ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

ವೈಲ್ಡ್ ಕಾರ್ಡ್​ ಸ್ಪರ್ಧಿಗಳು ಬಂದಾಗ ಬಿಗ್ ಬಾಸ್​ ಮನೆಯಲ್ಲಿ ಸಹಜವಾಗಿಯೇ ಸದ್ದು ಗದ್ದಲ ಜಾಸ್ತಿ ಇರುತ್ತದೆ. ರಜತ್ ಕೂಡ ಭಾರಿ ಸದ್ದು ಮಾಡುತ್ತಿದ್ದಾರೆ. ಅವರ ಮಾತುಗಳು ಖಾರವಾಗಿವೆ. ಇದರಿಂದಾಗಿ ಬಿಗ್ ಬಾಸ್​ ಮನೆಯ ಇನ್ನುಳಿದ ಸ್ಪರ್ಧಿಗಳಿಗೆ ಕೋಪ ಹೆಚ್ಚುತ್ತಿದೆ. ಉಗ್ರಂ ಮಂಜು ಮತ್ತು ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ಜಾಸ್ತಿ ಆಗಿದೆ.

ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ
ರಜತ್
Follow us
ಮದನ್​ ಕುಮಾರ್​
|

Updated on: Nov 28, 2024 | 10:25 PM

ಬಿಗ್ ಬಾಸ್​ ಎಂದರೆ ಗಲಾಟೆಗಳು ಕಾಮನ್. ಆದರೆ ಪ್ರತಿ ಸೀಸನ್​ನಲ್ಲೂ ಜಗಳದ ಪ್ರಮಾಣ ಜಾಸ್ತಿ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಕೂಡ ಸದ್ದು ಗದ್ದಲ ಅಧಿಕ ಆಗಿದೆ. ವೈಲ್ಡ್​ ಕಾರ್ಡ್​ ಮೂಲಕ ರಜತ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ದೊಡ್ಮನೆಗೆ ಕಾಲಿಡುವುದಕ್ಕೂ ಮುನ್ನವೇ ಅವರು ಕ್ವಾಟ್ಲೆ ಕೊಡುವ ನಿರ್ಧಾರ ಮಾಡಿಕೊಂಡಿದ್ದರು. ಬಂದ ಬಳಿಕ ಮಾತಿನ ಮೂಲಕ ಎಲ್ಲರಿಗೂ ಚಾಟಿ ಬೀಸುತ್ತಿದ್ದಾರೆ. ಆದರೆ ರಜತ್ ಅವರ ಮಾತುಗಳಿಂದ ಕೆಲವರಿಗೆ ನೋವಾಗಿದೆ. ಇದೇ ರೀತಿ ಮುಂದುವರಿದರೆ ಜಗಳ ಜೋರಾಗುವುದು ಗ್ಯಾರಂಟಿ.

ಮಣ್ಣಿನಿಂದ ಆಕೃತಿಗಳನ್ನು ಮಾಡುವ ಟಾಸ್ಕ್​ನಲ್ಲಿ ರಜತ್ ಅವರು ಅಗ್ರೆಷನ್ ತೋರಿಸಿದ್ದಾರೆ. ಆಟದ ನಡುವೆ ಅವರು ಬುರುಡೆ ಒಡೆದು ಹಾಕುವುದಾಗಿ ಬೆದರಿಸಿದ್ದಾರೆ. ಇದನ್ನು ಅನೇಕರು ಖಂಡಿಸಿದ್ದಾರೆ. ‘ಬುರುಡೆ ಹೊಡೆದು ಹಾಕುತ್ತೇನೆ’ ಎಂದು ರಜತ್ ಹೇಳಿದ್ದರು. ‘ಆಟದ ಮಧ್ಯೆದಲ್ಲಿ ಇಂಥ ಮಾತುಗಳನ್ನು ಆಡಿದ್ದು ಸರಿಯಲ್ಲ’ ಎಂದು ಮಂಜು ಟೀಕಿಸಿದ್ದಾರೆ.

ಈ ಮೊದಲು ಚೈತ್ರಾ ಕುಂದಾಪುರ ಜೊತೆ ಜಗಳ ಮಾಡುವಾಗಲೂ ಕೂಡ ರಜತ್ ಅವರು ನಾಲಿಗೆ ಹರಿಬಿಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಡ್ ಸುರೇಶ್ ಜೊತೆ ಜಗಳ ಮಾಡಿಕೊಂಡಾಗಲೂ ಅವಾಚ್ಯ ಪದಗಳನ್ನು ಬಳಸಿದ್ದರು. ಅವರು ಪ್ರತಿ ಬಾರಿ ಮಾತಿನ ಎಲ್ಲೆ ಮೀರಿದಾಗ ಬಿಗ್ ಬಾಸ್ ಮನೆ ರಣರಂಗ ಆಗಿದೆ. ರಜತ್ ಅವರು ಇನ್ಮೇಲಾದರೂ ತಮ್ಮ ವರ್ತನೆ ಸರಿಪಡಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ: ರಜತ್ ವಿರುದ್ಧ ಶಪತ ಮಾಡಿದ ಚೈತ್ರಾ

ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ರಜತ್ ಅವರನ್ನು ಉಗ್ರಂ ಮಂಜು ಹೊರಗೆ ಇಟ್ಟಿದ್ದಾರೆ. ಇದರಿಂದಾಗಿ ರಜತ್ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಮಂಜುಗೆ ಮಹಾರಾಜನ ಪಟ್ಟ ನೀಡಲಾಗಿದೆ ಎಂಬುದನ್ನೂ ಕೂಡ ಲೆಕ್ಕಿಸದೇ ‘ರೋಗಿಷ್ಟ ರಾಜ’ ಎಂದು ರಜತ್ ಹೇಳಿದ್ದಾರೆ. ಇಂಥ ಹಲವು ಮಾತುಗಳಿಂದ ರಜತ್ ಅವರು ಅನೇಕರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ