ತಪ್ಪಿತಸ್ಥ ಭಾವನೆಯಿಂದ ಬಿಗ್ ಬಾಸ್ ತೊರೆಯುವ ನಿರ್ಧಾರಕ್ಕೆ ಬಂದ ಧನರಾಜ್

|

Updated on: Jan 17, 2025 | 7:30 AM

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಧನರಾಜ್ ಅವರು ಟಾಸ್ಕ್​​ನಲ್ಲಿ ತಪ್ಪಿನಿಂದ ಮಧ್ಯವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಧನರಾಜ್ ಬೇಸರಗೊಂಡು ಮನೆಯಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ. ಆದರೆ, ಮನೆಯ ಸದಸ್ಯರು ಅವರನ್ನು ಸಮಾಧಾನಪಡಿಸಿದ್ದಾರೆ. ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ.

ತಪ್ಪಿತಸ್ಥ ಭಾವನೆಯಿಂದ ಬಿಗ್ ಬಾಸ್ ತೊರೆಯುವ ನಿರ್ಧಾರಕ್ಕೆ ಬಂದ ಧನರಾಜ್
ಧನರಾಜ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಧ್ಯವಾರದ ಎಲಿಮಿಮೇಷನ್ ಪ್ರಕ್ರಿಯೆ ರದ್ದು ಮಾಡಲಾಗಿದೆ. ಇದಕ್ಕೆ ಕಾರಣವಾಗಿದ್ದು ಧನರಾಜ್ ಅವರ ಆಟ. ಟಾಸ್ಕ್ ವೇಳೆ ಧನರಾಜ್ ಮಾಡಿದ ತಪ್ಪಿನಿಂದ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡುವ ನಿರ್ಧಾರಕ್ಕೆ ಬಿಗ್ ಬಾಸ್ ಬಂದರು. ಈ ವಿಚಾರವನ್ನು ನೇರವಾಗಿ ಹೇಳಲಾಯಿತು. ಈಗ ಧನರಾಜ್ ಅವರು ಮಾಡಿದ ತಪ್ಪಿನಿಂದ ದುಃಖಕ್ಕೆ ಒಳಗಾಗಿದ್ದು ದೊಡ್ಮನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಧನರಾಜ್ ಅವರು ದೊಡ್ಮನೆಯಲ್ಲಿ ಸಾಕಷ್ಟು ಉತ್ತಮವಾಗಿ ಆಡುತ್ತಿದ್ದಾರೆ. ಅವರು 109 ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದು ನಿಜಕ್ಕೂ ಸಣ್ಣ ಸಾಧನೆಯಲ್ಲ. ಆದರೆ, ಕೊನೆಯ ಹಂತದಲ್ಲಿ ಅವರು ಎಡವಿದ್ದಾರೆ. ಅವರು ಮೋಸ ಮಾಡಿ ಟಾಸ್ಕ್​ ಗೆದ್ದ ಆರೋಪ ಹೊತ್ತಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

ಧನರಾಜ್ ಅವರು ಇತ್ತೀಚೆಗೆ ಟಾಸ್ಕ್ ಆಡುವಾಗ ತಪ್ಪನ್ನು ಮಾಡಿದ್ದರು. ಎದುರಿಗೆ ಇದ್ದ ಕನ್ನಡಿಯಲ್ಲಿರುವ ರಿಫ್ಲೆಕ್ಷನ್ ನೋಡಿ ಅವರು ಆಟ ಆಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಕೊನೆಗೆ ಧನರಾಜ್ ಅವರೇ ಆಟದಲ್ಲಿ ಗೆದ್ದರು. ಆಗ ಬಿಗ್ ಬಾಸ್ ಮಧ್ಯೆ ಬರಲಿಲ್ಲ. ಹೀಗಾಗಿ, ಧನರಾಜ್ ಅವರೇ ವಿನ್ನರ್ ಎಂದು ಘೋಷಣೆ ಮಾಡಲಾಯಿತು.

ಜನವರಿ 15ರ ಎಪಿಸೋಡ್​ನಲ್ಲಿ ‘ಮಿಡ್ ವೀಕ್ ಎಲಿಮಿನೇಷನ್’ ಪ್ರಕ್ರಿಯೆ ನಡೆಸಲಾಯಿತು. ಆದರೆ, ಯಾರನ್ನೂ ಹೊರಹಾಕಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಡಿಸೆಂಬರ್ 16ರ ಎಪಿಸೋಡ್​ನಲ್ಲಿ ತೋರಿಸಲಾಯಿತು. ಧನರಾಜ್ ಅವರು ಮೋಸ ಮಾಡಿದ್ದರಿಂದಲೇ ಮಿಡ್ ವೀಕ್ ಎಲಿಮಿನೇಷನ್ ನಡೆಸಿಲ್ಲ ಎಂದರು ಬಿಗ್ ಬಾಸ್. ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷ್ ನಡೆಯಲಿದೆ ಎನ್ನುವ ಸೂಚನೆಯನ್ನೂ ಕೊಡಲಾಯಿತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ? ಕಣ್ಣೀರಿಟ್ಟ ಸ್ಪರ್ಧಿ

ಈ ಪ್ರಕ್ರಿಯೆ ಬಳಿಕ ಧನರಾಜ್ ಅವರು ಬೇಸರಗೊಂಡಿದ್ದಾರೆ. ‘ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಈಗಲೇ ಬಿಗ್ ಬಾಸ್​ ಮನೆಯಿಂದ ಹೊರ ಹೋಗುತ್ತೇನೆ’ ಎಂದಿದ್ದಾರೆ. ಆ ಬಳಿಕ ಮನೆಯವರು ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.