
ಬಿಗ್ಬಾಸ್ (Bigg Boss) ಕನ್ನಡ ಶೋಗೆ ವೈಲ್ಡ್ ಮೂಲಕ ಮೂವರು ಸ್ಪರ್ಧಿಗಳು ಬಂದ ಬಳಿಕ ಮೊದಲ ವಾರದ ಪಂಚಾಯಿತಿ ನಿನ್ನೆ (ಅಕ್ಟೋಬರ್ 25) ನಡೆಯಿತು. ಸುದೀಪ್ ಅವರು ಎಲ್ಲ ಸ್ಪರ್ಧಿಗಳ ಬಗ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರ ಅಭಿಪ್ರಾಯ ಕೇಳಿದರು. ಬಳಿಕ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಸ್ಪರ್ಧಿಗಳ ಅಭಿಪ್ರಾಯಗಳನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಪ್ರತಿಯೊಬ್ಬ ಸ್ಪರ್ಧಿಯೂ ತಮಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಏನನ್ನಿಸಿತು ಎಂದು ಹೇಳಿದರು. ಆದರೆ ಜಾನ್ವಿಯ ಉತ್ತರ ತಮಾಷೆಯಾಗಿರುವ ಜೊತೆಗೆ ಸುದೀಪ್ ಅವರ ಪ್ರತ್ಯುತ್ತರ ಅವರನ್ನು ಮತ್ತೊಮ್ಮೆ ಚಿಂತೆಗೆ ಹಚ್ಚಿತು.
ಜಾನ್ವಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ಹೇಳುತ್ತಾ, ‘ರಘು ಅವರು ಮೊದಲು ಬಂದಾಗ ಬಹಳ ಖಡಕ್ ಆದ ಎಂಟ್ರಿ ಕೊಟ್ಟರು. ಅವರನ್ನು ನೋಡಿ ಭಯ ಆಗಿತ್ತು, ಆದರೆ ಈಗ ನೋಡಿದರೆ ಅವರು ನನಗೆ ಭಾವ ಆಗುತ್ತಿರುವಂತಿದೆ. ಅಶ್ವಿನಿ ಅವರನ್ನು ಕೈ ಹಿಡಿದುಕೊಂಡು ಸುತ್ತಾಡಿಸುವುದೇನು? ಅಶ್ವಿನಿ ಅವರೊಟ್ಟಿಗೆ ಮಾತನಾಡುವುದು, ಅವರಿಗೆ ಸಹಾಯ ಮಾಡುವುದೇನು ಎಂದು ಜಾನ್ವಿ ತಮಾಷೆಯಾಗಿ ಹೇಳುತ್ತಲೇ ಮುಂದುವರೆದರು. ಆದರೆ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿದ ಸುದೀಪ್, ‘ಜಾನ್ವಿ ಅವರೇ ನಾನು ಕೇಳಿದ್ದು ನಿಮ್ಮ ಅಭಿಪ್ರಾಯ, ನೀವು ನೋಡಿದರೆ ಇಲ್ಲಿಯೂ ಅಶ್ವಿನಿ, ಅಶ್ವಿನಿ, ಅಶ್ವಿನಿ ಎನ್ನುತ್ತಿದ್ದೀರಲ್ಲ’ ಎಂದರು.
ಆಗ ಜಾನ್ವಿಗೆ ಅಯ್ಯೋ ಹೌದಲ್ಲ ಎನಿಸಿತು, ಮಾತು ಮುಂದುವರೆಸಿದ ಸುದೀಪ್, ‘ನೀವು ಅಶ್ವಿನಿ ಅವರ ಜೊತೆ ಇದ್ದೀರಿ, ಆದರೆ ನೀವು ಎಲ್ಲಿದ್ದೀರಿ. ಪದೇ ಪದೇ ನೀವು ಅಶ್ವಿನಿ ಬಗ್ಗೆಯೇ ಮಾತನಾಡುತ್ತಿದ್ದರೆ, ನಾವು-ನೀವು ಬೇಗ ಮುಖಾ-ಮುಖಿ ಆಗಿ ಮಾತನಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಲಿಮಿನೇಷನ್ ಎಚ್ಚರಿಕೆಯನ್ನು ಸುದೀಪ್ ನೀಡಿದರು.
ಇದನ್ನೂ ಓದಿ:ಶೋರೂಂ ಒಪನ್ ಮಾಡಲು ಸುದೀಪ್ಗೆ 50 ಲಕ್ಷ ರೂಪಾಯಿ ಆಫರ್
ಅಸಲಿಗೆ ಕಳೆದ ವಾರವೂ ಸಹ ಜಾನ್ವಿಗೆ ಇದೇ ಮಾದರಿಯ ಎಚ್ಚರಿಕೆಯನ್ನು ಸುದೀಪ್ ನೀಡಿದ್ದರು. ಮನೆ ಮಂದಿಯದ್ದೂ ಸಹ ಜಾನ್ವಿ ಬಗ್ಗೆ ಇದೇ ದೂರಾಗಿದೆ. ಜಾನ್ವಿ, ಅಶ್ವಿನಿಯ ನೆರಳಾಗಿರುತ್ತಾರೆ, ಅಶ್ವಿನಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಅಶ್ವಿನಿ ಅವರಿಗೆ ಬಕೆಟ್ ಹಿಡಿಯುತ್ತಾರೆ. ಅಶ್ವಿನಿ ಹೇಳಿದಂತೆ ಕೇಳುತ್ತಾರೆ, ಅಶ್ವಿನಿಯ ಹೊರತಾಗಿ ಇನ್ಯಾರ ಜೊತೆಗೂ ಮಾತನಾಡುವುದಿಲ್ಲ ಎಂದು. ಈಗ ಮತ್ತೊಮ್ಮೆ ಸುದೀಪ್ ಎದುರು ಅದು ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಆದರೂ ಜಾನ್ವಿ ಅವರು ಇದನ್ನು ಬದಲಾಯಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ