ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಬುದ್ಧಿವಾದ ಹೇಳಿದರು. ಹಲವರು ಸಂಬಂಧಗಳನ್ನು ಮುಂದೆ ಮಾಡಿಕೊಂಡು ಆಡುತ್ತಿದ್ದು, ಸಂಬಂಧಗಳನ್ನು ಗಂಟು ಮೂಟೆ ಕಟ್ಟಿ ಇಡಿ ಎಂದು ಎಚ್ಚರಿಕೆ ನೀಡಿದರು.

ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ
Follow us
ಮಂಜುನಾಥ ಸಿ.
|

Updated on: Nov 30, 2024 | 11:17 PM

ಬಿಗ್​ಬಾಸ್​ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರತಿ ಶನಿವಾರದಂತೆ ಸುದೀಪ್, ಇಡೀ ವಾರದ ವಿಶ್ಲೇಷಣೆ ಮಾಡಿದರು. ಈ ವಾರ ಅವರಿಗೆ ಮಾತನಾಡಲು ಸಾಕಷ್ಟು ಸರಕನ್ನು ಮನೆಯ ಸ್ಪರ್ಧಿಗಳು ಮೊದಲೇ ನೀಡಿದ್ದರು. ಮಹರಾಜ-ಮಹಾರಾಣಿ ಟಾಸ್ಕ್​ ಅನ್ನು ಬಿಗ್​ಬಾಸ್ ಈ ಬಾರಿ ನೀಡಿದ್ದರು. ಮಹಾರಾಜ ಆಗಿದ್ದ ಉಗ್ರಂ ಮಂಜು ಮೊದಲಿಗೆ ಚೆನ್ನಾಗಿ ನಿಭಾಯಿಸಿದ್ದರು. ಆದರೆ ಯಾವಾಗ ಮೋಕ್ಷಿತಾ ಮಹಾರಾಣಿ ಆಗಿ ಬಂದರೋ ಇಡೀ ಮನೆಯ ವಾತಾವಾರಣವೇ ಬದಲಾಯ್ತು. ಇಬ್ಬರೂ ವೈಯಕ್ತಿಕ ಆಟ ಆಡಲು ಆರಂಭಿಸಿ ಇಡೀ ಟಾಸ್ಕ್​ನ ದಿಕ್ಕನ್ನು ತಪ್ಪಿಸಿದರು. ಇದನ್ನೇ ಸುದೀಪ್ ಕಟುವಾಗಿ ಟೀಕೆ ಮಾಡಿದರು.

ಇಷ್ಟು ವಾರಗಳಲ್ಲಿ ಬಿಗ್​ಬಾಸ್ ಕೊಟ್ಟಿದ್ದ ಟಾಸ್ಕ್​​ಗಳಲ್ಲೇ ಈ ವಾರ ಕೊಟ್ಟ ಟಾಸ್ಕ್ ಬಹಳ ಕ್ರಿಯೇಟಿವ್ ಆಗಿತ್ತು, ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿತ್ತು, ಎಲ್ಲರಿಗೂ ಅವರವರ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿತ್ತು. ಟಾಸ್ಕ್​ ಬಹಳ ಚೆನ್ನಾಗಿ ಪ್ರಾರಂಭ ಆಗಿತ್ತು. ಆದರೆ ಅದನ್ನು ಕೆಲವರು ಅದನ್ನು ಹಾಳು ಮಾಡಿಕೊಂಡರು’ ಎಂದ ಸುದೀಪ್, ವಿಶೇಷವಾಗಿ ಉಗ್ರಂ ಮಂಜು, ಮೋಕ್ಷಿತಾ ಅವರನ್ನು ಟೀಕೆ ಮಾಡಿದರು.

ಇಬ್ಬರೂ ಸಹ ಟಾಸ್ಕ್ ಅನ್ನು ಟಾಸ್ಕ್ ರೀತಿ ಆಡಲಿಲ್ಲ. ಇಬ್ಬರೂ ಸಹ ಯಾವುದೇ ಹಂತದಲ್ಲೂ ಟಾಸ್ಕ್ ಗೆ ಜೀವ ತುಂಬುವ ಅವಕಾಶ, ಅಧಿಕಾರ ಹೊಂದ್ದಿರಿ ಆದರೆ ಇಬ್ಬರೂ ಸಹ ಆ ಕಾರ್ಯ ಮಾಡಲಿಲ್ಲ. ಉಗ್ರಂ ಮಂಜು ಅವರು ಟಾಸ್ಕ್​ ಅನ್ನು ಅದ್ಭುತವಾಗಿ ಆಡಿದರು. ಅವರಂತೆ ಇನ್ಯಾರೂ ಸಹ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಇಲ್ಲ ಎಂಬ ರೀತಿ ಪಾತ್ರವನ್ನು ನಿಭಾಯಿಸಿದಿರಿ ಆದರೆ ಒಂದು ಬಾರಿ ಎಡವಿ ಬಿದ್ದರೆ ಮುಗಿಯಿತು. ಮಾಡಿದ ಎಲ್ಲವೂ ನೀರಲ್ಲಿ ಹೋಮ’ ಎಂದರು ಸುದೀಪ್.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು

ಗೌತಮಿ ಸಹ, ಟಾಸ್ಕ್ ಆಡಲಿಲ್ಲ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಅದನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬರ್ಥದ ಮಾತುಗಳನ್ನಾಡಿದ ಸುದೀಪ್. ಮನೆಯ ಎಲ್ಲ ಸದಸ್ಯರಿಗೆ ಒಟ್ಟಿಗೆ ಸೇರಿ, ‘ಇಲ್ಲಿ ನೀವು ಸಂಬಂಧ ಬೆಳೆಸಲು ಬಂದಿಲ್ಲ. ಟಾಸ್ಕ್ ಇಲ್ಲದಾಗ ಕೂತು ಒಂದೆರಡು ಮಾತು ಮಾತನಾಡಲು ಸಂಬಂಧ ಸರಿ ಅದಕ್ಕೆ ಮೀರಿದ್ದು ಇಲ್ಲಿ ಯಾವುದೂ ಸಹ ಸಹ ಇಲ್ಲ. ಜನ ನಿಮ್ಮ ಸಂಬಂಧಗಳನ್ನು ನೋಡಲು ಬಿಗ್​ಬಾಸ್​ ನೋಡುವುದಿಲ್ಲ. ಅದಕ್ಕೆ ಧಾರಾವಾಹಿಗಳಿವೆ, ಆದರೆ ಜನ ಬಿಗ್​ಬಾಸ್ ನೋಡುವುದು ಬಿಗ್​ಬಾಸ್ ಕಾರಣಕ್ಕೆ, ಅದನ್ನು ಸರಿಯಾಗಿ ನಿಭಾಯಿಸಿ. ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಬೇಕಾದರೆ ಸಂಬಂಧಗಳನ್ನು ಬೆಳೆಸಿಕೊಳ್ಳಿ’ ಎಂದು ಖಾರವಾಗಿ ಹೇಳಿದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್