ಜಿಲೇಬಿ ವಿಷಯಕ್ಕೆ ಆಯ್ತು ಜಗಳ, ಮತ್ತೆ ಒಡೆಯಿತು ಮನೆ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಊಟದ ವಿಷಯಕ್ಕೆ ಈ ವರೆಗೆ ಜಗಳ ಆಗಿರಲಿಲ್ಲ. ಆದರೆ ಇದೀಗ ಬಿಗ್​ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರ ಜಿಲೇಬಿ ಕಳೆದು ಹೋಗಿತ್ತು. ಜಿಲೇಬಿ ವಿಷಯಕ್ಕೆ ಎರಡು ಬಣಗಳ ನಡುವೆ ಜಗಳ ಆಗಿದೆ.

ಜಿಲೇಬಿ ವಿಷಯಕ್ಕೆ ಆಯ್ತು ಜಗಳ, ಮತ್ತೆ ಒಡೆಯಿತು ಮನೆ
Follow us
ಮಂಜುನಾಥ ಸಿ.
|

Updated on:Nov 30, 2024 | 9:37 PM

ಬಿಗ್​ಬಾಸ್ ಮನೆಯಲ್ಲಿ ಊಟದ ವಿಷಯಕ್ಕೆ ಜಗಳ ತೀರ ಸಾಮಾನ್ಯ. ಬಿಗ್​ಬಾಸ್​ನ ಬಹುತೇಕ ಎಲ್ಲ ಸೀಸನ್​ನಲ್ಲಿಯೂ ಊಟದ ವಿಷಯಕ್ಕೆ ಜಗಳಗಳಾಗಿವೆ. ಒಂದು ಗ್ಲಾಸು ಹಾಲಿಗೆ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ ಮನೆ ಸದಸ್ಯರು. ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವರೆಗೆ ಊಟದ ವಿಷಯಕ್ಕೆ ಬಹಳ ದೊಡ್ಡ ಜಗಳ ಆಗಿರಲಿಲ್ಲ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಜಿಲೇಬಿ ವಿಷಯಕ್ಕೆ ಮನೆ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ.

ಭವ್ಯಾ ಗೌಡ ಅವರ ಪಾಲಿಗೆ ಬಂದಿದ್ದ ಜಿಲೇಬಿಯನ್ನು ಆ ನಂತರ ತಿನ್ನಲೆಂದು ಫ್ರಿಡ್ಜ್​ನಲ್ಲಿ ಇಟ್ಟಿದ್ದರಂತೆ. ಆದರೆ ಅದು ಅಚಾನಕ್ಕಾಗಿ ಕಾಣೆಯಾಗಿದೆ. ಇದು ನೋಡಿ ಭವ್ಯಾ ಗೌಡ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಜಿಲೇಬಿ ಬೇರೆಯವರ ಪಾಲಾಗಿರುವುದಕ್ಕೆ ಕಣ್ಣೀರು ಹಾಕಿದ್ದಾರೆ ಭವ್ಯಾ. ಆ ನಂತರ ಕ್ಯಾಪ್ಟನ್ ಧನರಾಜ್ ಅನ್ನು ಉದ್ದೇಶಿಸಿ, ‘ನನಗೆ ನನ್ನ ಜಿಲೇಬಿ ಬೇಕು, ಯಾರು ತಿಂದಿದ್ದಾರೋ ಕೇಳಿ, ಯಾರು ತಿಂದಿದ್ದರೂ ಸಹ ಅವರಿಂದ ಕಕ್ಕಿಸಿ, ನನಗೆ ಸಿಗದೇ ಇರದಿರುವುದು ಯಾರಿಗೂ ಸಿಗಬಾರದು, ನಾನು ಸೈಕೋ ಪಾತ್’ ಎಂದರು.

ಪಾಪ ಕ್ಯಾಪ್ಟನ್, ಮೋಕ್ಷಿತಾ, ಶಿಶಿರ್ ಕೂತಿದ್ದ ಕಡೆ ಹೋಗಿ ವಿಚಾರಿಸಿದ್ದಾರೆ ಧನರಾಜ್, ಅದಕ್ಕೆ ಮೋಕ್ಷಾ, ಶಿಶಿರ್ ಫ್ರಿಡ್ಜ್​ನಲ್ಲಿ ಜಿಲೇಬಿ ಇದೆ ಎಂದು ಕೊಟ್ಟರು, ನಾನು ಐಶ್ವರ್ಯಾ ಮತ್ತು ಶಿಶಿರ್ ಒಟ್ಟಿಗೆ ತಿಂದೆವು ಎಂದರು. ಅದನ್ನು ಬಂದು ಭವ್ಯಾ ಬಳಿ ಧನರಾಜ್ ಹೇಳಿದರು. ಅದಕ್ಕೆ ಇನ್ನಷ್ಟು ಕೋಪಗೊಂಡ ಭವ್ಯಾ, ಅಡುಗೆ ಮನೆಯಲ್ಲಿ ಕಾಫಿ ಇಟ್ಟವರು ಯಾರು? ಇನ್ನೂ ಕೆಲವು ಪ್ರಶ್ನೆಗಳನ್ನು ಅವರು ಕೇಳುತ್ತಾರೆ. ಬೇರೆಯವರು ಇಟ್ಟಿರುವ ತಿಂಡಿಗೆ ಕೈ ಹಾಕಬಾರದು ಎಂಬುದು ಗೊತ್ತಾಗುವುದಿಲ್ಲವಾ? ಎಂದು ಭವ್ಯಾ ಕೋಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್

ಕೊನೆಗೆ ಧನರಾಜ್ ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಅವರನ್ನು ಕರೆದರು. ಅವರ ಮೇಲೂ ಭವ್ಯಾ ಕೋಪ ವ್ಯಕ್ತಪಡಿಸಿದರು. ಕೊನೆಗೆ ಶಿಶಿರ್, ಐಶ್ವರ್ಯಾ ಹಾಗೂ ಮೋಕ್ಷಿತಾ ಭವ್ಯಾ ಕ್ಷಮೆ ಕೇಳಿದರು. ಆದರೆ ಆ ಚರ್ಚೆ ಅಲ್ಲಿಗೆ ನಿಲ್ಲಲಿಲ್ಲ. ಅದಾದ ಬಳಿಕ ಚೈತ್ರಾ, ಧನರಾಜ್, ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಇನ್ನೂ ಕೆಲವರು ಕುಳಿತು ಅದೇ ವಿಷಯ ಮಾತನಾಡುತ್ತಿದ್ದರು. ಐಶ್ವರ್ಯಾ ಅಂತೂ ಇಂಥಹಾ ಸಿಲ್ಲಿ ವಿಷಯ ಕೇಳಲು ನಾಚಿಕೆ ಆಗಲ್ವ ಎಂದು ಕೇಳಿದರು. ಇನ್ನು ಚೈತ್ರಾ ಕುಂದಾಪುರ ‘ಇದೇನು ಜಮೀನು ಬಟವಾರೆನಾ? ಜಿಲೇಬಿ ವಿಷಯಕ್ಕೆ ಸಭೆಗಳು ನಡೆಯಬೇಕಾ?’ ಎಂದು ಪ್ರಶ್ನೆ ಮಾಡಿದರು. ಒಟ್ಟಾರೆ ಜಿಲೇಬಿ ವಿಷಯಕ್ಕೆ ಮನೆಯಲ್ಲಿ ಎರಡು ಬಣವಂತೂ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Sat, 30 November 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್