ಬಿಗ್ ಬಾಸ್ನಲ್ಲಿ ಚೈತ್ರಾಗೆ ಕ್ಲಾಸ್ ತೆಗೆದುಕೊಂಡ ವಾರ ಕಿತ್ಗೊಂಡು ಬಂತು ಟಿಆರ್ಪಿ; ಕುಗ್ಗಲಿಲ್ಲ ‘ಪುಟ್ಟಕ್ಕ’
ಚೈತ್ರಾ ಅವರು ಅನಾರೋಗ್ಯದ ಕಾರಣ ಹೊರಕ್ಕೆ ಹೋಗಿದ್ದರು. ಆಸ್ಪತ್ರೆಯಿಂದ ಅವರು ಕೆಲ ವಿಚಾರ ತಿಳಿದುಕೊಂಡು ಬಂದು ಹೇಳಿದ್ದರು. ಇದು ಸುದೀಪ್ ಅವರಿಗೆ ಕೋಪವನ್ನು ತರಿಸಿತ್ತು. ಆ ವಾರ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಆ ವಾರದ ಟಿಆರ್ಪಿ ಹೊರ ಬಿದ್ದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕೆಲ ವಾರಗಳ ಹಿಂದೆ ಚೈತ್ರಾ ಕುಂದಾಪುರ ಅವರಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದು ಎಲ್ಲರಿಗೂ ನೆನಪು ಇರಬಹುದು. ಹೊರಗಿನ ವಿಚಾರಗಳನ್ನು ಅವರು ಎಲ್ಲರಿಗೂ ಹೇಳುವ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಇದಕ್ಕೆ ಕಿಚ್ಚ ಸುದೀಪ್ ಅವರು ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಮಾತು ಮಾತಿಗೆ ಚೈತ್ರಾಗೆ ಬೈದಿದ್ದರು. ಈ ವಿಚಾರ ಸಖತ್ ಚರ್ಚೆಗೆ ಗ್ರಾಸ ಆಗಿತ್ತು. ಆ ವಾರ ಸಾಕಷ್ಟು ಟಿಆರ್ಪಿ ಬರಲಿದೆ ಎಂದು ಊಹಿಸಲಾಗಿತ್ತು. ಹಾಗೆಯೇ ಆಗಿದೆ.
ಚೈತ್ರಾ ಅವರು ಅನಾರೋಗ್ಯದ ಕಾರಣ ಹೊರಕ್ಕೆ ಹೋಗಿದ್ದರು. ಆಸ್ಪತ್ರೆಯಿಂದ ಅವರು ಕೆಲ ವಿಚಾರ ತಿಳಿದುಕೊಂಡು ಬಂದರು ಎನ್ನಲಾಗಿದೆ. ಅವರು ಹೊರಗಿನ ವಿಚಾರಗಳನ್ನು ಎಲ್ಲರಿಗೂ ಹೇಳುವ ಕೆಲಸ ಮಾಡಿದ್ದರು. ಕಥೆಯ ಮೂಲಕ ಎಲ್ಲರಿಗೂ ಹೊರಗಿನ ವಿಚಾರ, ಹೊರಗಿನ ಅಭಿಪ್ರಾಯ ಹೇಳಿದ್ದರು. ಇದು ಸುದೀಪ್ ಅವರಿಗೆ ಕೋಪವನ್ನು ತರಿಸಿತ್ತು. ಈ ಕೋಪ ಕಡಿಮೆ ಆಗಿರಲೇ ಇಲ್ಲ. ಚೈತ್ರಾ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೂ ಬಂದಿದ್ದರು. ಈಗ ಆ ವಾರದ ಟಿಆರ್ಪಿ ಹೊರ ಬಿದ್ದಿದೆ.
ವಾರದ ದಿನಗಳಲ್ಲಿ 8 (ನಗರ ಭಾಗ), ಶನಿವಾರ 9.5 (ನಗರ ಭಾಗ) ಹಾಗೂ ಭಾನುವಾರ 10.0 (ನಗರ ಭಾಗ) ಸಿಕ್ಕಿದೆ. ಇದು ಸುದೀಪ್ ಅವರ ನಿರೂಪಣೆಗೆ ಇರುವ ಗತ್ತು ಏನು ಎಂಬುದು ಸಾಬೀತಾಗಿದೆ. ಬಿಗ್ ಬಾಸ್ ಕೊನೆ ಹಂತಕ್ಕೆ ಹೋದಂತೆಲ್ಲ ಟಿಆರ್ಪಿ ಹೆಚ್ಚುತ್ತಲೇ ಹೋಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್; ಪ್ಲೇ ಆಗಿತ್ತು ಕಿಚ್ಚನ ವಿಟಿ
ಧಾರಾವಾಹಿಗಳ ಟಿಆರ್ಪಿ ಬಗ್ಗೆ ಹೇಳಬೇಕು ಎಂದರೆ ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಧಾರಾವಾಹಿಯ ಸಮಯ ಬದಲಾವಣೆ ಹಾಗೂ ಪ್ರಮುಖ ಪಾತ್ರಧಾರಿ ಸ್ನೇಹಾ ಪಾತ್ರ ಕೊನೆ ಆದ ಹೊರತಾಗಿಯೂ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದು ಸಾಗುತ್ತಿದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಗೌತಮ್ ದೀವಾನ್ ತಾಯಿಯ ಹುಡುಕಾಟದಲ್ಲಿ ಇದ್ದಾನೆ. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:28 pm, Thu, 28 November 24