ಬಿಗ್ಬಾಸ್ (Bigg Boss) ಮನೆಯ ಸದಸ್ಯರಿಗೆ ‘ಬೊಂಬೆಯಾಟವಯ್ಯ’ ಹೆಸರಿನ ಟಾಸ್ಕ್ ಅನ್ನು ನೀಡಿದ್ದರು. ಟಾಸ್ಕ್ನ ಅನ್ವಯ ಒಂದು ತಂಡ ಇನ್ನೊಂದು ತಂಡದ ಸದಸ್ಯರನ್ನು ನಿಗದಿತ ಸಮಯದೊಳಗೆ ಒಮ್ಮೆ ನಗಿಸಬೇಕಿತ್ತು, ಒಮ್ಮೆ ಅಳಿಸಬೇಕಿತ್ತು ಒಮ್ಮೆ ಕೋಪ ಉಕ್ಕುವಂತೆ ಮಾಡಬೇಕಿತ್ತು. ಒಂದು ತಂಡ ಭಾವನೆಗಳನ್ನು ಹೊಮ್ಮಿಸುವಲ್ಲಿ ನಿರತರಾಗಿದ್ದಾಗ ಮತ್ತೊಂದು ತಂಡ ಅಲುಗಾಡದೆ ಕಲ್ಲಿನಂತೆ ಕೂರಬೇಕು, ಅಲುಗಾಡಿದರೆ ಎದುರಾಳಿ ತಂಡಕ್ಕೆ ಅಂಕ.
ಭಾವನೆ ಉಕ್ಕಿಸುವ ಟಾಸ್ಕ್ನಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಬಹಳ ಚೆನ್ನಾಗಿ ಪ್ರದರ್ಶನ ನೀಡಿದ್ದೆಂದರೆ ಅದು ಕೋಪ ಉಕ್ಕಿಸುವ ಟಾಸ್ಕ್ನಲ್ಲಿ. ಒಬ್ಬೊಬ್ಬ ಸ್ಪರ್ಧಿಯು ಎದುರಾಳಿ ತಂಡದವರ ಮೇಲೆ ನಿಂದನೆಯ ಮಳೆಯನ್ನೇ ಸುರಿಸಿದರು. ಒಬ್ಬರಿಗಿಂತಲೂ ಒಬ್ಬರು ಬಲ ಎಂಬಂತೆ ಎದುರಾಳಿಯ ಮೇಲೆ ಮನಸ್ಸಿನ ವಿಷ ಕಕ್ಕಿದರು. ಅದರಲ್ಲೂ ‘ಅತ್ಯುತ್ತಮವಾಗಿ ಆಡಿದ್ದೆಂದರೆ’ ನಾಗಿಣಿ ನಮ್ರತಾ ಮತ್ತು ಸ್ನೇಹಿತ್. ಟಾಸ್ಕ್ನ ಅತ್ಯುತ್ತಮ ಫರ್ಮಾರ್ಗಳವರು, ಅವರು ಆಡಿದ ಮಾತುಗಳು ಅಷ್ಟು ಹರಿತವಾಗಿತ್ತು, ನಿಂದಿಸುವುದರಲ್ಲಿ ತಾವು ಟಾಪ್ ಎಂದು ಇಬ್ಬರೂ ತೋರಿಸಿಕೊಂಡರು.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?
ಸ್ನೇಹಿತ್ ಅಂತೂ ಕಾರ್ತಿಕ್ರ ಖಾಸಗಿ ವಿಷಯಗಳ ಬಗ್ಗೆ ಮಾತನಾಡಿದರು. ಬಿಗ್ಬಾಸ್ ಮನೆಯ ಹೊರಗಿನ ವಿಷಯಗಳು, ಸ್ಪರ್ಧಿಗಳ ಕುಟುಂಬದ ಬಗೆಗಿನ ವಿಷಗಳನ್ನು ಸಹ ಎತ್ತಿತಂದು ತುಚ್ಛವಾಗಿ ಕೆಲ ಸ್ಪರ್ಧಿಗಳು ಮಾತನಾಡಿದರು. ಇನ್ನು ವಿನಯ್, ತಾವು ಕಾರ್ತಿಕ್ ಅನ್ನು ಸ್ನೇಹಕ್ಕೆ ಬೆಲೆ ನೀಡದವನು ಎಂದೆಲ್ಲ ಹೇಳಿ, ನಮ್ಮಿಬ್ಬರ ಸ್ನೇಹ ಇಲ್ಲಿಗೆ ಮುಗಿಯತು ಎಂದರು. ತನಿಷಾ ಮನೆಯ ಬಗ್ಗೆ ಅವರನ್ನು ಬೆಳೆಸಿದ ರೀತಿ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆಯೂ ಸ್ನೇಹಿತ್, ನಮ್ರತಾ ಮಾತನಾಡಿದರು. ಆ ಸಮಯದಲ್ಲಿ ಕಲ್ಲಂತಿದ್ದ ತನಿಷಾ ಆ ನಂತರ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾಗದೆ ತನಿಷಾ ಅತ್ತು ಬಿಟ್ಟರು ಆದರೆ ಅತ್ತಾಗ ಅವರು ಅಳಿಸಬೇಕಾದ ತಂಡದಲ್ಲಿದ್ದರು. ಎದುರಾಳಿಯನ್ನು ಅಳಿಸಲು ಹೋಗಿ ಸ್ವತಃ ತಾವೇ ಅತ್ತುಬಿಟ್ಟರು.
ಟಾಸ್ಕ್ನ ನಡುವೆ ಡ್ರೋನ್ ಪ್ರತಾಪ್ ಮೇಲೆ ಅವರದ್ದೇ ತಂಡದ ಸದಸ್ಯರು ಮುಗಿಬಿದ್ದು ಪ್ರಶ್ನೆಗಳನ್ನು ಕೇಳಿದರು. ಇದರಿಂದ ಸಿಟ್ಟಾದ ಪ್ರತಾಪ್, ಕಿರುಚಾಡಿದ ಘಟನೆಯೂ ನಡೆಯಿತು. ಬಳಿಕ ಬಂದು ಕ್ಷಮೆ ಕೇಳಿದ ಪ್ರತಾಪ್, ಮತ್ತೆ ತಂಡವನ್ನು ಒಟ್ಟಾಗಿ ಮುಂದೆ ತೆಗೆದುಕೊಂಡು ಹೋದರು. ಈ ನಡುವೆ ಸಿರಿ ತಂಡದವರು ಟಾಸ್ಕ್ ಅನ್ನು ಮೈಖಲ್ ಮೂಲಕ ಫಿಕ್ಸ್ ಮಾಡುವ ಆಲೋಚನೆಯನ್ನೂ ಮಾಡಿದರಾದರೂ ವಿನಯ್ ಬೇಡ ಎಂದಿದ್ದಕ್ಕೆ ಸುಮ್ಮನಾದರು.
ಯಾರು ಎಷ್ಟು ಬಾರಿ ಕದಲಿದರು ಎಂಬ ಲೆಕ್ಕಾಚಾರದಲ್ಲಿ ಅಂತಿಮವಾಗಿ ಡ್ರೋನ್ ಪ್ರತಾಪ್ರ ತಂಡವೇ ಗೆದ್ದಿತು. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ