
ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಜಂಟಿ ಹಾಗೂ ಒಂಟಿ ಎಂದು ವಿಂಗಡಿಸಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಗಿತ್ತು. ಎಲ್ಲರಿಗೂ ಬಿಗ್ ಬಾಸ್ ಮನೆ ಹೊಸದು. ಹೀಗಾಗಿ, ತಪ್ಪುಗಳಿ ನಡೆದಿವೆ. ಈ ವಾರದ ಆಟ ನೋಡಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಜಂಟಿಗಳನ್ನು ಬೈದರು. ಆ ಬಳಿಕ ಜಂಟಿಗಳ ಜೊತೆ ಒಂಟಿಗಳಿಗೂ ಅವರು ಬೈದರು. ಅಷ್ಟಕ್ಕೂ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.
ಈ ವಾರ ದೊಡ್ಮನೆಯಲ್ಲಿ ಒಂದು ಟಾಸ್ಕ್ ನೀಡಲಾಯಿತು. ಒಂಟಿಗಳು ಅರಸ-ಅರಸಿಯರಾದರೆ, ಜಂಟಿಗಳು ಸೇವಕರಾಗಿದ್ದರು. ಮನೆಯ ಕೆಲಸವನ್ನು ಜಂಟಿಗಳು ಮಾಡಬೇಕಿತ್ತು. ಆಗ ಒಂದು ಘಟನೆ ನಡೆಯಿತು. ಒಂಟಿಗಳು ತಮ್ಮ ತಂಡದ ಅಶ್ವಿನಿ ಅವರಿಗೆ ರಾಜಮಾತೆ ಎಂಬ ಪಟ್ಟ ಕೊಟ್ಟರು. ಅವರು ಹೇಳಿದಂತೆ ನಡೆದುಕೊಂಡರು. ಇದು ಸುದೀಪ್ಗೆ ಇಷ್ಟ ಆಗಿಲ್ಲ.
‘ರಾಜಮಾತೆಯನ್ನು ನೇಮಿಸಿ ಎಂದು ಬಿಗ್ ಬಾಸ್ ಹೇಳಿದ್ರಾ? ಆದರೂ ನೀವು ರಾಜಮಾತೆಯನ್ನು ಆಯ್ಕೆ ಮಾಡಿಕೊಂಡಿರಿ. ಹೀಗಿರುವಾಗ ನಿಮ್ಮ ಇಂಡಿಶ್ಯುವಾಲಿಟಿ ಎಲ್ಲಿದೆ? ರಾಜಮಾತೆ ಎಂದು ನಿಮಗೆ ನೀವೇ ಆಯ್ಕೆ ಮಾಡಿಕೊಂಡಿರಿ. ಒಂಟಿಯವರು ಜಂಟಿಯವರಿಗಿಂತ ಕೆಟ್ಟದಾಗಿ ಆಡಿದಿರಿ. ಜಂಟಿಯವರಾದರೆ ಇಬ್ಬರೇ ಚೈನ್ ಕಟ್ಟಿಕೊಂಡಿದ್ದಾರೆ. ಇಲ್ಲಿ ಆರು ಜನ ಚೈನ್ ಹಾಕ್ಕೊಂಡು ಆಡಿದಂತೆ ಕಂಡುಬಂತು. ಇದರಲ್ಲಿ ಅಶ್ವಿನಿ ಅವರ ತಪ್ಪಿಲ್ಲ. ಎಲ್ಲರೂ ಸೇರಿ ಅವರಿಗೆ ಪಟ್ಟ ಕೊಟ್ಟರು. ಅವರು ಎಂಜಾಯ್ ಮಾಡಿದರು’ ಎಂದು ಸುದೀಪ್ ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ 12: ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?
ಆ ಬಳಿಕ ಮಲ್ಲಮ್ಮ ಅವರನ್ನು ಹೊಗಳಿದರು ಸುದೀಪ್. ‘ಇಡೀ ಮನೆಯಲ್ಲಿ ಮಲ್ಲಮ್ಮ ಮಾತ್ರ ಚೆನ್ನಾಗಿ ಆಡಿದರು. ಅವರು ಒಂಟಿಯಾಗಿ ಆಡಿದರು. ಉಳಿದವರು ಇಡೀ ವಾರವನ್ನು ವೇಸ್ಟ್ ಮಾಡಿದರು’ ಎಂದು ಸುದೀಪ್ ಹೇಳಿದರು. ಮಲ್ಲಮ್ಮ ಅವರು ಯಾರ ಸಹಾಯವೂ ಇಲ್ಲದೇ ದೊಡ್ಮನೆಯಲ್ಲಿ ಆಟ ಆಡುತ್ತಿದ್ದಾರೆ. ಈ ವಾರ ಮೊದಲು ಸೇವ್ ಆದವರ ಪೈಕಿ ಮಲ್ಲಮ್ಮ ಮೊದಲಿಗರು ಅನ್ನೋದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ