
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ಗಳು ಎದುರಾಗುತ್ತಾ ಇವೆ. ಮೂರನೇ ವಾರಕ್ಕೆ ಸಾಕಷ್ಟು ತಿರುವುಗಳು ಎದುರಾಗಿವೆ. ಯಾರೂ ಊಹಿಸದ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಇದರಿಂದ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಇದು ಆರಂಭ ಮಾತ್ರ ಎಂದು ಹೇಳಲಾಗುತ್ತಾ ಇದೆ. ಈ ವಾರ ಇನ್ನಷ್ಟು ಟ್ವಿಸ್ಟ್ಗಳನ್ನು ನಿರೀಕ್ಷಿಸಬಹುದು.
ಬಿಗ್ ಬಾಸ್ ಮನೆಯಲ್ಲಿ ಎಂದಿಗೂ ಎಲಿಮಿನೇಷನ್ ನಡೆಯೋದು ಜನರ ವೋಟ್ ಆಧರಿಸಿಯೇ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಯಾರನ್ನೋ ಹೊರ ಕಳುಹಿಸುವ ಅಧಿಕಾರವನ್ನು ಬಿಗ್ ಬಾಸ್ ಈವರೆಗೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ ಎಂಬುದು ಎಲ್ಲರ ನಂಬಿಕೆ ಆಗಿತ್ತು. ಆದರೆ, ಈ ವಾರ ಅದಕ್ಕೆ ಅಪವಾದ ಎಂಬ ಘಟನೆ ನಡೆದಿದೆ. ನಾಲ್ಕು ಸ್ಪರ್ಧಿಗಳ ಶೇ.50ರಷ್ಟು ವೋಟ್ ಕಿತ್ತುಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದರು.
ಇಷ್ಟಕ್ಕೆ ನಿಂತಿಲ್ಲ. ಆ ನಾಲ್ವರನ್ನು ಮಾತ್ರ ನಾಮಿನೇಷನ್ಗೆ ನಿಲ್ಲಿಸಲಾಯಿತು. ಇದು ಅನೇಕರಿಗೆ ಅಚ್ಚರಿ ತಂದಿದೆ. ಈ ಪೈಕಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿರುವ ತಾಂಡವ್ ರಾಮ್ ಅವರು ಎಲಿಮಿನೇಟ್ ಆಗಿದ್ದಾರೆ. ಇದು ಅನ್ಫೇರ್ ಎಂದು ಅನೇಕರಿಗೆ ಅನಿಸಿದೆ. ಅವರು ಹೊರ ಹೋದರೂ, ಇದೇ ವಾರ ಅವರನ್ನು ಮತ್ತೆ ತರುವ ಎಲ್ಲಾ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಬರ್ತಾರೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು?
ಇದನ್ನೂ ಓದಿ: ‘ಬಿಗ್ ಬಾಸ್ ಇದು ನ್ಯಾಯಸಮ್ಮತವಲ್ಲ’; ತಾಂಡವ್ ಎಲಿಮಿನೇಷನ್ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ ಗಗನ್
‘ಬಿಗ್ ಬಾಸ್ ಕನ್ನಡ ಸೀಸನ್ 13’ಅಲ್ಲಿ ಈ ವಾರ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ವೈಲ್ಡ್ ಕಾರ್ಡ್ ಮೂಲಕ ಬರೋದು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಇವರ ಜೊತೆ ತಾಂಡವ್ ರಾಮ್ ಕೂಡ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Fri, 25 September 26