ಬಿಗ್ ಬಾಸ್ನಲ್ಲಿ (Bigg Boss) ಪ್ರತಿ ವಾರ ಕ್ಯಾಪ್ಟನ್ಸಿ ಟಾಸ್ಕ್ ಇರುತ್ತದೆ. ಈ ಟಾಸ್ಕ್ಗೆ ಸ್ಪರ್ಧಿಗಳ ಆಯ್ಕೆ ಮಾಡಲು ಮನೆ ಮಂದಿಗೆ ನಾನಾ ಟಾಸ್ಕ್ ನೀಡಲಾಗುತ್ತದೆ. ಕ್ಯಾಪ್ಟನ್ ಆದ್ರೆ ಸ್ಪರ್ಧಿಗಳಿಗೆ ಇಮ್ಯೂನಿಟಿ ಸಿಗುತ್ತದೆ. ಈ ಮೂಲಕ ಸ್ಪರ್ಧಿಗಳು ಎಲಿಮಿನೇಷನ್ಗೆ ನಾಮಿನೇಟ್ ಆಗದೆ ಒಂದು ವಾರ ಉಳಿದುಕೊಳ್ಳಬಹುದು. ಆದರೆ, ಈ ವಾರ ಬಿಗ್ ಬಾಸ್ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಕ್ಯಾನ್ಸಲ್ ಆಗಿದೆ! ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಅಪರೂಪದ ನಿರ್ಧಾರ ಹೊರ ಬಿದ್ದಿದೆ.
ಈ ಬಾರಿ ಎರಡು ಟೀಂ ಮಾಡಿ ಟಾಸ್ಕ್ ಆಡಿಸಲಾಗಿತ್ತು. ಈ ಆಟದ ವೇಳೆ ಸಾಕಷ್ಟು ಕಿತ್ತಾಟ ಆಗಿದೆ. ಕೆಲವರು ಮೈಕೈಗೆ ಗಾಯ ಮಾಡಿಕೊಂಡಿದ್ದಾರೆ. ಅರುಣ್ ಸಾಗರ್ ಅವರ ಬೆರಳು ಮುರಿದಿದೆ. ಅನೇಕ ಬಾರಿ ರೂಲ್ಸ್ ಬ್ರೇಕ್ ಆಗಿದೆ. ಈ ಕಾರಣಕ್ಕೆ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎರಡೂ ಟೀಂಗಳು ಸಮಬಲ ಸಾಧಿಸಿದ್ದವು. ಹೀಗಾಗಿ, ಕ್ಯಾಪ್ಟನ್ಸಿ ಟಾಸ್ಕ್ಗೆ ಯಾವ ತಂಡಗಳೂ ಆಯ್ಕೆ ಆಗಿರಲಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಹೊಸ ಘೋಷಣೆ ಮಾಡಿದರು.
‘ಎರಡೂ ತಂಡಗಳು ಸಮಬಲ ಸಾಧಿಸಿವೆ. ಹೀಗಾಗಿ ಪ್ರತಿ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡಿ’ ಎಂದು ಬಿಗ್ ಬಾಸ್ ಸೂಚಿಸಿದರು. ಆದರೆ, ಒಮ್ಮತದ ನಿರ್ಧಾರ ಬರಲೇ ಇಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಎದುರು ಸ್ಪರ್ಧಿಗಳು ಬೇಡಿಕೆ ಇಟ್ಟರು. ‘ಒಮ್ಮತದ ನಿರ್ಧಾರ ಬಂದಿಲ್ಲ. ಹೀಗಾಗಿ, ನಿಮಗೆ ಆಯ್ಕೆ ನೀಡುತ್ತಿದ್ದೇವೆ’ ಎಂದು ಸ್ಪರ್ಧಿಗಳು ಬಿಗ್ ಬಾಸ್ಗೆ ಹೇಳಿದರು.
ಬಿಗ್ ಬಾಸ್ ಯಾರಿಗಾದರೂ ಅವಕಾಶ ನೀಡಬಹುದು ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ, ಅದು ಉಲ್ಟಾ ಹೊಡೆದಿತ್ತು. ‘ಒಮ್ಮತದ ನಿರ್ಧಾರ ಬರದ ಕಾರಣ ಈ ವಾರ ಯಾವುದೇ ಕ್ಯಾಪ್ಟನ್ಸಿ ಟಾಸ್ಕ್ ಇರುವುದಿಲ್ಲ. ಹೀಗಾಗಿ ಮುಂದಿನ ವಾರಕ್ಕೆ ಯಾರೂ ಕ್ಯಾಪ್ಟನ್ ಇರುವುದಿಲ್ಲ. ಯಾರಿಗೂ ಇಮ್ಯೂನಿಟಿ ಇರುವುದಿಲ್ಲ’ ಎಂದರು ಬಿಗ್ ಬಾಸ್.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ
ಇದರಿಂದ ಮನೆಯವರಿಗೆ ಅನೇಕರಿಗೆ ಖುಷಿ ಆಗಿದೆ. ‘ಇನ್ನು ಮುಂದೆ ಒಂದು ವಾರಗಳ ಕಾಲ ನಾವೆಲ್ಲರೂ ಸಮಾನರು. ಇದು ಖುಷಿಯ ವಿಚಾರ’ ಎಂದರು ಅರುಣ್ ಸಾಗರ್.
Published On - 9:56 pm, Fri, 18 November 22