AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 29, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ವೈಲ್ಡ್​ಕಾರ್ಡ್ ಮೂಲಕ ಬಂದ ಬಳಿಕ ವಾತಾವರಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಶೋಭಾ ಶೆಟ್ಟಿ ಅವರು ತಮ್ಮ ಉಗ್ರ ಸ್ವರೂಪ ತೋರಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ರಜತ್ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಮಂಜು ಹಾಗೂ ಅವರ ಮಧ್ಯೆ ಕಾದಾಟ ನಡೆಯುತ್ತಿದೆ. ಈಗ ಮಂಜು ಹಾಗೂ ರಜತ್ ಮಧ್ಯೆ ಮತ್ತೆ ಮಾತಿನ ಫೈಟ್ ನಡೆದಿದೆ.

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಬಿಗ್ ಬಾಸ್’ನ ನವೆಂಬರ್ 28ರ ಎಪಿಸೋಡ್​ನ ಟಾಸ್ಕ್​ನಲ್ಲಿ ‘ಬುರುಡೆ ಒಡೆಯುತ್ತೇನೆ’ ಎಂಬ ಪದ ರಜತ್ ಬಾಯಿ ಇಂದ ಬಂದಿದೆ. ಇದು ಮಂಜುನ ಕೆರಳಿಸಿದೆ. ಮಂಜು ಕೋಪದಲ್ಲಿ ರಜತ್ ವಿರುದ್ಧ ಕೂಗಾಡಿದ್ದಾರೆ. ಇದಕ್ಕೆ ರಜತ್ ಅವರು ಕೌಂಟರ್ ಕೊಡುವ ಪ್ರಯತ್ನ ಮಾಡಿದ್ದಾರೆ.

‘ನೀನು ಬುರುಡೆ ಒಡೆಯುತ್ತೇನೆ’ ಎಂದಿದ್ದು ತಪ್ಪು ಎಂದು ರಜತ್​ಗೆ ಹೇಳಿದರು ಮಂಜು. ‘ಹನುಮಂತಗೆ ಮೆಟ್​ನಲ್ಲಿ ಹೊಡೆಯುತ್ತೇನೆ ಎಂದು ಹೇಳಿದೆ. ಇದು ಎಷ್ಟು ಸರಿ? ನಾವು ಅದನ್ನು ಎಷ್ಟು ಹೈಲೈಟ್ ಮಾಡಬಹುದಿತ್ತು. ಬುರುಡೆ ಒಡೆದು ಹಾಕುತ್ತೀನಿ ಅನ್ನೋದು ನಿನಗೆ ದೊಡ್ಡದಾಗೋಯ್ತಾ’ ಎಂದು ರಜತ್ ಹೇಳಿದರು. ಇದಕ್ಕೆ ಕೌಂಟರ್ ಕೊಡೋಕೆ ಹೋದ ಮಂಜು ‘ಹೌದು, ರಾಜನಿಗೆ ಅವಮಾನ ಮಾಡಿದರೆ ಶಿಕ್ಷೆ ಕೊಡ್ತೀವಿ’ ಎಂದರು. ‘ರಾಜ ಮೆಟ್​ನಲ್ಲಿ ಹೊಡೆಯುತ್ತಾನಾ?’ ಎಂದು ರಜತ್ ಕೇಳಿದ್ದಾರೆ.

ಇದನ್ನೂ ಓದಿ:  ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

ಈ ಮಾತಿಗೆ ಮಂಜು ಸಮಜಾಯಿಶಿ ಕೊಡುವ ಪ್ರಯತ್ನ ಮಾಡಿದರು. ‘ನಾನು ಆಡು ಭಾಷೆಯಲ್ಲಿ ಹೇಳಿದ್ದು’ ಎಂದರು. ರಜತ್ ಕೂಡ, ‘ನನಗೂ ಅಷ್ಟೇ ಆಡು ಭಾಷೆಯಲ್ಲಿ ಬಂದು ಬಿಡ್ತು’ ಎಂದು ಹೇಳಿದರು. ಒಟ್ಟಾರೆ ಇವರ ಮಧ್ಯೆ ಕಿತ್ತಾಟ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.