ಬಿಗ್ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ವಾರ ಇದಾಗಿದೆ. ಈ ಶನಿವಾರ ಹಾಗೂ ಭಾನುವಾರ ಬಿಗ್ಬಾಸ್ ಸೀಸನ್ 11 ರ ಫಿನಾಲೆ ನಡೆಯಲಿದೆ. ಭಾನುವಾರದಂದು ಈ ಸೀಸನ್ನ ವಿಜೇತರನ್ನು ಘೋಷಿಸಲಾಗುತ್ತದೆ. ಈಗ ಅಂತಿಮ ಸುತ್ತಿನಲ್ಲಿ ಆರು ಮಂದಿ ಉಳಿದುಕೊಂಡಿದ್ದಾರೆ. ಆರರಲ್ಲಿ ಯಾರು ಹೆಚ್ಚು ಮತ ಪಡೆಯುತ್ತಾರೆಯೋ ಅವರು ವಿಜೇತರಾಗಿ ಘೋಷಿಸಲಾಗುತ್ತದೆ. ಇದೀಗ ಬಿಗ್ಬಾಸ್ ವೋಟಿಂಗ್ ಲೈನ್ ಆರಂಭವಾಗಿದ್ದು, ಮೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕುವ ವಿಧಾನ ಹೀಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರದಲ್ಲಿ ಮೋಕ್ಷಿತಾ, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಮತ್ತು ತ್ರಿವಿಕ್ರಮ್ ಅವರುಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ.
ಜಿಯೋ ಆಪ್ ಅಥವಾ ವೆಬ್ ನಲ್ಲಿ ಮಾತ್ರವೇ ಮತ ಹಾಕಲು ಅವಕಾಶ ಇದೆ. ಜಿಯೋ ಆಪ್ಲಿಕೇಶನ್ ತೆರೆದು ಬಿಗ್ಬಾಸ್ ಕನ್ನಡ (Bigg Boss Kannada) ಎಂದು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಸರ್ಚ್ ಬಾರ್ನಲ್ಲಿ Bigg Boss Kannada ಎಂದು ಇಂಗ್ಲೀಷ್ನಲ್ಲಿ ಸರ್ಚ್ ಮಾಡಬೇಕು. ಬಳಿಕ ಬಿಗ್ಬಾಸ್ ಕನ್ನಡದ ಕೆಲ ವಿಡಿಯೋಗಳು ತೆರೆದು ಕೊಳ್ಳುತ್ತವೆ. ಅದರಿಂದ ತುಸುವಷ್ಟೆ ಕೆಳಗೆ ಸ್ಕ್ರೋಲ್ ಮಾಡಿದರೆ ವೋಟ್, ಪ್ಲೇ ಆಂಡ್ ವಿನ್ (Vote, Play & Win) ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿಯೇ ‘ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ವೋಟ್ ಮಾಡಿ’ ಎಂಬ ಆಯ್ಕೆ ಕಾಣುತ್ತದೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್ಗೆ ತಲೆತಗ್ಗಿಸಿದ ರಜತ್
ಅಲ್ಲಿ ಕ್ಲಿಕ್ ಮಾಡಿದಾಗ ಫಿನಾಲೆ ವಾರದಲ್ಲಿ ಉಳಿದಿರುವ ಆರು ಸ್ಪರ್ಧಿಗಳ ಚಿತ್ರಗಳು ತೆರೆದುಕೊಳ್ಳುತ್ತವೆ. ನಿಮಗೆ ಇಷ್ಟವಾದ ಸ್ಪರ್ಧಿಯ ಮೇಲೆ ಕ್ಲಿಕ್ ಮಾಡಿದ ಕೂಡಲೇ ಕೆಳಗೆ ‘ವೋಟ್ ಮಾಡಿ’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಯ ಖಾತೆಗೆ ಒಂದು ಮತ ಸೇರಿಕೊಳ್ಳುತ್ತದೆ. ಹೀಗೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ನೂರು ಮತಗಳನ್ನು ಮಾಡಬಹುದಾಗಿರುತ್ತದೆ.
ನೆನಪಿರಲಿ ವೋಟ್ ಮಾಡುವ ಅವಕಾಶ ಶನಿವಾರ ಮಧ್ಯಾಹ್ನದ ವರೆಗೆ ಮಾತ್ರವೇ ಇರಲಿದೆ. ಅಂದರೆ ಇನ್ನು ನಾಲ್ಕು ದಿನಗಳ ಕಾಲ ಮಾತ್ರವೇ ವೋಟ್ ಮಾಡುವ ಅವಕಾಶ ಇರಲಿದೆ. ಕೊನೆಯ ದಿನ ಈ ಮತಗಳ ಆಧಾರದ ಮೇಲೆ ವಿಜೇತರ ಘೋಷಣೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ