ಮಂಜು-ಮೋಕ್ಷಿತಾ ಸ್ವಾರ್ಥಕ್ಕೆ ರದ್ದಾಯ್ತು ಟಾಸ್ಕ್; ಇಡೀ ಮನೆಗೆ ನಷ್ಟ

ಬಿಗ್ ಬಾಸ್ ಕನ್ನಡದಲ್ಲಿ ಮಂಜು ಮತ್ತು ಮೋಕ್ಷಿತಾ ನಡುವಿನ ಸ್ವಾರ್ಥ ಆಟವು ಟಾಸ್ಕ್ ರದ್ದತಿಗೆ ಕಾರಣವಾಯಿತು. ಆರಂಭದಲ್ಲಿ ಒಳ್ಳೆಯ ಬಾಂಧವ್ಯ ಹೊಂದಿದ್ದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಬಿಗ್ ಬಾಸ್ ಇದರಿಂದ ಬೇಸರಗೊಂಡು ಟಾಸ್ಕ್ ಅನ್ನು ರದ್ದುಗೊಳಿಸಿ, ಸ್ಪರ್ಧಿಗಳಿಗೆ ಶಿಕ್ಷೆ ವಿಧಿಸಿದರು. ಇದು ಮನೆಯ ಮೇಲೆ ದೊಡ್ಡ ಪರಿಣಾಮ ಬೀರಿತು.

ಮಂಜು-ಮೋಕ್ಷಿತಾ ಸ್ವಾರ್ಥಕ್ಕೆ ರದ್ದಾಯ್ತು ಟಾಸ್ಕ್; ಇಡೀ ಮನೆಗೆ ನಷ್ಟ
ಮೋಕ್ಷಿತಾ- ಮಂಜು
Follow us
ರಾಜೇಶ್ ದುಗ್ಗುಮನೆ
|

Updated on: Nov 29, 2024 | 7:19 AM

‘ಬಿಗ್ ಬಾಸ್​’ನಲ್ಲಿ ಒಂದು ಟಾಸ್ಕ್ ರಚನೆ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಜನರ ಶ್ರಮ ಇರುತ್ತದೆ. ಹೀಗಾಗಿ, ಸ್ಪರ್ಧಿಗಳು ಅದನ್ನು ಶ್ರದ್ಧೆಯಿಂದ ಆಡಬೇಕು. ಕೊಟ್ಟ ಟಾಸ್ಕ್​ಗೆ ಗೌರವ ನೀಡಬೇಕು. ಇಲ್ಲವಾದಲ್ಲಿ ಬಿಗ್ ಬಾಸ್​ಗೆ ಕೋಪ ಬರೋದು ಗ್ಯಾರಂಟಿ. ಈಗ ನವೆಂಬರ್ 28ರ ಎಪಿಸೋಡ್​ನಲ್ಲಿ ಹಾಗೆಯೇ ಆಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಅದರಲ್ಲೂ ಮಂಜು ಹಾಗೂ ಮೋಕ್ಷಿತಾ ಸ್ವಾರ್ಥದ ಆಟ ಆಡಿದ್ದು, ಇದು ಇಡೀ ಮನೆಯ ಮೇಲೆ ಪರಿಣಾಮ ಬೀರಿದೆ.

‘ಬಿಗ್ ಬಾಸ್​​’ನ ಆರಂಭದ ದಿನಗಳಲ್ಲಿ ಮೋಕ್ಷಿತಾ ಹಾಗೂ ಮಂಜು ಒಂದು ದೇಹ ಎರಡು ಮನಸ್ಸು ಎನ್ನುವ ರೀತಿಯಲ್ಲಿ ಇದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಮೋಕ್ಷಿತಾ ಪ್ರೀತಿಯಿಂದ ಮಂಜಣ್ಣ ಎಂದು ಕರೆಯುತ್ತಿದ್ದರು. ಆದರೆ, ಬರುಬರುತ್ತಾ ಕಾಲ ಬದಲಾಯಿತು. ಮಂಜು ಆಟಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಮೋಕ್ಷಿತಾ ಅವರು ಮಂಜುವಿನಿಂದ ದೂರ ಆದರು. ಇದು ಈಗ ದೊಡ್ಡ ಮಟ್ಟಕ್ಕೆ ಹೋಗಿದೆ.

ಬಿಗ್ ಬಾಸ್​ನಲ್ಲಿ ಮಂಜು ರಾಜನಾದರೆ, ಮೋಕ್ಷಿತಾ ಯುವರಾಣಿ (ಸಹೋದರಿ) ಆಗಿದ್ದಾರೆ. ಇಬ್ಬರ ಮಧ್ಯೆ ಕಿತ್ತಾಟ ಇತ್ತು ಎಂಬುದು ಬಿಗ್ ಬಾಸ್ ಹೆಣೆದಿರುವ ಕಥೆ. ಆದರೆ, ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಿ ಆಟವನ್ನೇ ಹಾಳು ಮಾಡಲಾಗಿದೆ. ಇದು ಬಿಗ್ ಬಾಸ್ ಪ್ರಜೆಗಳ ಮೇಲೆ ಪ್ರಭಾವ ಬೀರಿದೆ.

ಮಣ್ಣಿನಿಂದ ಗುರಾಣಿ ಮಾದರಿಗಳನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ಯುವರಾಣಿ ಬೇರೆ ಬೇರೆ ತಂಡದಲ್ಲಿದ್ದು, ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ, ಸರಿಯಾಗಿ ಉಸ್ತುವಾರಿ ಮಾಡಲಿಲ್ಲ. ಇದರಿಂದ ಬಿಗ್ ಬಾಸ್​ಗೆ ಕೋಪ ಬಂದಿದೆ. ಸ್ವಾರ್ಥ ಮೆರೆದ ಸ್ಪರ್ಧಿಗಳಿಗೆ ಶಿಕ್ಷೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

‘ನಿಮಗೆ ಆಟದ ಫಲಿತಾಂಶ ಮುಖ್ಯವಲ್ಲ ಎಂಬುದು ಬಿಗ್ ಬಾಸ್​ಗೆ ಅರಿವಾಗಿದೆ. ನಿಮಗೆ ಇದು ಮುಖ್ಯ ಅಲ್ಲದಿದ್ದರೂ ಬಿಗ್ ಬಾಸ್​ಗೆ ಹಾಗೂ ವೀಕ್ಷಕರಿಗೆ ಮುಖ್ಯ. ಹೀಗಾಗಿ, ಈ ಟಾಸ್ಕ್​ನ ಉಸ್ತುವಾರಿಯನ್ನು ಬಿಗ್ ಬಾಸ್ ವಹಿಸಿಕೊಳ್ಳುತ್ತಾರೆ’ ಎಂದು ಹೇಳಿದ ಬಿಗ್ ಬಾಸ್, ಆಟವನ್ನೇ ರದ್ದು ಮಾಡಿದರು. ಇದನ್ನು ಕೇಳಿ ಇಡೀ ಮನೆಗೆ ಶಾಕ್ ಆಯಿತು. ಇದರಿಂದ ಮನೆಗೆ ನಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ