ಜಾನ್ವಿ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ ಶೆಟ್ಟಿ; ಗಿಲ್ಲಿ ವಿರುದ್ಧ ಟೊಂಕ ಕಟ್ಟಿದ ವಂಶದ ಕುಡಿ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಕ್ಷಿತಾ ಶೆಟ್ಟಿ ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ. ಜಾನ್ವಿ ಅವರ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ, ಗಿಲ್ಲಿ ಆ್ಯಂಕರ್‌ಗಳಿಗೆ ಅವಮಾನ ಮಾಡಿದ್ದಾರೆ ಎಂದು ತಪ್ಪಾಗಿ ಭಾವಿಸಿದರು. ಆದರೆ, ಗಿಲ್ಲಿ ಇದನ್ನು ನಿರಾಕರಿಸಿದ್ದಾರೆ. ಜಾನ್ವಿ ಕುತಂತ್ರದಿಂದ ಈ ನಾಮಿನೇಷನ್ ನಡೆದಿದ್ದು, ಇದು ವೀಕೆಂಡ್‌ನಲ್ಲಿ ಚರ್ಚೆಗೆ ಬರಲಿದೆ.

ಜಾನ್ವಿ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ ಶೆಟ್ಟಿ; ಗಿಲ್ಲಿ ವಿರುದ್ಧ ಟೊಂಕ ಕಟ್ಟಿದ ವಂಶದ ಕುಡಿ
ಬಿಗ್ ಬಾಸ್

Updated on: Nov 25, 2025 | 9:03 AM

ಬಿಗ್ ಬಾಸ್ ಮನೆಯಲ್ಲಿರೋ ರಕ್ಷಿತಾ ಶೆಟ್ಟಿ ಅವರು ಅದ್ಭುತವಾಗಿ ಆಟ ಆಡುತ್ತಿದ್ದಾರೆ. ಕಳೆದ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತು. ಅವರಲ್ಲಿ ಕಳೆದ ವಾರ ಸಾಕಷ್ಟು ಬದಲಾವಣೆಗಳು ಇದ್ದವು. ಈ ಕಾರಣದಿಂದಲೇ ಅವರಿಗೆ ಮೆಚ್ಚುಗೆ ಸಿಕ್ಕಿದೆ. ಈಗ ಜಾನ್ವಿ ಮಾತು ಕೇಳಿ ರಕ್ಷಿತಾ ಟ್ರ್ಯಾಪ್ ಆಗಿದ್ದಾರೆ. ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಒಂದು ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಗಿಲ್ಲಿ ಆ್ಯಂಕರ್ ಆಗುವ ಆಸೆ ವ್ಯಕ್ತಪಡಿಸಿದರು. ‘ಸವಿ ರುಚಿ’ ಕಾರ್ಯಕ್ರಮಕ್ಕೆ ಆ್ಯಂಕರ್ ಆಗಬೇಕು ಎಂದು ಗಿಲ್ಲಿ ಹೇಳಿದರು. ಆಗ ಕಾವ್ಯಾ ಅವರು, ಆ ಶೋಗೆ ಆ್ಯಂಕರ್ ಆಗೋದು ಬೇಡ ಎಂದರು. ‘ಆ ಶೋಗೆ ಟಿಆರ್​ಪಿ ಕಡಿಮೆ ಇದೆಯೇ’ ಎಂದು ಗಿಲ್ಲಿ ಕೇಳಿದರು. ‘ಕುಕಿಂಗ್ ಶೋ ಬೇಡ ಅಷ್ಟೇ’ ಎಂದು ಕಾವ್ಯಾ ವಿವರಿಸಿದರು.

ಆಗ ಜಾನ್ವಿ ಸಿಕ್ಕಿದ್ದೇ ಅವಕಾಶ ಎಂದು, ‘ಒಂದು ಶೋನ ಗಿಲ್ಲಿ ಕೆಳಗೆ ಹಾಕಿ ಮಾತಾಡ್ತಾನೆ’ ಎಂದು ಬಿಂಬಿಸಲು ಬಂದರು. ‘ನಿನಗೇನು ಮೊದಲಿಗೇ ಅನುಬಂಧ ಅವಾರ್ಡ್ಸ್​ನಲ್ಲಿ ಅವಕಾಶ ಕೊಡಬೇಕೆ’ ಎಂದು ಜಾನ್ವಿ ಪ್ರಶ್ನೆ ಮಾಡಿದರು. ನಂತರ ನಾಮಿನೇಷನ್​ಗೆ ಇದೇ ಕಾರಣ ಕೊಟ್ಟರು. ಇದನ್ನು ರಕ್ಷಿತಾ ಯಾವ ರೀತಿ ಅರ್ಥ ಮಾಡಿಕೊಂಡರೋ ಗೊತ್ತಿಲ್ಲ, ಗಿಲ್ಲಿಯನ್ನು ನಾಮಿನೇಟ್ ಮಾಡಿದರು.

‘ಗಿಲ್ಲಿ ಅವರು ಆ್ಯಂಕರ್​ಗಳಿಗೆ ಅವಮಾನ ಮಾಡಿದ್ದಾರೆ ಅನ್ನೋದು ಜಾನ್ವಿ ಹೇಳಿದ ಮಾತಿನಿಂದ ಗೊತ್ತಾಯ್ತು. ಹೀಗಾಗಿ, ನಾನು ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದರು. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಗಿಲ್ಲಿಗೂ ಇದನ್ನು ಅರಗಿಸಿಕೊಳ್ಳೊದು ಕಷ್ಟ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ ಮಾಜಿ ಸ್ಪರ್ಧಿಗಳು; ನಡೀತಿದೆ ದೊಡ್ಡ ಪಾರ್ಟಿ

‘ನಾನು ಜಾನ್ವಿ ಕೆಟ್ಟ ಆ್ಯಂಕರ್ ಎಂದು ಹೇಳಿಲ್ಲ. ಜಾನ್ವಿ ಹೇಳಿದಳು ಎಂದು ನೀನು ಕೇಳಿಬಿಟ್ಟೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎಂದು ಸುದೀಪ್ ಹೇಳಿದ್ದರು. ಅದನ್ನು ನೀನು ಮಾಡಬೇಕಿತ್ತು’ ಎಂದು ಗಿಲ್ಲಿ ಹೇಳಿದ್ದಾರೆ. ವೀಕೆಂಡ್​ನಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:03 am, Tue, 25 November 25