ಆರನೇ ವಾರ ಬಿಗ್ ಬಾಸ್ ಮನೆಯಿಂದ ಪ್ರಮುಖರೇ ಔಟ್; ಇಲ್ಲಿದೆ ವಿವರ

ಬಿಗ್ ಬಾಸ್ ಕನ್ನಡ ಸೀಸನ್ 13ರ ಆರನೇ ವಾರದಲ್ಲಿ ನಟಿ ಕಾವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಕಡಿಮೆ ಮತಗಳು, ಸೈಲೆಂಟ್ ಆಟ ಹಾಗೂ ಜಗಳಗಳಿಂದ ದೂರ ಉಳಿದಿದ್ದೇ ಅವರ ಈ ನಿರ್ಗಮನಕ್ಕೆ ಪ್ರಮುಖ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಅವರು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಆರನೇ ವಾರ ಬಿಗ್ ಬಾಸ್ ಮನೆಯಿಂದ ಪ್ರಮುಖರೇ ಔಟ್; ಇಲ್ಲಿದೆ ವಿವರ
ಸೋನಿಕಾ-ಕಾವ್ಯಾ
Edited By:

Updated on: Oct 18, 2026 | 10:25 PM

ಮುಖ್ಯಾಂಶಗಳು

  • ಕಾವ್ಯಾ ಗೌಡ ಎಲಿಮಿನೇಷನ್‌ಗೆ ಅಸಲಿ ಕಾರಣಗಳೇನು?
  • ಜನಪ್ರಿಯ ನಟಿಗೆ ಸೈಲೆಂಟ್ ಆಟವೇ ಮುಳುವಾಯಿತೇ ?
  • ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲಿನ ಮುಂದಿನ ನಡೆ ಏನು?

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಆರನೇ ವಾರದ ಎಲಿಮಿನೇಷನ್ ಪೂರ್ಣಗೊಂಡಿದೆ. ಈ ವಾರ ಪ್ರಮುಖರೇ ಎಲಿಮಿನೇಟ್ ಆಗಿದ್ದಾರೆ. ಕಾವ್ಯಾ ಗೌಡ ಅವರು ಈ ವಾರ ಹೊರ ಹೋದ ಸ್ಪರ್ಧಿಯಾಗಿದ್ದಾರೆ. ಅವರ ಹೊರ ಹೋಗುವಿಕೆಯಿಂದ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಬಲ ಕೊಂಚ ಕಡಿಮೆ ಆಗಿದೆ ಎನ್ನಬಹುದು.

ಕಲರ್ಸ್ ಕನ್ನಡದ ‘ಭಾಗ್ಯ ಲಕ್ಷ್ಮಿ’ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಕಲರ್ಸ್ ಕನ್ನಡದ ಧಾರಾವಾಹಿ ಬಳಿಕ ಬಿಗ್ ಬಾಸ್ ಮನೆಗೆ ಹೋಗುವ ದೊಡ್ಡ ಅವಕಾಶ ದೊರೆಯಿತು. ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿದ್ದರು. ಈಗ ಅವರ ಆಟ ಕೊನೆಯಾಗಿದೆ.

Loading...

ಈ ವಾರ ಬಿಗ್ ಬಾಸ್ ಮನೆಯಲ್ಲಿ ಆಸಿಯಾ, ಸೋನಿಕಾ ಗೌಡ, ಗಾನವಿ, ಗಗನ್, ಜಗದೀಶ್, ಕಾವ್ಯಾ, ತಾಂಡವ್ ರಾಮ್ ನಾಮಿನೇಟ್ ಆಗಿದ್ದರು. ಈ ಪೈಕಿ ಕಾವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಕಡಿಮೆ ಮತಗಳು ಸಿಕ್ಕಿವೆ.

ಕಾವ್ಯಾ ಗೌಡ ಎಲಿಮಿನೇಟ್ ಆಗಲು ಕಾರಣಗಳನ್ನು ನೋಡುವುದಾದರೆ:

ಆ್ಯಕ್ಟೀವ್ ಆಗಿರಲಿಲ್ಲ: ಉಳಿದ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ಕಾವ್ಯಾ ಗೌಡ ಅವರು ಡಲ್ ಆಗಿ ಆಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಕಡಿಮೆ ಮತಗಳು ಬಿದ್ದವು.

ಉಸ್ತುವಾರಿ: ಕಳೆದ ವಾರದ ಆಟದಲ್ಲಿ ಅವರು ಉಸ್ತುವಾರಿ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲರಾದರು. ಇದು ಚರ್ಚೆ ಹುಟ್ಟುಹಾಕಿತ್ತು. ಅವರ ಆಟವನ್ನು ಅನೇಕರು ಪ್ರಶ್ನೆ ಮಾಡಿದರು. ಇದು ಕೂಡ ಅವರಿಗೆ ಕಡಿಮೆ ಮತ ಬೀಳಲು ಕಾರಣ.

ಖಡಕ್ ಮಾತುಗಳು ಎಂದರೆ ಕಾವ್ಯಾಗೆ ಇಷ್ಟ ಆಗುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅವರು ಜಗಳ ಆದಾಗ ಸೈಲೆಂಟ್ ಆಗಿರುತ್ತಿದ್ದರು. ಇದು ಅವರ ಆಟಕ್ಕೆ ಹಿನ್ನಡೆ ಆಗಿದೆ ಎಂದು ಹೇಳಬಹುದು.

ಇದನ್ನೂ ಓದಿ: ‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು

ಮುಂದೇನು?: ಕಾವ್ಯಾ ಗೌಡ ಅವರು ಮುಂದಿನ ದಿನಗಳಲ್ಲಿ ಧಾರಾವಾಹಿಗಳಲ್ಲಿ ನಟಿಸಬಹುದು. ಹೆಚ್ಚಿನ ಆಫರ್ ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us