
ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಶೋ ‘ಬಿಗ್ ಬಾಸ್’ (Bigg Boss) ವಿವಿಧ ಭಾಷೆಗಳಲ್ಲಿ ಸಕ್ಸಸ್ ಆಗಿದೆ. ಕನ್ನಡದಲ್ಲಿ ಕೂಡ ಯಶಸ್ವಿಯಾಗಿ 11 ಸೀಸನ್ಗಳು ಪೂರ್ಣಗೊಂಡಿವೆ. 11ನೇ ಸೀಸನ್ನಲ್ಲಿ ಸಿಂಗರ್ ಹನುಮಂತ ಅವರು ಟ್ರೋಫಿ ಗೆದ್ದರು. ಈಗ 12ನೇ ಸೀಸನ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ. ಮತ್ತೆ ಸುದೀಪ್ (Kichcha Sudeep) ಅವರೇ ನಿರೂಪಣೆ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಏರ್ಪಡಿಸಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ಕಲರ್ಸ್ ಕನ್ನಡ’ ವಾಹಿನಿಯು ಸುದ್ದಿಗೋಷ್ಠಿ ಆಯೋಜಿಸಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನ ಆಯೋಜಕರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ವಿವಿಧ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆ.
ಕನ್ನಡದಲ್ಲಿ ಮೊದಲನೇ ಸೀಸನ್ನಿಂದ 11ನೇ ಸೀಸನ್ ತನಕ ಕಿಚ್ಚ ಸುದೀಪ್ ಅವರೇ ಸತತವಾಗಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಆದರೆ 11ನೇ ಸೀಸನ್ ತಮ್ಮ ಕೊನೆಯೇ ಸೀಸನ್ ಎಂದು ಸುದೀಪ್ ಅವರು ಘೋಷಣೆ ಮಾಡಿದ ಬಳಿಕ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಯಾಕೆಂದರೆ ಸುದೀಪ್ ಇಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಫ್ಯಾನ್ಸ್ ಸಿದ್ಧರಿಲ್ಲ.
ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅದ್ದೂರಿತನ ಹೆಚ್ಚುತ್ತಿದೆ. ಕೆಲವು ವಿವಾದಗಳು ಇದ್ದರೂ ಕೂಡ ಕಾರ್ಯಕ್ರಮದ ಜನಪ್ರಿಯತೆ ಕೂಡ ಜಾಸ್ತಿ ಆಗುತ್ತಿದೆ. ಪ್ರತಿ ಸೀಸನ್ನಲ್ಲಿ ಉತ್ತಮ ಟಿಆರ್ಪಿ ಬರುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಅತ್ಯಂತ ಯಶಸ್ವಿ ಆಯಿತು. ಈಗ ‘ಬಿಗ್ ಬಾಸ್ ಕನ್ನಡ 12’ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್ಗೆ ಪಡೆಯೋ ಸಂಭಾವನೆ ಇಷ್ಟೊಂದಾ?
ಪ್ರತಿಬಾರಿಯೂ ಬಿಗ್ ಬಾಸ್ ಶೋ ಆರಂಭಕ್ಕೂ ಮುನ್ನ ಒಂದಷ್ಟು ಗಾಸಿಪ್ಗಳು ಹುಟ್ಟಿಕೊಳ್ಳುತ್ತವೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಅನೇಕ ಅಂತೆ-ಕಂತೆಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳಿಗೆಲ್ಲ ಈ ಸುದ್ದಿಗೋಷ್ಠಿಯಲ್ಲಿ ‘ಕಲರ್ಸ್ ಕನ್ನಡ’ ವಾಹಿನಿಯವರು ಸ್ಪಷ್ಟನೆ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:02 pm, Mon, 30 June 25