ನಮ್ಮ ಭಾವನೆಗೆ ಹರ್ಟ್​ ಮಾಡಬೇಡಿ: ಧ್ಯಾನದ ಬಗ್ಗೆ ಅನುಮಾನ ಎಂದಿದ್ದಕ್ಕೆ ಚೈತ್ರಾ ಕುಂದಾಪುರ ಗರಂ

|

Updated on: Oct 01, 2024 | 10:48 PM

ಜಗಳ ಬಿಟ್ಟರೆ ಬಿಗ್​ ಬಾಸ್​ನಲ್ಲಿ ಬೇರೆ ಏನೂ ಇಲ್ಲವೇ? ಮಾತು ಮಾತಿಗೂ ಚೈತ್ರಾ ಕುಂದಾಪುರ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ನರಕವಾಸಿಗಳಾದ ಮಾನಸಾ ಮತ್ತು ಚೈತ್ರಾ ನಡುವೆ ಧ್ಯಾನದ ವಿಚಾರಕ್ಕೆ ಜಗಳ ಆಗಿದೆ. ಮೊದಲ ವಾರದಲ್ಲಿ ಕೆಲವು ಸ್ಪರ್ಧಿಗಳ ಸದ್ದು ಜೋರಾಗಿದೆ. ಜಗಳ ಮಾಡದೇ ಇರುವವರು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್ ಆಗುತ್ತಲೇ ಇಲ್ಲ.

ನಮ್ಮ ಭಾವನೆಗೆ ಹರ್ಟ್​ ಮಾಡಬೇಡಿ: ಧ್ಯಾನದ ಬಗ್ಗೆ ಅನುಮಾನ ಎಂದಿದ್ದಕ್ಕೆ ಚೈತ್ರಾ ಕುಂದಾಪುರ ಗರಂ
ಚೈತ್ರಾ ಕುಂದಾಪುರ
Follow us on

ಹೊರ ಜಗತ್ತಿನಲ್ಲಿ ಭಾರಿ ವಿವಾದ ಮಾಡಿಕೊಂಡಿದ್ದ ಚೈತ್ರಾ ಕುಂದಾಪುರ ಅವರು ಬಿಗ್​ ಬಾಸ್​ ಮನೆಯಲ್ಲೂ ವಿವಾದ ಮುಂದುವರಿಸಿದ್ದಾರೆ. ಅವರಿಗೆ ತಕ್ಕಂತೆಯೇ ಬಿಗ್​ ಬಾಸ್​ ಮನೆಯ ವಾತಾವರಣ ಇದೆ. ಈ ಸೀಸನ್​ನಲ್ಲಿ ಬಹುತೇಕರು ಅಗ್ರೆಸಿವ್ ಆಗಿವೇ ‘ಬಿಗ್​ ಬಾಸ್​ ಕನ್ನಡ ಸೀಸನ್ 11’ ಆಟ ಶುರು ಮಾಡಿದ್ದಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಒಂದು ಸಣ್ಣ ವಿಚಾರ ಕೂಡ ಜಗಳಕ್ಕೆ ಕಾರಣ ಆಗಿದೆ. ಧ್ಯಾನ ಮತ್ತು ಜಪದ ಬಗ್ಗೆ ಮಾತನಾಡುತ್ತಾ ಇರುವಾಗ ಮಾನಸಾ ಮತ್ತು ಚೈತ್ರಾ ಕುಂದಾಪುರ ಅವರು ಜಗಳ ಮಾಡಿಕೊಂಡಿದ್ದಾರೆ. ನಿಜಕ್ಕೂ ಈ ಜಗಳ ಬೇಕಿತ್ತಾ ಎಂಬ ಪ್ರಶ್ನೆ ವೀಕ್ಷಕರ ಮನಸ್ಸಿನಲ್ಲಿ ಮೂಡುವಂತಾಗಿದೆ.

ನಡೆದಿದ್ದು ಇಷ್ಟೇ.. ಚೈತ್ರಾ ಕುಂದಾಪುರ ಅವರ ಜೊತೆ ಮಾನಸಾ ಮಾತನಾಡುವಾಗ ‘ನನಗೆ ಧ್ಯಾನ ಮಾಡುವವರ ಬಗ್ಗೆ ಯಾವಾಗಲೂ ಅನುಮಾನ ಇದೆ. ಧ್ಯಾನ ಮಾಡುತ್ತಾರಾ ಅಥವಾ ನಿದ್ರೆ ಮಾಡುತ್ತಾರಾ ಗೊತ್ತಾಗುವುದಿಲ್ಲ’ ಎಂದು ಮಾನಸಾ ಹೇಳಿದರು. ಆಗ ಧ್ಯಾನ ಬೇರೆ, ಜಪ ಬೇರೆ ಎಂದು ಚೈತ್ರಾ ಹೇಳಿದರು. ಅಷ್ಟೇ.. ಜಗಳ ಶುರುವಾಯಿತು.

ಧ್ಯಾನ ಮತ್ತು ಜಪದ ನಡುವೆ ತಮಗೆ ವ್ಯತ್ಯಾಸ ಗೊತ್ತಿಲ್ಲ ಎಂದು ಮಾನಸಾ ಹೇಳಿದರು. ‘ವಿಷಯ ಗೊತ್ತಿಲ್ಲದೇ ಮಾತನಾಡಬೇಡಿ. ನಮ್ಮ ಭಾವನೆಗೆ ಹರ್ಟ್​ ಮಾಡಬೇಡಿ’ ಎಂದು ಚೈತ್ರಾ ಕುಂದಾಪುರ ಅವರು ಕೂಗಾಡಿದರು. ‘ಮಾತನಾಡುವುದು ನನ್ನಿಷ್ಟ. ಎಲ್ಲರೂ ಒಂದೇ ರೀತಿ ಇರೋಕೆ ಆಗಲ್ಲ’ ಎಂದು ಮಾನಸಾ ಕೂಡ ಧ್ವನಿ ಏರಿಸಿದರು. ಇಷ್ಟು ಚಿಕ್ಕ ವಿಚಾರಕ್ಕೆ ಜಗಳ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಇರುವವರಿಗೆ ಈ ತಂತ್ರ ಚೆನ್ನಾಗಿ ಅರ್ಥವಾದಂತಿದೆ. ಸುಮ್ಮನೆ ಕುಳಿತಿದ್ದರೆ ತಮ್ಮ ಮೇಲೆ ಕ್ಯಾಮೆರಾ ಫೋಕಸ್​ ಆಗುವುದಿಲ್ಲ. ಏನಾದರೂ ಗಲಾಟೆ ಮಾಡಿಕೊಂಡರೆ ಎಪಿಸೋಡ್​ನಲ್ಲಿ ಜಾಗ ಸಿಗುತ್ತದೆ. ಹಾಗಾಗಿ ಸಣ್ಣ ಸಣ್ಣ ವಿಚಾರಕ್ಕೂ ಕಿರಿಕ್ ಮಾಡಿಕೊಳ್ಳಲಾಗುತ್ತಿದೆ. ಅದನ್ನು ಹೊರತುಪಡಿಸಿ ಬಿಗ್​ ಬಾಸ್​ನಲ್ಲಿ ಏನೂ ಇಲ್ಲವೇನೋ ಎಂಬ ಭಾವನೆ ಮೂಡುವಂತಾಗಿದೆ.

ಇದನ್ನೂ ಓದಿ: ‘ಚೈತ್ರಾಗೆ ನೀನು ರನ್ನ, ಚಿನ್ನ, ಚಂದ್ರ ಅಂದ್ರೆ ಮುಗೀತು’: ಇದು ಗೋಲ್ಡ್ ಸುರೇಶ್ ಲೆಕ್ಕಾಚಾರ

ಶಿಶಿರ್​, ಯಮುನಾ ಶ್ರೀನಿಧಿ, ಭವ್ಯಾ ಗೌಡ, ಗೌತಮಿ ಜಾಧವ್, ಉಗ್ರಂ ಮಂಜು, ತ್ರಿವಿಕ್ರಮ್, ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ, ಮಾನಸಾ, ಧನರಾಜ್, ಗೋಲ್ಡ್​ ಸುರೇಶ್, ಅನುಷಾ ರೈ, ಐಶ್ವರ್ಯಾ, ಮೋಕ್ಷಿತಾ ಪೈ, ರಂಜಿತ್, ಹಂಸಾ, ಧರ್ಮ ಕೀರ್ತಿರಾಜ್​ ಅವರು ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.