ನಿಮ್ಮ ರೊಮ್ಯಾನ್ಸ್ ಜಾಸ್ತಿ ಆಯ್ತು: ನೇರವಾಗಿ ಹೇಳಿದ ಸುದೀಪ್

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ವೀಕೆಂಡ್ ಪಂಚಾಯ್ತಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಶಿಶಿರ್ ಮತ್ತು ಐಶ್ವರ್ಯಾ ಕುರಿತು ಮಾತನಾಡುತ್ತಾ, ನಿಮ್ಮ ರೊಮ್ಯಾನ್ಸ್ ಜಾಸ್ತಿಯಾಯ್ತು ಎಂದರು. ಇದು ಹೀಗೆ ಮುಂದುವರೆದರೆ ಇಬ್ಬರಲ್ಲಿ ಒಬ್ಬರು ಹೊರಗೆ ಬರುತ್ತೀರ ಎಂದು ಎಚ್ಚರಿಕೆ ಕೊಟ್ಟರು.

ನಿಮ್ಮ ರೊಮ್ಯಾನ್ಸ್ ಜಾಸ್ತಿ ಆಯ್ತು: ನೇರವಾಗಿ ಹೇಳಿದ ಸುದೀಪ್
Follow us
ಮಂಜುನಾಥ ಸಿ.
|

Updated on: Nov 23, 2024 | 11:16 PM

ಬಿಗ್​ಬಾಸ್​ ಕನ್ನಡ ಸೀಸನ್ 11ರ ವಾರಾಂತ್ಯದ ಎಪಿಸೋಡ್​ ಇಂದು ತುಸು ಲಘುವಾಗಿತ್ತು. ಕಳೆದ ಕೆಲ ವಾರಗಳಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟಿನಿಂದ ಸ್ಪರ್ಧಿಗಳೊಟ್ಟಿಗೆ ಮಾತನಾಡಿದ್ದರು, ಅದಕ್ಕೆ ಕಾರಣವೂ ಇತ್ತು. ಕಳೆದ ವಾರ ಚೈತ್ರಾ ಕುಂದಾಪುರ ಅವರು ಮಾಡಿದ ಕೆಲಸಕ್ಕೆ ಸುದೀಪ್ ಬಹಳ ಬೇಸರಗೊಂಡಿದ್ದರು. ಈ ವಾರವೂ ಸಹ ಮನೆಯಲ್ಲಿ ಕೆಲವು ಘಟನೆಗಳು ನಡೆದಿದ್ದವು, ಕೆಲವರು ಅತಿಯಾದ ಉತ್ಸಾಹದಿಂದ ಆಡಿದ್ದರು, ಕೆಲವರು ಮಂಕಾಗಿದ್ದರು. ಎಲ್ಲರ ಆಟವನ್ನೂ ಪರಿಶೀಲನೆ ನಡೆಸಿ ಕೆಲವು ಸಲಹೆಗಳನ್ನು ಸುದೀಪ್ ನೀಡಿದರು.

ಮನೆಯ ಆಟಗಾರರ ಪೈಕಿ ಶಿಶಿರ್ ಒಬ್ಬ ಸಮರ್ಥ ಆಟಗಾರ ಎಂದು ಆರಂಭದ ಕೆಲ ವಾರಗಳಲ್ಲಿ ಹೆಸರು ಮಾಡಿದ್ದರು. ಆದರೆ ಇತ್ತೀಚೆಗೆ ಅವರ ಆಟದ ವೈಖರಿ ಬದಲಾಗಿದೆ. ಇದನ್ನು ಗಮನಿಸಿದ ಸುದೀಪ್ ತುಸು ಖಾರವಾಗಿಯೇ ಶಿಶಿರ್​ಗೆ ಎಚ್ಚರಿಕೆ ನೀಡಿದರು.

ಶಿಶಿರ್ ಕಳೆದ ವಾರ ಸುದೀಪ್​ರ ‘ಕೆಂಪೇಗೌಡ’ ಸಿನಿಮಾ ಮಾದರಿಯಂತೆ ಮೀಸೆ ಬಿಟ್ಟಿದ್ದಾರೆ. ಇದನ್ನು ನೋಡಿದ ಸುದೀಪ್, ‘ಕೆಂಪೇಗೌಡ’ ಸಿನಿಮಾದಲ್ಲಿ ನಿಮಗೆ ಇಷ್ಟವಾಗಿದ್ದು ಏನು? ಎಂದು ಪ್ರಶ್ನಿಸಿದರು. ಅದಕ್ಕೆ ಶಿಶಿರ್, ಕೆಂಪೇಗೌಡನ ಗತ್ತು ಇಷ್ಟವಾಯ್ತು ಎಂದರು. ಆ ಸಿನಿಮಾದಲ್ಲಿ ಆಕ್ಷನ್ ಎಷ್ಟಿತ್ತು, ರೊಮ್ಯಾನ್ಸ್ ಎಷ್ಟಿತ್ತು ರೊಮ್ಯಾನ್ಸ್ ಎಷ್ಟಿತ್ತು? ಎಂದರು. 80% ಆಕ್ಷನ್ ಇತ್ತು, 20% ರೊಮ್ಯಾನ್ಸ್ ಇತ್ತು ಎಂದರು. ಒಂದು ವೇಳೆ ‘ಕೆಂಪೇಗೌಡ’ ಸಿನಿಮಾದಲ್ಲಿ 80% ರೊಮ್ಯಾನ್ಸ್, 20% ಆಕ್ಷನ್ ಇದ್ದರೆ ನಿಮಗೆ ಇಷ್ಟವಾಗುತ್ತಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಇಲ್ಲ ಎಂದರು ಶಿಶಿರ್. ನಿಮ್ಮ ಕತೆಯೂ ಈಗ ಅದೇ ರೀತಿ ಆಗಿದೆ. ನಿಮ್ಮ ರೊಮ್ಯಾನ್ಸ್ ಹೆಚ್ಚಾಗಿದೆ ಆಕ್ಷನ್ ಕಡಿಮೆ ಆಗಿದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ

ನೀವು, ಐಶ್ವರ್ಯಾ ಗೇಮ್ ಅನ್ನು ಮರೆತೇ ಬಿಟ್ಟಿದ್ದೀರಿ. ನೀವು ಅದೆಷ್ಟು ನಿಮ್ಮಲ್ಲೆ ಕಳೆದುಹೋಗಿದ್ದೀರಿ ಎಂದರೆ ಚೈತ್ರಾ ಅವರು ನಿಮ್ಮ ಕಣ್ಣೆದುರೇ ನಿಮ್ಮ ಹಣ ತೆಗೆದುಕೊಂಡು ಹೋದರು ಆದರೆ ನಿಮಗೆ ಅದು ಗೊತ್ತಾಗಿಲ್ಲ. ಎಲ್ಲರಿಗೂ ಒಂದು ಕಂಫರ್ಟ್ ಜೋನ್ ಬೇಕು, ಒಬ್ಬೊಬ್ಬರು ಒಬ್ಬರೊಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಆದರೆ ಅದು ಅತಿಯಾಗಬಾರದು. ನಿಮ್ಮ ಬಂಧ, ಆತ್ಮೀಯತೆ ಎಲ್ಲ ಹೊರಗೆ ಇರಲಿ, ಇದು ಹೀಗೇ ಮುಂದುವರೆದರೆ ನಿಮ್ಮಿಬ್ಬರಲ್ಲಿ ಒಬ್ಬರು ಆದಷ್ಟು ಬೇಗ ಹೊರಗೆ ಹೋಗುತ್ತೀರಿ ಎಂದು ಖಾರವಾಗಿ ಹೇಳಿದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ