ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಐಶ್ವರ್ಯಾ ತಮ್ಮ ತಾಯಿಯ ನೆನಪಿನಲ್ಲಿ ಕಣ್ಣೀರು ಹಾಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನೋವು ಇನ್ನೂ ಅವರನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಸಹಪ್ರತಿಸ್ಪರ್ಧಿ ಚೈತ್ರಾ ಪ್ರಯತ್ನಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ
ಐಶ್ವರ್ಯಾ
Follow us
ರಾಜೇಶ್ ದುಗ್ಗುಮನೆ
|

Updated on:Nov 30, 2024 | 9:51 AM

‘ಬಿಗ್ ಬಾಸ್’ ಮನೆಯಲ್ಲಿ ಐಶ್ವರ್ಯಾ ಅವರ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಅವರಿಗೆ ಉತ್ತಮ ರೀತಿಯಲ್ಲಿ ಆಟ ಆಡಲು ಸಾಧ್ಯವಾಗುತ್ತಿಲ್ಲ. ಶಿಶಿರ್ ಹಾಗೂ ಅವರ ರೊಮ್ಯಾನ್ಸ್ ಜಾಸ್ತಿ ಆಯಿತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಒಂದು ಕಹಿ ದಿನ ಬಂದಿದೆ. ಅದನ್ನು ನೆನೆದು ಕಣ್ಣೀರು ಹಾಕಿದ್ದಾರೆ. ‘ವರ್ಷ ಕಳೆದಂತೆ ಇನ್ನಷ್ಟು ಕಷ್ಟ ಆಗುತ್ತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಐಶ್ವರ್ಯಾ ತುಂಬಾನೇ ಕಷ್ಟದಲ್ಲಿ ಜೀವನ ನಡೆಸಿದವರು. ಅವರಿಗೆ ತಂದೆ ಹಾಗೂ ತಾಯಿ ಇಬ್ಬರೂ ಇಲ್ಲ. ತಾಯಿ 2020ರ ನವೆಂಬರ್​ನಲ್ಲಿ ನಿಧನ ಹೊಂದಿದ್ದರು. ಅವರು ತಾಯಿ ಅಗಲಿದೆ ದಿನ ದೊಡ್ಮನೆಯಲ್ಲಿದ್ದಾಗಲೇ ಬಂದಿದೆ. ಅವರು ತಾಯಿಯನ್ನು ಕಳೆದುಕೊಂಡು ನಾಲ್ಕು ವರ್ಷಗಳು ಆಗಿದ್ದು, ಇದನ್ನು ನೆನೆದು ಅವರು ಕಣ್ಣೀರು ಹಾಕಿದ್ದಾರೆ. ಅವರಿಗೆ ಆ ಕರಾಳ ದಿನ ನೆನಪಿಸಿಕೊಂಡು ಮತ್ತಷ್ಟು ನೋವಾಗಿದೆ.

ಚೈತ್ರಾ ಬಳಿ ಈ ವಿಚಾರವನ್ನು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ. ‘ನನ್ನ ತಾಯಿಯ ತಿಥಿ ಇವತ್ತು. ಅಮ್ಮ ಹೋಗಿ ನಾಲ್ಕು ವರ್ಷ ಆಗಿದೆ’ ಎಂದರು ಐಶ್ವರ್ಯಾ. ಆಗ ಚೈತ್ರಾ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ‘ಅಳಬಾರದು. ಇದು ಜವಾಬ್ದಾರಿ ನಿಭಾಯಿಸುವ ಸಮಯ. ನಿಮ್ಮ ಅಮ್ಮನಿಗೆ ಏನು ಇಷ್ಟವೋ ಅದೇ ಅಡುಗೆ ಮಾಡೋಣ’ ಎಂದರು ಚೈತ್ರಾ.

‘ಅಮ್ಮನಿಗೆ ಒಬ್ಬಟ್ಟು ಎಂದರೆ ಸಖತ್ ಇಷ್ಟ. ಅವರು ನನ್ನ ರೀತಿ ಆಗಿರಲಿಲ್ಲ. ತುಂಬಾನೇ ಸಿಂಪಲ್ ಆಗಿದ್ದರು. ನಾಲ್ಕು ವರ್ಷ ಆಯ್ತು. ವರ್ಷ ಕಳೆದಂತೆ ಮತ್ತಷ್ಟು ಕಷ್ಟವೇ ಆಗುತ್ತಿದೆಯೇ ಹೊರತು ಸುಲಭವಂತೂ ಆಗಲ್ಲ. ತುಂಬಾನೇ ಕಷ್ಟ’ ಎಂದು ಐಶ್ವರ್ಯಾ ಹೇಳಿದ್ದರು.

ಇದನ್ನೂ ಓದಿ: ಐಶ್ವರ್ಯಾ ಜೊತೆ ಕ್ಲೋಸ್ ಆದ ಧರ್ಮ; ದುಷ್ಮನ್ ಆಗಿ ಬದಲಾದ ಅನುಷಾ ರೈ

ಐಶ್ವರ್ಯಾ ಅವರಿಗೆ ಮನೆಯಿಂದ ಊಟ ಬಂದಿರಲಿಲ್ಲ. ಆಗ ಮಂಜು ಅವರು ತಮ್ಮ ಮನೆಯ ಊಟವನ್ನು ಐಶ್ವರ್ಯಾಗೆ ನೀಡಿದ್ದರು. ‘ಇದು ನಿಮ್ಮ ಮನೆಯಿಂದ ಕಳುಹಿಸಿದ ಊಟ’ ಎಂದಿದ್ದರು. ಅದೇ ರೀತಿ ಐಶ್ವರ್ಯಾಗೆ ಸುದೀಪ್ ಅವರು ಪ್ರೀತಿಯಿಂದ ಕೆಲವು ತಿನಿಸುಗಳನ್ನು ಕಳುಹಿಸಿದ್ದರು. ಈ ಮೂಲಕ ಅವರಿಗೆ ಕುಟುಂಬದವರು ಇಲ್ಲ ಎನ್ನುವ ನೋವನ್ನು ಮರೆಸುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Sat, 30 November 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್