ವಾರಗಳು ಕಳೆದಂತೆ ಬಿಗ್ಬಾಸ್ (BiggBoss) ಮನೆಯಲ್ಲಿ ಸ್ಪರ್ಧೆ ಕಠಿಣವಾಗುತ್ತಾ ಸಾಗುತ್ತಿದೆ. ಒಳ್ಳೆಯ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಗೆಲ್ಲುವ ಸ್ಪರ್ಧಿಗಳಲ್ಲಿಯೂ ಸಹ ತೀವ್ರ ಪೈಪೋಟಿ ಏರ್ಪಟ್ಟಿದೆ. ಫಿನಾಲೆಗೆ ಕೆಲವೇ ವಾರಗಳು ಇವೆ, ಆದರೆ ಇಂಥಹವರೇ ಗೆಲ್ಲುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಾಗದ ಪರಿಸ್ಥಿತಿ ಇದೆ. ನಾಮಿನೇಷನ್ ಆದ ಸ್ಪರ್ಧಿಗಳಿಗೆ ಜನರು ಸಹ ದೊಡ್ಡ ಸಂಖ್ಯೆಯಲ್ಲಿ ಮತ ಹಾಕುತ್ತಿದ್ದಾರೆ. ಜನ ಹಾಕುವ ಮತಗಳ ಸಂಖ್ಯೆ ವಾರದಿಂದ ವಾರಕ್ಕೆ ದುಪ್ಪಟ್ಟಾಗುತ್ತಾ ಬರುತ್ತಿದೆ. ಈ ವಾರ ಅತಿ ಹೆಚ್ಚು ಮತ ಪಡೆದ ಸ್ಪರ್ಧಿಗೆ ಬಂದಿರುವ ಮತಗಳ ಸಂಖ್ಯೆ ಎಷ್ಟು ಲಕ್ಷಗಳು ಗೊತ್ತೆ?
ಕಳೆದ ವಾರಾಂತ್ಯದಲ್ಲಿ ಸುದೀಪ್, ಬಿಗ್ಬಾಸ್ಗೆ ಬರಲಾಗಿರಲಿಲ್ಲ. ಕೆಸಿಸಿಯಲ್ಲಿ ಬ್ಯುಸಿ ಇದ್ದ ಕಾರಣಕ್ಕೆ ಅವರು ಗೈರಾಗಿದ್ದರು. ಅವರ ಬದಲಿಗೆ ಬಿಗ್ಬಾಸ್ ಮನೆಯ ಒಳಗೆ ಶ್ರುತಿ, ಶುಭಾ ಪೂಂಜಾ ಹಾಗೂ ಶೈನ್ ಶೆಟ್ಟಿ ಬಂದಿದ್ದರು. ಎಲಿಮಿನೇಷನ್ ಸಹ ನಡೆದು ಅವಿನಾಶ್ ಶೆಟ್ಟಿ ಮನೆಯಿಂದ ಹೊರಗೆ ಹೋದರು. ಈ ವಾರ ಸುದೀಪ್ ವೀಕೆಂಡ್ ಪಂಚಾಯಿತಿಗೆ ಮರಳಿದ್ದಾರೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಈ ವಾರ ಸ್ಪರ್ಧಿಯೊಬ್ಬರು ಪಡೆದಿರುವ ಮತಗಳ ಸಂಖ್ಯೆಯನ್ನು ಮನೆ ಮಂದಿಯ ಮುಂದೆ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರ ಮಾತುಗಳ ಬಗ್ಗೆ ಶನಿವಾರದ ಎಪಿಸೋಡ್ನಲ್ಲಿ ಚರ್ಚೆಯಾಯ್ತು. ಕಾರ್ತಿಕ್ ಅವರು ಸದೀಪ್ ಜೊತೆ ಚರ್ಚಿಸುತ್ತಾ, ‘‘ಏನು ಕೇಳಿದರು ನಾನು ನಿಮಗೆ ಕ್ಲಾರಿಟಿ ಕೊಡಬೇಕಿಲ್ಲ, ನಾನು ಜನರಿಗೆ ಕ್ಲಾರಿಟಿ ಕೊಟ್ಟರೆ ಸಾಕು’’ ಎಂದು ಹೇಳುತ್ತಾರೆ. ಏನು ಕೇಳಿದರೂ ‘ಜನ ನೋಡಿಕೊಳ್ತಾರೆ’ ಎಂದು ಹೇಳುತ್ತಾರೆ. ಎಲ್ಲದಕ್ಕೂ ಜನರ ಹೆಸರು ಹೇಳಿ ತಾವು ಉತ್ತರ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ’ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಮನೆಗೆ ಬಂದ ಕಾಂತಾರ ಬೆಡಗಿ ಸಪ್ತಮಿ ಗೌಡ, ಕಾರಣವೇನು?
ವರ್ತೂರು ಅವರ ಈ ವರ್ತನೆಯನ್ನು ಗಮನಿಸಿದ್ದ ಸುದೀಪ್ ಸಹ, ವರ್ತೂರು ಅವರನ್ನುದ್ದೇಶಿಸಿ, ನಾನು ಹೇಗೆ ಆಟವಾಡಿದರು ಜನ ಮತ ಹಾಕ್ತಾರೆ, ಜನ ನನ್ನನ್ನು ಗೆಲ್ಲಿಸ್ತಾರೆ ಎಂಬ ಭ್ರಮೆಯಲ್ಲಿ ಇದ್ದೀರಿ ಅನ್ನಿಸುತ್ತದೆ’’ ಎಂದಿದ್ದಾರೆ. ಮುಂದುವರೆದು ಈ ವಾರ ನಾಮಿನೇಟ್ ಆದ ಸ್ಪರ್ಧಿಯೊಬ್ಬರು 72.83 ಲಕ್ಷ ಮತಗಳನ್ನು ತೆಗೆದುಕೊಂಡಿದ್ದಾರೆ ಎಂದ ಸುದೀಪ್. ಈ ಮತಗಳು ಬಂದಿರುವುದು ವರ್ತೂರು ಸಂತೋಷ್ಗೆ ಅಲ್ಲ ಎಂದರು.
ಅಂದಹಾಗೆ, ಕೆಲ ವಾರಗಳ ಮುಂಚೆ, ವರ್ತೂರು ಸಂತೋಷ್ ಅವರು ತಾವು ಬಿಗ್ಬಾಸ್ನಿಂದ ಹೊರಗೆ ಹೋಗುವ ಬಗ್ಗೆ ಮಾತನಾಡಿದ್ದಾಗ ಅವರಿಗೆ ಸಿಕ್ಕಿದ್ದ ಮತಗಳ ಸಂಖ್ಯೆಯನ್ನು ಸುದೀಪ್ ಹೇಳಿದ್ದರು. ಆ ವಾರ ವರ್ತೂರು ಸಂತೋಷ್ಗೆ 32 ಲಕ್ಷಕ್ಕೂ ಹೆಚ್ಚು ಮತಗಳು ಬಂದಿದ್ದವು. ಆ ವಾರದಲ್ಲಿ ಅವರಷ್ಟು ಮತಗಳು ಇನ್ಯಾರಿಗೂ ಬಂದಿರಲಿಲ್ಲ. ಆದರೆ ಈ ಬಾರಿ ಮತಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ ಆ ದುಪ್ಪಟ್ಟಾಗಿರುವ ಮತಗಳು ಬಂದಿರುವುದು ವರ್ತೂರು ಸಂತೋಷ್ಗೆ ಅಲ್ಲ.
ಈ ವಾರ ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತು, ಸಂಗೀತಾ ಶೃಂಗೇರಿ, ಸಿರಿ, ಮೈಖಲ್, ತನಿಷಾ ಅವರುಗಳು ನಾಮಿನೇಟ್ ಆಗಿದ್ದು, ಇವರಲ್ಲಿ ಒಬ್ಬ ಸ್ಪರ್ಧಿಗೆ 72.83 ಲಕ್ಷ ಮತ ದೊರೆತಿದೆ. ಆದರೆ ಆ ಮತ ದೊರೆತಿರುವುದು ಯಾರಿಗೆ ಎಂಬುದನ್ನು ಸುದೀಪ್ ಹೇಳಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ