ಮುಂದಿನ ವಾರ ಎಲಿಮಿನೇಟ್ ಆಗುವುದು ಯಾರು? ಶನಿವಾರವೇ ಸಿಕ್ಕಿತು ಸುಳಿವು

Bigg Boss Kannada season 12: ಬಿಗ್​​ಬಾಸ್ ನಿಯಮದಂತೆ ಪ್ರತಿ ವಾರವೂ ಒಬ್ಬರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ. ಅವರು ಯಾರು ಎಂಬುದು ಸುದೀಪ್ ನಡೆಸಿಕೊಡುವ ವಾರಾಂತ್ಯದ ಎಪಿಸೋಡ್​​ನಲ್ಲಿ ಅದರಲ್ಲೂ ಭಾನುವಾರದ ಎಪಿಸೋಡ್​​​ನಲ್ಲಿ ತಿಳಿದು ಬರುತ್ತದೆ. ಆದರೆ ಮುಂದಿನ ವಾರ ಯಾರು ನಾಮಿನೇಟ್ ಆಗಲಿದ್ದಾರೆ ಎಂಬುದು ಶನಿವಾರದ ಎಪಿಸೋಡ್​​ನಲ್ಲಿಯೇ ತಿಳಿದು ಬಂದಿದೆ. ಮುಂದಿನ ವಾರ ಎಲಿಮಿನೇಟ್ ಆಗುವವರು ಯಾರು?

ಮುಂದಿನ ವಾರ ಎಲಿಮಿನೇಟ್ ಆಗುವುದು ಯಾರು? ಶನಿವಾರವೇ ಸಿಕ್ಕಿತು ಸುಳಿವು
Bigg Boss Kannada Elimination

Updated on: Oct 26, 2025 | 8:00 AM

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ, ಟಾಸ್ಕ್, ತಮಾಷೆಯ ಜೊತೆಗೆ ಪ್ರೇಕ್ಷಕರಿಗೆ ಬಹಳ ಕುತೂಹಲ ಮೂಡಿಸುವ ವಿಷಯವೆಂದರೆ ಈ ವಾರ ಯಾರು ನಾಮಿನೇಟ್ ಎಂಬುದು. ಬಿಗ್​​ಬಾಸ್ ನಿಯಮದಂತೆ ಪ್ರತಿ ವಾರವೂ ಒಬ್ಬರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ. ಅವರು ಯಾರು ಎಂಬುದು ಸುದೀಪ್ ನಡೆಸಿಕೊಡುವ ವಾರಾಂತ್ಯದ ಎಪಿಸೋಡ್​​ನಲ್ಲಿ ಅದರಲ್ಲೂ ಭಾನುವಾರದ ಎಪಿಸೋಡ್​​​ನಲ್ಲಿ ತಿಳಿದು ಬರುತ್ತದೆ. ಆದರೆ ಮುಂದಿನ ವಾರ ಯಾರು ನಾಮಿನೇಟ್ ಆಗಲಿದ್ದಾರೆ ಎಂಬುದು ಶನಿವಾರದ ಎಪಿಸೋಡ್​​ನಲ್ಲಿಯೇ ತಿಳಿದು ಬಂದಿದೆ.

ನಿನ್ನೆ ನಡೆದ ಶನಿವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು ಸ್ಪರ್ಧಿಗಳೊಟ್ಟಿಗೆ ತಮಾಷೆಯಾಗಿ ಮಾತು ಆರಂಭಿಸಿ ಆ ನಂತರ ಕೆಲವರ ತಪ್ಪುಗಳ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಟ್ಟರು, ಕೆಲವರಿಗೆ ಎಚ್ಚರಿಕೆ ಕೊಟ್ಟರು, ಕೆಲವರನ್ನು ಪ್ರೀತಿಯಿಂದ ಗದರಿದರು. ಆದರೆ ಇದೆಲ್ಲದರ ನಡುವೆ ಮುಂದಿನ ವಾರ ಬಿಗ್​​ಬಾಸ್ ಮನೆಯಿಂದ ಹೊರ ಹೋಗಲಿರುವವರು ಯಾರು ಎಂಬ ಸುಳಿವನ್ನೂ ಸಹ ಸುದೀಪ್ ನೀಡಿದರು.

ಮುಂದಿನ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುವ ಸ್ಪರ್ಧಿ ಮಾಲು. ಈ ವಾರವೂ ಅವರು ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ ಎಲಿಮಿನೇಷನ್ ಇರುವುದಿಲ್ಲ. ಓಟಿಂಗ್ ಲೈನ್ ಅನ್ನು ಈ ವಾರ್ ಬಂದ್ ಇಡಲಾಗಿದೆ. ಹಾಗಾಗಿ ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ. ಶನಿವಾರದ ಎಪಿಸೋಡ್​​ನಲ್ಲಿ ಸಹ ಸುದೀಪ್ ಅವರು ಯಾರನ್ನೂ ಸೇಫ್ ಮಾಡಲಿಲ್ಲ. ಅಂದಹಾಗೆ ಮಾಲುವೇ ಮುಂದಿನ ವಾರ ಎಲಿಮಿನೇಟ್ ಆಗುವುದು ಎಂಬುದು ಖಾತ್ರಿ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

ಇದನ್ನೂ ಓದಿ:ಬಿಗ್​​ಬಾಸ್​​ಗಿಂತಲೂ ದೊಡ್ಡವನು ನಾನೆಂದ ಧ್ರುವಂತ್​​ಗೆ ಕಿಚ್ಚ ಹೇಳಿದ್ದೇನು?

ಅಶ್ವಿನಿ ಅವರ ಆಟದ ಬಗ್ಗೆ ಚರ್ಚೆ ನಡೆಯುತ್ತಿತ್ತು, ಅಶ್ವಿನಿ ಅವರು ಮಾತನಾಡುತ್ತಾ, ‘ನಾಲ್ಕನೇ ವಾರ ನಾನು ಗೊಂದಲದಲ್ಲಿ ಇದ್ದೆ, ನಾನು ಏನು ಮಾಡಿದರೂ ಮನೆಯಲ್ಲಿ ಕೆಲವರು ಅದನ್ನು ವಿರೋಧದ ದೃಷ್ಟಿಯಿಂದಲೇ ನೋಡುತ್ತಾರೆ. ಹಾಗಾಗಿ ನಾನು ಏನು ಮಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬ ಗೊಂದಲ ನನಗೆ ಸೃಷ್ಟಿ ಆಗಿದೆ. ನಾನು ಮಾಡಿದ್ದಕ್ಕೆಲ್ಲ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ಇದಕ್ಕೆ ಉತ್ತರಿಸಿದ ಸುದೀಪ್, ‘ನೀವು ಮಾತನಾಡುತ್ತೀರಿ, ನೀವು ಕೆಲಸ ಮಾಡುತ್ತೀರಿ, ನೀವು ಪ್ರತಿಯೊಂದರಲ್ಲಿಯೂ ತೊಡಗಿಸಿಕೊಳ್ಳುತ್ತೀರಿ ಇದೇ ಕಾರಣಕ್ಕೆ ನಿಮ್ಮನ್ನು ಬೆಂಬಲ ಮಾಡುವವರು ಹಾಗೂ ವಿರೋಧ ಮಾಡುವವರು ಇಬ್ಬರೂ ಇದ್ದಾರೆ. ಅದೇ ಈಗ ಮಾಲುವನ್ನು ನೋಡಿ, ಆ ವ್ಯಕ್ತಿ ಮನೆಯಲ್ಲಿ ಇದ್ದಾರೋ ಇಲ್ಲವೋ ತಿಳಿಯುವುದಿಲ್ಲ. ಯಾವ ವಿಷಯಕ್ಕೂ ಆತ ಮಾತನಾಡುವುದಿಲ್ಲ, ಯಾವ ವಿಷಯದಲ್ಲಿಯೂ ಸ್ಪಷ್ಟ ನಿಲುವು ತೆಗೆದುಕೊಳ್ಳುವುದಿಲ್ಲ. ಹೀಗಿರುವಾಗ ಆತನನ್ನು ಯಾರು ತಾನೆ ಏಕೆ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದರು.

ಶನಿವಾರದ ಎಪಿಸೋಡ್​ ಪೂರ್ತಿ, ಸುದೀಪ್ ಅವರು ಮಾಲುವನ್ನು ಮಾತನಾಡಿಸಲೇ ಇಲ್ಲ. ಮಾಲು ಸಹ ಯಾವ ವಿಷಯಕ್ಕೂ ಸಹ ಸುದೀಪ್ ಜೊತೆಗೆ ಮಾತನಾಡದೆ ಮೌನವಾಗಿಯೇ ಉಳಿದರು. ಯಾವುದೇ ಸ್ಪರ್ಧಿ ಹೀಗೆ ಮೌನವಾದಾಗ, ಮನೆಯ ಸದಸ್ಯರಿಂದ ಅಂತರ ಕಾಯ್ದುಕೊಂಡರೆ ಆ ಸ್ಪರ್ಧಿ ಖಂಡಿತ ಎಲಿಮಿನೇಟ್ ಆಗುತ್ತಾರೆ. ಮಾಲುಗೆ ಇನ್ನೊಂದು ವಾರ ಅವಕಾಶ ಇದೆ. ಒಂದೊಮ್ಮೆ ಈ ವಾರ ಆಟದಲ್ಲಿ ಸುಧಾರಣೆ ಕಂಡು ಕೊಂಡರಷ್ಟೆ ಮಾಲು ಮುಂದಿನ ವಾರ ಉಳಿದುಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 am, Sun, 26 October 25