AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ ದಾಸ್​ ಬಗ್ಗೆ ಅಪಪ್ರಚಾರ, ಕಿರುಕುಳ: ಯುವಕನ ವಿರುದ್ಧ ದೂರು

Deepika Das: ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ ದಾಸ್​ಗೆ ಯುವಕನೊಬ್ಬ ಕರೆ ಮಾಡಿ ಕಿರುಕುಳ ನೀಡಿದ್ದು, ದೀಪಿಕಾ ದಾಸ್​ರ ಪತಿಯ ಬಗ್ಗೆ ಅಪಪ್ರಚಾರ ಮಾಡಿದ್ದಾನೆಂದು ಆರೋಪಿಸಿ ದೀಪಿಕಾ ದಾಸ್ ತಾಯಿ ಯುವಕನ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೀಪಿಕಾ ದಾಸ್​ ಬಗ್ಗೆ ಅಪಪ್ರಚಾರ, ಕಿರುಕುಳ: ಯುವಕನ ವಿರುದ್ಧ ದೂರು
Deepika Das
ಮಂಜುನಾಥ ಸಿ.
|

Updated on: Nov 28, 2024 | 11:05 AM

Share

ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೆ ದೀಪಕ್ ಕುಮಾರ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಪ್ರಸ್ತುತ ಪ್ರವಾಸ ಇನ್ನಿತರೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ದೀಪಿಕಾ ದಾಸ್​ರ ತಾಯಿ ಯುವಕನೊಬ್ಬನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ಮಗಳು ಹಾಗೂ ಅಳಿಯನ ಬಗ್ಗೆ ಅಪಪ್ರಚಾರ ಮಾಡಿರುವ ಹಾಗೂ ಬೆದರಿಕೆ ಒಡ್ಡಿರುವ ಆರೋಪವನ್ನು ದೀಪಿಕಾ ದಾಸ್ ತಾಯಿ ಮಾಡಿದ್ದಾರೆ.

ಯಶವಂತ್ ಎಂಬಾತನ ವಿರುದ್ಧ ದೀಪಿಕಾ ದಾಸ್ ತಾಯಿ ಪದ್ಮಲತಾ ದೂರು ನೀಡಿದ್ದು, ಯಶವಂತ, ದೀಪಿಕಾ ದಾಸ್ ಮತ್ತು ಅವರ ಪತಿ ದೀಪಕ್ ಕುಮಾರ್ ವಿರುದ್ಧ ಅಪಪ್ರಚಾರ, ಮಾನ ಹಾನಿ ಮಾಡಿದ್ದ ಅಲ್ಲದೆ ಬೆದರಿಕೆ ಸಹ ಒಡ್ಡಿದ್ದಾನೆ ಎನ್ನಲಾಗಿದೆ. ಪದ್ಮಲತಾ ಅವರಿಗೆ ಕರೆ ಮಾಡಿದ್ದ ಯಶವಂತ್ ‘ದೀಪಿಕಾ ದಾಸ್​ಗೆ ಏಕೆ ಆತನೊಂದಿಗೆ ಮದುವೆ ಮಾಡಿದಿರಿ, ಆತ ಒಬ್ಬ ಮೋಸಗಾರ. ದೀಪಕ್​ ಕುಮಾರ್​ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆಂದು ಕರೆ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಬಡಾವಣೆ ಮಾಡಿಕೊಂಡಿದ್ದಾನೆ, ಹಲವು ಪ್ರಕರಣ ಆತನ ಮೇಲಿದ್ದು ಜೈಲಿಗೆ ಸಹ ಹೋಗಿ ಬಂದಿದ್ದಾನೆ’ ಎಂದು ಹೇಳಿದ್ದನಂತೆ.

ದೀಪಿಕಾ ದಾಸ್​ಗೂ ಕರೆ ಮಾಡಿರುವ ಯಶವಂತ್, ‘ನನಗೆ ಹಣ ಕೊಡಿ, ಹಣ ಕೊಡದೆ ಇದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಯಶವಂತ್ ಬೆದರಿಕೆ ಹಾಕಿದ್ದಾನಂತೆ. ದೀಪಕ್ ಕುಮಾರ್​ ಇಂದಾಗಿ ನನಗೆ ನಷ್ಟವಾಗಿದ್ದು, ಸಾಲಗಾರರ ಕಾಟ ಹೆಚ್ಚಾಗಿದೆ, ನೀವು ನನಗೆ ಹಣ ಕೊಡದೇ ಇದ್ದರೆ ನಿಮ್ಮ ಹೆಸರುಗಳು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಯಶವಂತ್ ಬೆದರಿಕೆ ಹಾಕಿದ್ದಾನೆ. ದೀಪಕ್ ಕುಮಾರ್ ಅವರ ಕೆಲವು ಗೆಳೆಯರಿಗೂ ಸಹ ಯಶವಂತ್ ಕರೆ ಮಾಡಿದ್ದಾನೆ. ಕಳೆದ ಏಳು ತಿಂಗಳಿಂದಲೂ ಯಶವಂತ್ ದೀಪಿಕಾ ದಾಸ್, ಪದ್ಮಲತಾ ಹಾಗೂ ದೀಪಕ್ ಕುಮಾರ್ ಗೆ ಸಂಬಂಧಿಸಿದ ಇನ್ನಿತರರಿಗೆ ಕರೆ ಮಾಡುತ್ತಲೇ ಇದ್ದಾನೆ ಎಂದು ಪದ್ಮಲತಾ ದೂರಿನಲ್ಲಿ ಹೇಳಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ವಿದೇಶಿ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿರುವ ನಟಿ ದೀಪಿಕಾ ದಾಸ್

ದೀಪಿಕಾ ದಾಸ್ ಹಾಗೂ ದೀಪಕ್ ಕುಮಾರ್ ಕೆಲ ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದಾರೆ. ಇಬ್ಬರೂ ಸಹ ಪ್ರವಾಸಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ದೀಪಿಕಾ ದಾಸ್, ‘ನಾಗಿಣಿ’ ಸೇರಿದಂತೆ ಕನ್ನಡದ ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಬಿಗ್​ಬಾಸ್​ನಲ್ಲಿಯೂ ಸಹ ದೀಪಿಕಾ ದಾಸ್ ಭಾಗವಹಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ