AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಪಾತ್ರದ ಅನಿರೀಕ್ಷಿತವಾಗಿ ಕೊನೆ ಆಗುತ್ತಿದೆ. ಕಥಾವಸ್ತುವಿನ ಅನಗತ್ಯ ತಿರುವುಗಳು ಮತ್ತು ಟಿಆರ್​ಪಿಗಾಗಿ ಕಥೆಯನ್ನು ಬದಲಾಯಿಸಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ
ಸೀತಾ ರಾಮ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 01, 2024 | 6:26 AM

Share

‘ಸೀತಾ ರಾಮ’ ಧಾರಾವಾಹಿಯಲ್ಲಿ ಪ್ರೇಕ್ಷಕ ಊಹಿಸಿದಂತೆ ಆಗುತ್ತಿಲ್ಲ. ಇದಕ್ಕೆ ವೀಕ್ಷಕರಿಗೆ ಸಖತ್ ಬೇಸರ ಇದೆ. ಟ್ವಿಸ್ಟ್ ಕೊಡೋ ಭರದಲ್ಲಿ ಇಲ್ಲ-ಸಲ್ಲದ್ದನ್ನು ತರುವ ಕೆಲಸ ಆಗುತ್ತಿದೆ ಎಂಬ ಬೇಸರವನ್ನು ವೀಕ್ಷಕರು ಹೊರಹಾಕುತ್ತಿದ್ದಾರೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈಗ ಸಿಹಿಯ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಹಿಯ ಪಾತ್ರ ಕೊನೆ ಆಗೋದು ನಿಶ್ಚಯವಾಗಿದೆ.

‘ಸೀತಾ ರಾಮ’ ಧಾರವಾಹಿಯಲ್ಲಿ ಸೀತಾ ಹಾಗೂ ರಾಮನ ಪಾತ್ರ ಎಷ್ಟು ಮುಖ್ಯವೋ ಸಿಹಿಯ ಪಾತ್ರವೂ ಅಷ್ಟೇ ಮುಖ್ಯ. ಈ ಪಾತ್ರ ಕೂಡ ಪ್ರಮುಖವಾಗಿದೆ. ಆದರೆ, ಈಗ ಈ ಪಾತ್ರ ಕೊನೆ ಆಗೋ ಸೂಚನೆ ಸಿಕ್ಕಿದೆ. ಮುಂದಿನ ವಾರದ ಎಪಿಸೋಡ್​ಗಳು ಮಹತ್ವ ಪಡೆದುಕೊಳ್ಳಲಿದ್ದು, ಈ ಪಾತ್ರ ಕೊನೆಗೊಳ್ಳಲಿದೆ.

ಈಗ ಸೀತಾಳ ಜನ್ಮದಿನ. ಈ ದಿನದಂದೇ ಸಿಹಿಯನ್ನು ದತ್ತು ಪಡೆಯುವ ಪ್ರಕ್ರಿಯೆಗೆ ಸೀತಾ ಹಾಗೂ ರಾಮ ಮುಂದಾಗಿದ್ದಾರೆ. ಈ ದಿನದಂದು ಏಂಜಲ್ ರೀತಿಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ ಸಿಹಿ. ಈ ಮೊದಲು ರಿಲೀಸ್ ಆದ ಪ್ರೋಮೋದಲ್ಲಿ ಸಿಹಿಗೆ ಅಪಘಾತ ಆದಂತೆ ಹಾಗೂ ಆಕೆ ಸತ್ತು ಹೋದಂತೆ ತೋರಿಸಲಾಗಿದೆ. ಅದು ಇದೇ ಡ್ರೆಸ್​ನಲ್ಲಿ. ಹೀಗಾಗಿ, ಆಕೆಯ ಪಾತ್ರ ಕೊನೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಇದಕ್ಕೆ ಭಾರ್ಗವಿ ಮಾಡಿದ ಆಟವೇ ಕಾರಣ. ಸಿಹಿಯನ್ನು ಸಾಯಿಸಲು ಭಾರ್ಗವಿ ಸಂಚು ರೂಪಿಸಿದ್ದಾಳೆ. ಈ ಸಂಚಿಗೆ ಮುಗ್ಧ ಜೀವ ಬಲಿಯಾಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಈಗಾಗಲೇ ಸಿಹಿ ನಿಧನ ಹೊಂದಿದ ಬಳಿಕ ಏನಾಗುತ್ತದೆ ಎಂಬುದನ್ನು ತೋರಿಸಲಾಗಿದೆ.

ಸಿಹಿ ನಿಧನ ಹೊಂದಿದ ಬೆನ್ನಲ್ಲೇ ಸೀತಾ ಹುಚ್ಚಿ ಆದ ಹಾಗೆ ತೋರಿಸಲಾಗಿದೆ. ಇಷ್ಟೇ ಅಲ್ಲ, ಸಿಹಿಗೆ ಸಹೋದರಿ ಇರುವಂತೆಯೂ, ಆ ಸಹೋದರಿ ಸಿಹಿ ರೀತಿಯೇ ಇರುವಂತೆಯೂ ತೋರಿಸಲಾಗಿದೆ. ಈ ಹುಡುಗಿ ನಂತರ ಸೀತಾಳ ಮಗಳಾಗಿ ಬರುವ ರೀತಿಯಲ್ಲಿ ತೋರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೀತಾ ರಾಮ’ ಸೀರಿಯಲ್​ಗೆ ಒಳ್ಳೆಯ ಟಿಆರ್​ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ

ಸದ್ಯ ‘ಸೀತಾ ರಾಮ’ ಧಾರಾವಾಹಿಯ ಕಥೆ ಹೋಗುತ್ತಿರುವ ರೀತಿಗೆ ಅನೇಕರಿಗೆ ಬೇಸರ ಇದೆ. ಟಿಆರ್​ಪಿಗೋಸ್ಕರ ಈ ರೀತಿ ಮಾಬಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಮಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಥೆ ಸಾಗುತ್ತದೆ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ