
ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಇತ್ತೀಚೆಗೆ ಕಳೆದುಕೊಂಡರು. ಅವರ ತಾಯಿ ಸರೋಜಾ ಅವರು ನಿಧನ ಹೊಂದಿದರು. ಎರಡು ವಾರಗಳ ಹಿಂದೆ ಬಿಗ್ ಬಾಸ್ ನಡೆಸಿಕೊಡುವಾಗ ತಾಯಿ ಅನಾರೋಗ್ಯದ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತ್ತು. ಶನಿವಾರದ ಎಪಿಸೋಡ್ ನಡೆಸಿಕೊಟ್ಟು ಆ ಬಳಿಕ ಅವರು ದೊಡ್ಮನೆಯಿಂದ ಹೊರ ಬಂದರು. ತಾಯಿ ಕಳೆದುಕೊಂಡ ನೋವಲ್ಲಿ ಕಳೆದ ವಾರ ಅವರು ಬಿಗ್ ಬಾಸ್ ನಡೆಸಿಕೊಟ್ಟಿರಲಿಲ್ಲ. ಈ ವಾರ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡಲು ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಬಂದಿತ್ತು. ಅದಕ್ಕೆ ಬಿಗ್ ಬಾಸ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆ ಜೋರಾಗಿದೆ. ಶನಿವಾರವೂ (ನವೆಂಬರ್ 2) ದೀಪಾವಳಿ ಹಬ್ಬ ಆಚರಣೆ ಇರುತ್ತದೆ. ಹೀಗಾಗಿ ಮನೆಯವರಿಗೆ ಗ್ರ್ಯಾಂಡ್ ಆಗಿ ರೆಡಿ ಆಗೋಕೆ ಅವಕಾಶ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಒಂದನ್ನು ಬಿಗ್ ಬಾಸ್ ನೀಡಿದ್ದರು.
ಚಟುವಟಿಕೆ ಪ್ರಕಾರ ಖಾಸಗಿ ಬಟ್ಟೆ ಕಂಪನಿಯೊಂದರ ಕ್ಯಾಟ್ಲಾಗ್ನ ಕಳುಹಿಸಿಕೊಟ್ಟಿದ್ದರು ಬಿಗ್ ಬಾಸ್. ಅವರಿಷ್ಟದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ವಾರಾಂತ್ಯದ ಎಪಿಸೋಡ್‌ಗೆ ಕಳುಹಿಸಿಕೊಡುವುದಾಗಿ ಸೂಚನೆ ಬಂದಿದೆ. ಇಷ್ಟು ಗ್ರ್ಯಾಂಡ್ ಆಗಿ ವೀಕೆಂಡ್ ಎಪಿಸೋಡ್ ನಡೆಯಲಿದೆ ಎಂದರೆ ಸುದೀಪ್ ಬಂದೇ ಬರುತ್ತಾರೆ ಅನ್ನೋದು ಮನೆಯ ಸದಸ್ಯರ ನಂಬಿಕೆ.
ಕಳೆದ ವೀಕೆಂಡ್ನಲ್ಲಿ ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಫನ್ ಚಟುವಟಿಕೆಗಳು ನಡೆದಿದ್ದವು. ಈ ಬಾರಿ ಸುದೀಪ್ ಅವರೇ ಬರಲಿ ಎಂದು ವೀಕ್ಷಕರು ಹಾಗೂ ಮನೆಯ ಸದಸ್ಯರು ಬಯಸುತ್ತಿದ್ದಾರೆ.
ಇದನ್ನೂ ಓದಿ: ‘ಆ ಎಪಿಸೋಡ್ ನಡೆಸಿಕೊಡದಿದ್ದರೆ ಸುದೀಪ್ ಕೊನೆಯದಾಗಿ ತಾಯಿ ಜೊತೆ ಮಾತನಾಡುತ್ತಿದ್ದರು’; ಕಣ್ಣೀರಲ್ಲಿ ಮನೆ ಮಂದಿ
ಸುದೀಪ್ ಅವರ ತಾಯಿ ನಿಧನದ ವಿಚಾರ ಮನೆಯಲ್ಲಿ ಇರುವವರಿಗೆ ಗೊತ್ತಾಗಿದೆ. ಯೋಗರಾಜ್ ಭಟ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಮನೆಯ ಸದಸ್ಯರಿಗೂ ದುಃಖ ತಂದಿದೆ. ಈ ವಾರ ಸುದೀಪ್ ತಾಯಿ ನೆನಪಲ್ಲಿ ಮೌನಚರಣೆ ನಡೆಸೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.