರು ರಾಜನಾಗಿ ಮೆರೆದರು. ಮೋಕ್ಷಿತಾ ಪೈ ಅವರು ಯುವರಾಣಿಯಾಗಿ ಆಳ್ವಿಕೆ ಮಾಡಿದರು. ಇಡೀ ವಾರ ಇದೇ ಮುಂದುವರಿಯಿತು. ಬಹುತೇಕರಿಗೆ ಆಟ ಆಡುವ ಅವಕಾಶ ಸಿಗಲೇ ಇಲ್ಲ. ಈ ಕಾರಣದಿಂದಲೇ ಶೋಭಾ ಶೆಟ್ಟಿ ಕೂಡ ಹೈಲೈಟ್ ಆಗಲಿಲ್ಲ. ಈ ವಿಚಾರವನ್ನೇ ಪ್ರಸ್ತಾಪಿಸಿ ತಮ್ಮನ್ನು ತಾವು ಕಳಪೆ ಎಂದುಕೊಂಡರು.

ಇದನ್ನೂ ಓದಿ: ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು

ಕೊನೆಗೂ ಶೋಭಾ ಶೆಟ್ಟಿ ಅವರು ಅಂದುಕೊಂಡಂತೆಯೇ ಆಯಿತು. ಬಹುತೇಕರು ಶೋಭಾ ಹೆಸರನ್ನೇ ಕಳಪೆ ಪಟ್ಟಕ್ಕೆ ಆಯ್ಕೆ ಮಾಡಿದರು. ಇದರಿಂದಾಗಿ ಶೋಭಾ ಅವರು ಜೈಲುವಾಸ ಅನುಭವಿಸಬೇಕಾಯಿತು. ಕಣ್ಣೀರು ಹಾಕುತ್ತಲೇ ಅವರು ಜೈಲು ಸೇರಿದರು. ಶೋಭಾ ಕಳಪೆ ಆಗುತ್ತಾರೆ ಎಂದು ಬಹುತೇಕರು ಭಾವಿಸಿರಲಿಲ್ಲ. ತೆಲುಗಿನ ಬಿಗ್ ಬಾಸ್ ಮನೆಯ ಅನುಭವ ಇಟ್ಟುಕೊಂಡ ಬಂದಿದ್ದರೂ ಕೂಡ ಕನ್ನಡದ ಬಿಗ್ ಬಾಸ್​ನಲ್ಲಿ ಶೋಭಾ ಕಳಪೆ ಆಗುವುದು ತಪ್ಪಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.