ಎಲ್ಲರ ಮನ ಗೆದ್ದ ಹನುಮಂತನ ಪ್ಲಸ್ ಏನು, ಮೈನಸ್ ಏನು? ಟ್ರೋಫಿ ಮೇಲೆ ಕಣ್ಣು
ಹನುಮಂತ ಅವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಟ್ರೋಫಿ ಮೇಲೆ ಅವರು ಕಣ್ಣಿಟ್ಟಿದ್ದಾರೆ. ‘ಈ ಸಲ ಕಪ್ ನಮ್ದೇ’ ಅಂತ ಅವರು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಹನುಮಂತ ಅವರ ವ್ಯಕ್ತಿತ್ವದಲ್ಲಿ ಕೆಲವು ಪ್ಲಸ್ ಇದೆ. ಇನ್ನೂ ಕೆಲವು ಮೈಸನ್ ಕೂಡ ಇದೆ. ವೀಕ್ಷಕರಿಂದ ಅವರಿಗೆ ಸಿಕ್ಕಾಪಟ್ಟೆ ಪ್ರೀತಿ ಸಿಕ್ಕಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ಫಿನಾಲೆ ಸಂಚಿಕೆ ನಡೆಸಿಕೊಡಲಿದ್ದಾರೆ. ಭವ್ಯಾ ಗೌಡ, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಉಗ್ರಂ ಮಂಜು ಅವರ ಪೈಕಿ ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬುದನ್ನು ತಿಳಿಯಲು ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹನುಮಂತ ಅವರು ಟ್ರೋಫಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಹನುಮಂತ ಅವರು ಮೊದಲ ಪ್ಲಸ್ ಪಾಯಿಂಟ್ ಏನೆಂದರೆ, ಅದು ಮುಗ್ಧತೆ. ಹಳ್ಳಿಯಿಂದ ಬಂದಿರುವ ಅವರು ಕಪಟಿ ಅಲ್ಲವೇ ಅಲ್ಲ. ಹೆಚ್ಚೇನೂ ಲೆಕ್ಕಾಚಾರ ಹಾಕದೇ ಅವರು ಆಟ ಆಡುತ್ತಾರೆ. ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನು ಆಡುವುದಿಲ್ಲ. ವೈಯಕ್ತಿಕ ದ್ವೇಷ ಎಂಬುದು ಅವರಲ್ಲಿ ಇಲ್ಲ. ಪಕ್ಷಪಾತ ಕೂಡ ಮಾಡುವುದಿಲ್ಲ. ಈ ಗುಣವನ್ನು ಮನೆ ಮಂದಿ ಮತ್ತು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.
ಮನರಂಜನೆ ನೀಡುವುದು ಹನುಮಂತ ಅವರ ಇನ್ನೊಂದು ಪ್ಲಸ್ ಪಾಯಿಂಟ್. ಬಿಗ್ ಬಾಸ್ ಮನೆಗೆ ಹನುಮಂತ ಬಂದ ಬಳಿಕ ಇಡೀ ಮನೆಯ ವಾತಾವರಣ ಬದಲಾಯಿತು. ಯಾವಾಗಲೂ ಹಾಸ್ಯದ ಮಾತುಗಳನ್ನು ಆಡುತ್ತಾ ಅವರು ಮನರಂಜನೆ ನೀಡಿದರು. ಆಗಾಗ ಹಾಡಿನ ಮೂಲಕ ಕೂಡ ರಂಜಿಸಿದರು. ಆ ಕಾರಣಗಳಿಂದಲೂ ಅವರಿಗೆ ವೀಕ್ಷಕರಿಂದ ಪ್ರೀತಿ ಸಿಕ್ಕಿದೆ. ಟಾಸ್ಕ್ಗಳಲ್ಲಿ ಹನುಮಂತ ಹಿಂದೆ ಬಿದ್ದಿಲ್ಲ. ಘಟಾನುಘಟಿಗಳಿಗೂ ಪೈಪೋಟಿ ನೀಡಿ ಅವರು ಫಿನಾಲೆಗೆ ಬಂದರು. ಅವರು ಈಗ ಸ್ಪರ್ಧಾ ಗುಣವನ್ನು ಮೆಚ್ಚಿಕೊಳ್ಳದವರೇ ಇಲ್ಲ.
ಇದನ್ನೂ ಓದಿ: ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?
ಇಷ್ಟೆಲ್ಲ ಪ್ಲಸ್ಗಳ ನಡುವೆ ಹನುಮಂತ ಅವರ ಪಾಲಿಗೆ ಕೆಲವು ಮೈನಸ್ ಕೂಡ ಇವೆ. ಅವರು ವೈಲ್ಡ್ ಕಾರ್ಡ್ ಸ್ಪರ್ಧಿ. ಬೇರೆಯವರಿಗೆ ಹೋಲಿಸಿದರೆ ಬಿಗ್ ಬಾಸ್ ಮನೆಯಲ್ಲಿ ಅವರು ಕಳೆದ ದಿನಗಳ ಸಂಖ್ಯೆ ಕಡಿಮೆ. ವೈಲ್ಡ್ ಕಾರ್ಡ್ ಸ್ಪರ್ಧಿಗೆ ಟ್ರೋಫಿ ನೀಡುವ ಸಾಧ್ಯತೆ ಕಮ್ಮಿ. ಇದು ಹನುಮಂತ ಅವರಿಗೆ ಮೈನಸ್ ಆಗಬಹುದು. ಇನ್ನು, ಹನುಮಂತ ಅವರ ವ್ಯಕ್ತಿತ್ವದ ಬಗ್ಗೆ ಕೆಲವರಿಗೆ ಅನುಮಾನ ಇದೆ. ಅವರು ಮುಗ್ಧನಂತೆ ನಟಿಸುತ್ತಾರೆ ಎಂಬ ಕಮೆಂಟ್ಗಳು ಕೆಲವರಿಂದ ಬಂದಿವೆ. ಈ ಕಾರಣದಿಂದ ಕಡಿಮೆ ವೋಟ್ ಬಂದರೆ ಟ್ರೋಫಿ ಕೈ ತಪ್ಪಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.