Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ

Bigg Boss Kannada: ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ತಮ್ಮ ಅಗ್ರೆಸ್ಸಿವ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ರಜತ್, ಚೈತ್ರಾ ಕುಂದಾಪುರ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ. ರಜತ್ ಮಾತು ಕೇಳಿ ನಾಚಿ ನೀರಾಗಿದ್ದಾರೆ ಚೈತ್ರಾ.

Bigg Boss Kannada: ರಜತ್ ಮಾತಿಗೆ ನಾಚಿ ನೀರಾದ ಚೈತ್ರಾ ಕುಂದಾಪುರ
Follow us
ಮಂಜುನಾಥ ಸಿ.
|

Updated on: Nov 24, 2024 | 9:41 AM

ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಆಟಗಾರ ರಜತ್ ಮನೆಯ ಗಟ್ಟಿ ಸದಸ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಟಾಸ್ಕ್​ನಲ್ಲಾಗಲಿ, ಮಾತುಗಳಲ್ಲಾಗಲಿ ರಜತ್ ಬಹಳ ಮುಂದಿದ್ದಾರೆ. ಅಗ್ರೆಸ್ಸಿವ್ ಆಗಿ ಆಟ ಆಡುತ್ತಾರೆ. ಬಾಯಿ ತೆಗೆದರೆ ಅಹಂ ಭರಿತ ಮಾತುಗಳನ್ನೇ ಹೊರಹಾಕುತ್ತಾರೆ. ಅಥವಾ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಈಗಾಗಲೇ ಕಳಪೆ ಪಟ್ಟ ಪಡೆದು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯೆ ಚೈತ್ರಾ ಕುಂದಾಪುರ ಅವರನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ, ರಜತ್ ಮಾತು ಕೇಳಿ ನಾಚಿ ನೀರಾಗಿದ್ದಾರೆ ಚೈತ್ರಾ.

ಶನಿವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರ ಬಗ್ಗೆ ಮಾತನಾಡುತ್ತಿದ್ದ ರಜತ್, ಚೈತ್ರಾ ಅವರನ್ನು ಬಾಸ್ ಎಂದು ಸಂಭೋಧಿಸುತ್ತಿದ್ದರು. ಅದಕ್ಕೆ ಮುಂಚೆ ಅವರು ಜೈಲಿಗೆ ಹೋದಾಗಲೂ ಚೈತ್ರಾ ಅವರನ್ನು ಬಾಸ್ ಎಂದೇ ಸಂಬೋಧಿಸುತ್ತಿದ್ದರು. ಆಗಂತೂ ಮನೆಯ ಕೆಲ ಸ್ಪರ್ಧಿಗಳಿಗೆ ರಜತ್ ಯಾವ ಬಾಸ್​ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವೂ ಮೂಡಿತ್ತು.

ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಅವರ ಎದುರು ಚೈತ್ರಾ ಅವರನ್ನು ರಜತ್ ಕೊಂಡಾಡಿದರು. ಚೈತ್ರಾ ಅವರಿಗೆ ಚೆನ್ನಾಗಿ ಮಾತನಾಡಲು ಬರುತ್ತದೆ. ಅವರಿಗೆ ಯಾವಾಗ, ಯಾರ ಬಳಿ ಹೇಗೆ ಮಾತನಾಡಬೇಕು ಎಂಬುದು ಬಹಳ ಚೆನ್ನಾಗಿ ಗೊತ್ತು. ಅವರ ಮಾತು ಸಹ ಬಹಳ ಕ್ಯೂಟ್, ಅವರೂ ಸಹ ಬಹಳ ಕ್ಯೂಟ್, ಬಹಳ ಮುದ್ದಾಗಿದ್ದಾರೆ ಅವರ ಮುಗ್ಧತೆ ನನಗೆ ಇಷ್ಟ. ಅವರಲ್ಲಿ ಯಾರಿಗೂ ತಿಳಿಯದ ಮುಗ್ಧತೆ ಇದೆ’ ಎಂದೆಲ್ಲ ಅವರ ಸೌಂದರ್ಯವನ್ನು ವರ್ಣಿಸಿದರು. ರಜತ್ ಮಾತು ಕೇಳಿ ಚೈತ್ರಾ ನಾಚಿಕೊಂಡುಬಿಟ್ಟರು. ಸುದೀಪ್ ಸಹ ಈ ಸಮಯದಲ್ಲಿ ಚೈತ್ರಾ ಕಾಲೆಳೆದರು.

ಇದನ್ನೂ ಓದಿ:Bigg Boss: ಅವಾಚ್ಯ ಶಬ್ದ ಬಳಸಿದ ರಜತ್​ಗೆ ಸುದೀಪ್ ಕ್ಲಾಸ್

ಚೈತ್ರಾ ಕುಂದಾಪುರ, ಈ ವಾರ ಸುದೀಪ್ ಅವರಿಂದಲೂ ಪ್ರಶಂಸೆ ಪಡೆದುಕೊಂಡರು. ಕಳೆದ ವಾರ ಸುದೀಪ್ ಅವರಿಂದ ಬಹಳ ಬೈಸಿಕೊಂಡಿದ್ದರು ಚೈತ್ರಾ, ಆಸ್ಪತ್ರೆಗೆಂದು ಹೊರಗೆ ಹೋಗಿ ಬಂದು ಹೊರಗೆ ತಮಗೆ ತಿಳಿದು ಬಂದು ವಿಚಾರವನ್ನೆಲ್ಲ ಮನೆಯ ಸದಸ್ಯರ ಬಳಿ ಹೇಳಿ ಎಲ್ಲರ ತಲೆ ಕೆಡಿಸಿದ್ದರು. ಇದರಿಂದಾಗಿ ಸುದೀಪ್ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಚೈತ್ರಾ ಅಂತೂ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಕೂತಿದ್ದರು. ಆದರೆ ಶನಿವಾರ, ಮಾತನಾಡಿದ ಸುದೀಪ್, ಈ ವಾರ ಚೈತ್ರಾ ಬಹಳ ಚೆನ್ನಾಗಿ ಆಟ ಆಡಿದರು. ಎಲ್ಲಿ ಹೇಗೆ ಆಡಬೇಕೋ ಹಾಗೆಯೇ ಆಟ ಆಡಿದರು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ