ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ: ರಜತ್ ವಿರುದ್ಧ ಶಪತ ಮಾಡಿದ ಚೈತ್ರಾ

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಮನೆಗೆ ಬಂದಿರುವ ರಜತ್ ಅವರು ನೇರವಾಗಿ ಚೈತ್ರಾ ಕುಂದಾಪುರ ಅವರನ್ನು ಎದುರು ಹಾಕಿಕೊಂಡಿದ್ದಾರೆ. ದೊಡ್ಮನೆಗೆ ಕಾಲಿಟ್ಟ ದಿನದಿಂದಲೇ ಅವರು ಚೈತ್ರಾಗೆ ಟಕ್ಕರ್​ ನೀಡುತ್ತಿದ್ದಾರೆ. ಈ ವಾರ ರಜತ್ ನಾಮಿನೇಟ್ ಆಗಿಲ್ಲ. ಆದರೆ ಚೈತ್ರಾ ಕುಂದಾಪುರ ಅವರು ನಾಮಿನೇಟ್​ ಆಗಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ: ರಜತ್ ವಿರುದ್ಧ ಶಪತ ಮಾಡಿದ ಚೈತ್ರಾ
ಚೈತ್ರಾ ಕುಂದಾಪುರ, ರಜತ್
Follow us
ಮದನ್​ ಕುಮಾರ್​
|

Updated on: Nov 27, 2024 | 11:14 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಚೈತ್ರಾ ಕುಂದಾಪುರ ಅವರು ಮಾತಿನ ಬಲವನ್ನೇ ನಂಬಿಕೊಂಡಿದ್ದಾರೆ. ವೈಲ್ಡ್ ಕಾರ್ಡ್​ ಮೂಲಕ ಬಂದಿರುವ ರಜತ್ ಅವರು ದೈಹಿಕ ಬಲವನ್ನೇ ನಂಬಿಕೊಂಡು ಆಟ ಆಡುತ್ತಿದ್ದಾರೆ. ಇಬ್ಬರ ನಡುವೆ ಕ್ಲ್ಯಾಶ್ ಆಗುತ್ತಿದೆ. ಚೈತ್ರಾ ಕುಂದಾಪುರ ಅವರನ್ನು ರಜತ್ ಪ್ರತಿಕ್ಷಣವೂ ವಿರೋಧಿಸುತ್ತಿದ್ದಾರೆ. ರಜತ್ ಆಡುವ ಮಾತುಗಳು ತುಂಬ ಒರಟಾಗಿ ಇರುತ್ತವೆ. ಹಾಗಾಗಿ ಮಾತಿನ ಮೂಲಕ ಫೈಟ್​ ಮಾಡಲು ಕೂಡ ಚೈತ್ರಾ ಕುಂದಾಪುರ ಅವರಿಗೆ ಕಷ್ಟ ಆಗುತ್ತಿದೆ. ನವೆಂಬರ್​ 27ರ ಸಂಚಿಕೆಯಲ್ಲಿ ಅವರಿಬ್ಬರು ಜಗಳ ಮಾಡಿಕೊಂಡಿದ್ದಾರೆ.

ನಾಮಿನೇಷನ್​ ಪ್ರಕ್ರಿಯೆಯಲ್ಲಿ ಚೈತ್ರಾ ಕುಂದಾಪುರ ಅವರು ಸರಿಯಾದ ಕಾರಣಗಳನ್ನು ನೀಡಿಲ್ಲ ಎಂದು ರಜತ್ ಅವರು ಅಸಮಾಧಾನಗೊಂಡಿದ್ದಾರೆ. ಆದರೆ ತಮ್ಮ ಕಾರಣಗಳು ಸರಿ ಇದೆ ಚೈತ್ರಾ ಅವರು ವಾದ ಮಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ದ್ವೇಷ ಹೆಚ್ಚಾಗುತ್ತಿದೆ. ಒಬ್ಬರ ಕಣ್ಣಿನಲ್ಲಿ ಇನ್ನೊಬ್ಬರು ದುಷ್ಮನ್​ಗಳಾಗಿದ್ದಾರೆ.

‘ನನಗೆ ಚೆನ್ನಾಗಿ ಗೊತ್ತು. ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ’ ಎಂದು ಚೈತ್ರಾ ಕುಂದಾಪುರ ಅವರು ಶತಪ ಮಾಡಿದ್ದಾರೆ. ಅವರ ಈ ಬೆದರಿಕೆಯ ಮಾತುಗಳಿಗೆ ರಜತ್ ಬಗ್ಗಿಲ್ಲ. ಅವರು ಕೂಡ ಜೋರಾಗಿಯೇ ಜಗಳಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರ ನಡುವಿನ ಜಗಳ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ. ಎಲ್ಲ ಸಂದರ್ಭದಲ್ಲಿಯೂ ಇಬ್ಬರ ಮಧ್ಯೆ ವಿರೋಧ ಬೆಳೆಯುತ್ತಿದೆ.

ಇದನ್ನೂ ಓದಿ: ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗೋದು: ಚೈತ್ರಾಗೆ ರಜತ್ ಸವಾಲು

ದೈಹಿಕ ಬಲ ಅಗತ್ಯ ಇರುವ ಟಾಸ್ಕ್​​ನಲ್ಲಿ ಚೈತ್ರಾ ಅವರು ಸರಿಯಾಗಿ ಆಡುವುದಿಲ್ಲ ಎಂಬ ಅಭಿಪ್ರಾಯ ರಜತ್ ಅವರಿಗೆ ಇದೆ. ಅದೇ ರೀತಿ, ಕೇವಲ ದೈಹಿಕ ಬಲದಿಂದ ಬಿಗ್ ಬಾಸ್ ಆಡಲು ಸಾಧ್ಯವಿಲ್ಲ, ತಂತ್ರಗಾರಿಕೆ ಕೂಡ ಮುಖ್ಯ ಎಂಬುದು ಚೈತ್ರಾ ವಾದ. ಇಂತಹ ಹಲವು ವಿಚಾರಗಳಲ್ಲಿ ಅವರಿಬ್ಬರ ನಡುವೆ ಜಗಳ ಆಗುತ್ತಲೇ ಇರುತ್ತದೆ. ರಜತ್ ಬಂದ ದಿನದಿಂದಲೂ ತಮಗೆ ಅಸಮಾಧಾನ ಇದೆ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ