ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗೋದು: ಚೈತ್ರಾಗೆ ರಜತ್ ಸವಾಲು

Bigg Boss Kannada: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಭರ್ಜರಿಯಾಗಿ ಆಟ ಆಡುತ್ತಿದ್ದಾರೆ. ಇದೀಗ ಚೈತ್ರಾ ಕುಂದಾಪುರಗೆ ರಜತ್ ಸವಾಲು ಹಾಕಿದ್ದಾರೆ. ಮೀಸೆ ಬೋಳಿಸಿಕೊಂಡು ಆಟವನ್ನೇ ಬಿಡುವುದಾಗಿ ಹೇಳಿದ್ದಾರೆ.

ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗೋದು: ಚೈತ್ರಾಗೆ ರಜತ್ ಸವಾಲು
Follow us
ಮಂಜುನಾಥ ಸಿ.
|

Updated on: Nov 27, 2024 | 10:46 AM

ವೈಲ್ಡ್ ಕಾರ್ಡ್ ಪಡೆದು ಎಂಟ್ರಿ ಕೊಟ್ಟಿರುವ ರಜತ್ ಈಗ ಮನೆಯ ಟಫ್​ ಸ್ಪರ್ಧಿ ಆಗಿದ್ದಾರೆ. ತಮ್ಮ ಅಗ್ರೆಸ್ಸಿವ್ ಆಟದ ಮೂಲಕ, ಆಕ್ರಮಣಕಾರಿ ಮಾತುಗಳ ಮೂಲಕ ಮನೆಯ ಇತರೆ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯ ಸ್ಟ್ರಾಟಜಿ ಬಳಸುತ್ತಿರುವ ರಜತ್ ಗೆಲ್ಲುವ ಉದ್ದೇಶವನ್ನಿಟ್ಟುಕೊಂಡೇ ಆಟ ಆಡುತ್ತಿದ್ದಾರೆ. ಮನೆಯವರ ಪ್ರತಿ ಮಾತಿಗೂ ಕೌಂಟರ್ ಕೊಡುತ್ತಿರುವ ರಜತ್​ಗೆ ಎದುರು ಮಾತನಾಡಲು ಸಹ ಕೆಲ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ.

ನಿನ್ನೆ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮಹಾಪ್ರಭು ಉಗ್ರಂ ಮಂಜು ಮುಂದೆ ಮನೆಯ ಸದಸ್ಯರು ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಮಾಡುವಾಗ ಕಾರಣಗಳನ್ನು ನೀಡಿದ್ದು ಆ ಕಾರಣ ಉಗ್ರಂ ಮಂಜುಗೆ ಸೂಕ್ತ ಎನಿಸಿದಲ್ಲಿ ಮಾತ್ರವೇ ನಾಮಿನೇಷನ್ ಆಗಲಿದೆ, ಸೂಕ್ತ ಅಲ್ಲದಿದ್ದರೆ ಯಾರು ಕಾರಣ ನೀಡಿರುತ್ತಾರೆಯೋ ಅವರೇ ನಾಮಿನೇಟ್ ಆಗುತ್ತಾರೆ.

ನಿನ್ನೆ ಚೈತ್ರಾ, ಮೊದಲಿಗೆ ರಜತ್ ಅವರನ್ನು ನಾಮಿನೇಟ್ ಮಾಡಲು ಮುಂದಾದರು. ರಜತ್, ನನ್ನನ್ನು ಬಾಸ್ ಎಂದು ಕರೆಯುತ್ತಾ ಗೇಲಿ ಮಾಡುತ್ತಾರೆ, ವ್ಯಂಗ್ಯ ಯಾವುದು? ಅವಮಾನ ಯಾವುದು ಗೊತ್ತಿಲ್ಲದಷ್ಟು ಮುಗ್ಧಳು ನಾನಲ್ಲ, ಮನೆಗೆ ಬಂದಾಗ ನಿಮಗೆಲ್ಲ ದರ್ಗಾದ ತಾಯತ ಕಟ್ಟಿಸುತ್ತೇನೆ ಎಂದೆಲ್ಲ ಹೇಳಿದರು’ ಇತ್ಯಾದಿ ಕಾರಣಗಳನ್ನು ಚೈತ್ರಾ ಕುಂದಾಪುರ ನೀಡಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಜತ್, ನಾನು ಬಾಸ್ ಎಂದು ಗೌರವದಿಂದಲೇ ಕರೆಯುತ್ತೀನಿ ಎಂದರು. ನೀವು ಇಂಥಹಾ ಕ್ಷುಲ್ಲಕ ಕಾರಣ ನೀಡಿ ನನ್ನನ್ನು ನಾಮಿನೇಟ್ ಮಾಡುತ್ತಿದ್ದೀರಿ ಅದಕ್ಕೇ ನೀವು ನನಗೆ ಬಾಸ್, ನಾನು ಹೇಳದೇ ಇರುವುದನ್ನು ಹೇಳಿದ್ದೀನಿ ಅನ್ನುತ್ತಿದ್ದೀರಿ ಅದಕ್ಕೇ ನೀವು ನನ್ನ ಬಾಸ್ ಎಂದು ಮತ್ತಷ್ಟು ಗೇಲಿ ಮಾಡಿದರು. ‘ನಿಮ್ಮನ್ನು ಹೊರಗೆ ಕಳಿಸಿಯೇ ನಾನು ಮನೆಗೆ ಹೋಗುವುದು ಬಾಸ್’ ಎಂದು ಸವಾಲು ಹಾಕಿದರು ರಜತ್.

ಇದನ್ನೂ ಓದಿ:Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ

ಆ ನಂತರ ಸಹ ಚೈತ್ರಾ ಹಾಗೂ ರಜತ್ ಜಗಳ ಮಾಡಿಕೊಂಡರು. ಯಾವುದೋ ಮಾತಿಗೆ ರಜತ್, ‘ಬಾಯ್ಮುಚ್ಕೊಂಡು ಕೂತ್ಕೊ’ ಎಂದರು, ಅದಕ್ಕೆ ಚೈತ್ರಾ ‘ನಾನು ಕೂತೇ ಇದ್ದೀನಿ, ನೀವೇ ಓಡಾಡುತ್ತಿರೋದು’ ಎಂದರು. ಆಗ ರಜತ್, ‘ಕೂತ್ಕೊಂಡು ಹರ್ಕೊಂತಿದ್ದೀಯ’ ಎಂದು ತುಸು ಅವಾಚ್ಯವಾಗಿಯೇ ಹೇಳಿದರು. ಅದಕ್ಕೆ ಚೈತ್ರಾ ‘ಇಂಥಹಾ ಮಾತುಗಳನ್ನು ಆಡಿದ್ದಕ್ಕೆ ನಿಮ್ಮನ್ನು ನಾಮಿನೇಟ್ ಮಾಡಿರೋದು’ ಎಂದರು. ಅಲ್ಲಿಯೂ ಸಹ ಚೈತ್ರಾಗೆ ಸವಾಲು ಹಾಕಿದ ರಜತ್, ‘ನೀವು ನಾಮಿನೇಷನ್ ಮಾಡಿರಲು ಕೊಟ್ಟಿರುವ ಕಾರಣ ಸರಿಯಾಗಿದೆ ಎಂದು ಸುದೀಪ್ ಸರ್ ಹೇಳಿಬಿಟ್ಟರೆ ನಾನು ಅರ್ಧ ಮೀಸೆ ಬೋಳಿಸಿಕೊಂಡು ಮನೆ ಬಿಟ್ಟು ಹೊರಗೆ ಹೋಗಿ ಬಿಡುತ್ತೇನೆ’ ಎಂದು ಸವಾಲು ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ